ಕೊಲ್ಲಂ(ಏ.16): ದೇಶದಾದ್ಯಂತ ಹೇರಲಾಗಿರುವ ಲಾಕ್‌ಡೌನ್ ಸದ್ಯ ಜನ ಸಾಮಾನ್ಯರ ನಿದ್ದೆ ಕಸಿದಿದೆ. ಒಂದೆಡೆ ಹೊರ ಹೋಗಲಾರದೆ ಜನರು ಪರದಾಡುತ್ತಿದ್ದು, ವಾಹನ ಸಂಚಾರಕ್ಕೂ ಬ್ರೇಕ್ ಹಾಕಲಾಗಿದೆ. ಹೀಗಿರುವಾಗ ಕೇರಳದ ಕೊಲ್ಲಂನಲ್ಲಿ ನಡೆದ ಘಟನೆಯೊಂದು ಸದ್ಯ ದೇಶದಾದ್ಯಂತ ಸೌಂಡ್ ಮಾಡುತ್ತಿದೆ. ಇಲ್ಲೊಬ್ಬ ವ್ಯಕ್ತಿ ತನ್ನ ವೃದ್ಧ ತಂದೆ ತಾಯಿಯನ್ನು ಆಟೋದಲ್ಲಿ ಕರೆದೊಯ್ಯುತ್ತಿದ್ದಾಗ ಪೊಲೀಸರು ಆತನನ್ನು ತಡೆದಿದ್ದಾರೆ. ಹೀಗಾಗಿ ಬೇರೆ ವಿಧಿ ಇಲ್ಲದ ಮಗ ಕಾಯಿಲೆಯಿಂದ ಬಳಲುತ್ತಿದ್ದ ತಂದೆಯನ್ನು ಹೆಗಲ ಮೇಲೆ ಹೊತ್ತುಕೊಂಡೇ ತೆರಳಿದ್ದಾನೆ.

ಅಪಘಾತದಲ್ಲಿ ತಾಯಿ ಸಾವು: ಅಂತ್ಯಕ್ರಿಯೆಗೆ ತೆರಳಲಿಕ್ಕಾಗದ ವಿಕಲಚೇತನ ಪುತ್ರನ ಪರದಾಟ !

ನೆರೆಯ ಕೇರಳದ ಕೊಲ್ಲಂ ಜಿಲ್ಲೆಯ ಕುಳತ್ತುಪುಝದಲ್ಲಿ ಈ ಘಟನೆ ನಡೆದಿದೆ. ಪುನಲೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 65ರ ವರ್ಷದ ವೃದ್ಧ ತಂದೆಯನ್ನು ಡಿಸ್ಟಾರ್ಜ್ ಮಾಡಿಸಿದ್ದ ಮಗ, ತನ್ನ ತಾಯಿಯೊಂದಿಗೆ ಆಸ್ಪತ್ರೆಯಿಂದ ಆಟೋ ಮಾಡಿಸಿಕೊಂಡು ಮನೆಗೆ ಸಾಗುತ್ತಿದ್ದ. ಆದರೆ ದಾರಿ ಮಧ್ಯೆ ಆಟೋ ತಡೆದ ಪೊಲೀಸರು, ವೃದ್ಧ ದಂಪತಿಯನ್ನು ಕೆಳಗಿಳಿಸಿದರು. ಎಷ್ಟೇ ಮನವಿ ಮಾಡಿದರೂ ಪೊಲೀಸರು ಕಿವಿಗೂಡಲಿಲ್ಲ. ಆಸ್ಪತ್ರೆ ದಾಖಲೆ ತೋರಿಸಿದರೂ ಪೊಲೀಸರು ಕನಿಕರ ತೋರಿಸಲಿಲ್ಲ. ಪೊಲೀಸರು ಕರುಣೆ ತೋರದಾಗ ಬೇರೆ ದಾರಿ ಕಾಣದ ಮಗ ಕಾಯಿಲೆಯಿಂದ ಬಳುತ್ತಿದ್ದ ತನ್ನ ತಂದೆಯನ್ನು ಹೊತ್ತುಕೊಂಡೇ ಸಾಗಿದ್ದಾನೆ. ಈ ವೇಳೆ ವೃದ್ಧ ತಾಯಿ ಕೂಡಾ ಮಗನೊಂದಿಗೆ ಹೆಜ್ಜೆ ಹಾಕಿದ್ದಾಳೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಪೊಲೀಸರ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಕ್ಯಾಡ್‌ಬರಿ ಸಂಸ್ಥೆಯಿಂದ 71 ಟನ್‌ ಬಿಸ್ಕಟ್‌, ಚಾಕಲೇಟ್‌ ವಿತರಣೆ!

ಅಲ್ಲದೇ ಈ ಪ್ರಕರಣ ಸಂಬಂಧ ಕೇರಳ ರಾಜ್ಯ ಮಾನವ ಹಕ್ಕುಗಳ ಆಯುಕ್ತ ದೂರು ದಾಖಲಿಸಿದೆ. ಕೊರೋನಾ ತಡೆಯುವ ನಿಟ್ಟಿನಲ್ಲಿ ಹೇರಲಾಗಿರುವ ಲಾಕ್‌ಡೌನ್ ವೇಳೆ ನಿಯಮ ಪಾಲಿಸುವುದು ಸರಿ, ಹೀಗೆಂದು ಅಮಾನವೀಯವಾಗಿ ವರ್ತಿಸುವುದು ಮಾತ್ರ ಸರಿಯಲ್ಲ.
"