ರಾವಣ ಪುಷ್ಪಕ ವಿಮಾನ, ಗಣೇಶನ ಪ್ಲಾಸ್ಟಿಕ್ ಸರ್ಜರಿ ಎಲ್ಲಾ ಮೂಢನಂಬಿಕೆ ಎಂದಿದ್ದಕ್ಕೆ ಶಂಶೀರ್ ಕ್ಷಮೆ ಕೇಳಲ್ಲ: ಸಿಪಿಎಂ
ವಿಶ್ವದಲ್ಲಿ ಮೊದಲ ಪ್ಲಾಸ್ಟಿಕ್ ಸರ್ಜರಿ ನಡೆಸಿದ್ದು ಗಣೇಶನಿಗೆ, ರಾವಣ ಪುಷ್ಪಕ ವಿಮಾನ ಬಳಸುತ್ತಿದ್ದ ಎಂಬುದೆಲ್ಲಾ ಮೂಢನಂಬಿಕೆ ಎಂಬ ತಮ್ಮ ಹೇಳಿಕೆ ಕುರಿತು ಕೇರಳ ವಿಧಾನಸಭೆ ಸ್ಪೀಕರ್ ಎ.ಎನ್.ಶಂಶೀರ್ ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ ಎಂದು ಸಿಪಿಎಂ ಹೇಳಿದೆ.
ತಿರುವನಂತಪುರ: ವಿಶ್ವದಲ್ಲಿ ಮೊದಲ ಪ್ಲಾಸ್ಟಿಕ್ ಸರ್ಜರಿ ನಡೆಸಿದ್ದು ಗಣೇಶನಿಗೆ, ರಾವಣ ಪುಷ್ಪಕ ವಿಮಾನ ಬಳಸುತ್ತಿದ್ದ ಎಂಬುದೆಲ್ಲಾ ಮೂಢನಂಬಿಕೆ. ಇದರ ಬದಲು ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸಬೇಕು ಎಂಬ ತಮ್ಮ ಹೇಳಿಕೆ ಕುರಿತು ಕೇರಳ ವಿಧಾನಸಭೆ ಸ್ಪೀಕರ್ ಎ.ಎನ್.ಶಂಶೀರ್ ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ. ಬೇಕಿದ್ದರೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂದು ಆಡಳಿತಾರೂಢ ಸಿಪಿಎಂ ಹೇಳಿದೆ. ಈ ಕುರಿತು ಹೇಳಿಕೆ ನೀಡಿರುವ ಸಿಪಿಎಂ ನಾಯಕರು, ಸಭಾಪತಿಗಳು ನಿಂದನಾತ್ಮಕ ಹೇಳಿಕೆಗಳೇನು ನೀಡಿಲ್ಲ. ಅವರು ಶಿಕ್ಷಣವನ್ನು ವೈಜ್ಞಾನಿಕ ಅಂಶಗಳ ಆಧಾರದಲ್ಲಿ ಇರಬೇಕು ಎಂದು ಹೇಳಿದ್ದರು. ಆದರೆ ಕಾಂಗ್ರೆಸ್ ಹಾಗೂ ಬಿಜೆಪಿ ಇದಕ್ಕೆ ಕೋಮು ಬಣ್ಣ ಲೇಪಿಸಿ ಗಲಭೆ ಸೃಷ್ಟಿಸುತ್ತಿದೆ. ಕಾಂಗ್ರೆಸ್ ತಮ್ಮ ಮೊದಲ ಪ್ರಧಾನಿ ನೆಹರು ಅವರ ತತ್ವಕ್ಕೆ ವಿರುದ್ಧವಾಗಿ ನಡೆದುಕೊಂಡಿದೆ ಎಂದು ಆರೋಪಿಸಿದರು.
ಖಾಕಿ ತೊಟ್ಟು ಪೊಲೀಸ್ ಸ್ಟೇಷನ್‌ನಲ್ಲಿ ಕೋಳಿ ಸಾರು ಮಾಡಿದ ವಿಡಿಯೋ ವೈರಲ್, ನೋಟಿಸ್ ನೀಡಿದ ಐಜಿ!
ಕೇರಳದ ಈ ಸುಂದರ ಹಳ್ಳಿಯೀಗ ಪ್ರವಾಸಿಗರ ಸ್ವರ್ಗ, ಊರವರಿಗೆ ಮಾತ್ರ ನರಕ!