Asianet Suvarna News Asianet Suvarna News

ಆನ್‌ಲೈನ್‌ ಜೂಜು ನಿಷೇಧ: ಸರ್ಕಾರದ ಅಧಿಸೂಚನೆ ಕೇರಳ ಹೈಕೋರ್ಟಿಂದ ವಜಾ!

* ಇಂಥ ನಿರ್ಧಾರ ಏಕಪಕ್ಷೀಯ, ಅಸಾಂವಿಧಾನಿಕ

* ಆನ್‌ಲೈನ್‌ ಜೂಜು ನಿಷೇಧ: ಸರ್ಕಾರದ ಅಧಿಸೂಚನೆ ಕೇರಳ ಹೈಕೋರ್ಟಿಂದ ವಜಾ

Kerala High Court strikes down proposed government ban on online rummy pod
Author
Bangalore, First Published Sep 28, 2021, 8:43 AM IST

ನವದೆಹಲಿ(ಸೆ.28): ರಾಜ್ಯದಲ್ಲಿ ಆನ್‌ಲೈನ್‌ ಜೂಜು(Online Gambling) ನಿಷೇಧಿಸಿ ಕೇರಳ ಸರ್ಕಾರ(Kerala Govt) ಹೊರಡಿಸಿದ್ದ ಅಧಿಸೂಚನೆಯನ್ನು ಕೇರಳ ಹೈಕೋರ್ಟ್‌(Kerala HighCourt) ಸೋಮವಾರ ವಜಾ ಮಾಡಿದೆ.

ಕರ್ನಾಟಕ ಸರ್ಕಾರ(karnataka Govt) ಕೂಡಾ ಆನ್‌ಲೈನ್‌ ಜೂಜು(Online Gambling) ಸೇರಿದಂತೆ ಎಲ್ಲಾ ರೀತಿಯ ಆನ್‌ಲೈನ್‌ ಜೂಜು ನಿಷೇಧಿಸುವ ವಿಧೇಯಕವನ್ನು ಇತ್ತೀಚೆಗೆ ಕರ್ನಾಟಕದ ವಿಧಾನ ಮಂಡಲ ಅಂಗೀಕರಿಸಿದ ಬೆನ್ನಲ್ಲೇ, ನೆರೆಯ ಕೇರಳದಲ್ಲಿ ಹೈಕೋರ್ಟ್‌ನಿಂದ ಇಂಥ ಆದೇಶ ಹೊರಬಿದ್ದಿದೆ.

ಕಳೆದ ಫೆಬ್ರುವರಿ ತಿಂಗಳಲ್ಲಿ ಎಲ್ಲಾ ಆನ್‌ಲೈನ್‌ ಜೂಜು ನಿಷೇಧಿಸುವ ಸಂಬಂಧ ಕೇರಳ ಸರ್ಕಾರ, ‘1960ರ ಗೇಮಿಂಗ್‌ ಕಾಯ್ದೆಗೆ ತಿದ್ದುಪಡಿ ತಂದು ಅಧಿಸೂಚನೆ ಹೊರಡಿಸಿತ್ತು. ಆನ್‌ಲೈನ್‌ ಜೂಜು ಹಣಕಾಸಿನ ಸಮಸ್ಯೆ ಹಾಗೂ ಆತ್ಮಹತ್ಯೆಗೆ ಕಾರಣವಾಗುತ್ತದೆ ಎಂದು ಸರ್ಕಾರ ಕಾರಣ ನೀಡಿತ್ತು.

ಆದರೆ ಇದನ್ನು ಪ್ರಶ್ನಿಸಿ 4 ಗೇಮಿಂಗ್‌ ಕಂಪೆನಿಗಳು ಹೈಕೋರ್ಟ್‌ ಮೊರೆ ಹೋಗಿತ್ತು. ‘ಸುಪ್ರೀಂಕೋರ್ಟ್‌ ಸೇರಿದಂತೆ ಹಲವು ಹೈಕೋರ್ಟ್‌ಗಳು ಇದು ಕೌಶಲ್ಯಕ್ಕೆ ಸಂಬಂಧಿಸಿದ ಗೇಮ್‌ ಎಂದು ಹೇಳಿದೆ. ಯಶಸ್ಸು ಹೆಚ್ಚಿನ ಪ್ರಮಾಣದಲ್ಲಿ ಕೌಶಲ್ಯವನ್ನು ಅಲವಂಬಿಸಿರುವ ಸ್ಪರ್ಧೆಗಳು ಜೂಜು ಎಂದು ಪರಿಗಣಿತವಾಗುವುದಿಲ್ಲ ಎಂದು ಸುಪ್ರೀಂಕೋರ್ಟ್‌ ಕೂಡಾ ಹೇಳಿದೆ.

ಹೀಗಾಗಿ ಆನ್‌ಲೈನ್‌ ಜೂಜು ನಿಷೇಧಿಸಬಾರದು’ ಎಂದು ವಾದಿಸಿತ್ತು. ಈ ವಾದ ಆಲಿಸಿದ ಕೇರಳ ಹೈಕೋರ್ಟ್‌, ಆನ್‌ಲೈನ್‌ ಜೂಜು ನಿಷೇಧಿಸುವ ಕೇರಳ ಸರ್ಕಾರದ ಆದೇಶ ಏಕಪಕ್ಷೀಯ ಮತ್ತು ಅಸಾಂವಿಧಾನಿಕ ಎಂದು ಹೇಳಿ ಅಧಿಸೂಚನೆ ವಜಾಗೊಳಿಸಿತು.

Follow Us:
Download App:
  • android
  • ios