ಕೇರಳ ಪದ್ಮನಾಭ ದೇವಸ್ಥಾನ ಬಾಗಿಲ ಎದುರೇ ಚಿಕನ್ ಬಿರಿಯಾನಿ ಹಂಚಿ ಅಪವಿತ್ರಗೊಳಿಸಿದ ಅಧಿಕಾರಿ!

ದೇವಸ್ಥಾನದ ಸಮಿತಿಯಲ್ಲಿರುವ ಸರ್ಕಾರಿ ಅಧಿಕಾರಿ ತನ್ನ ಸಂಭ್ರಮಾಚರಣೆಗೆ ದೇವಸ್ಥಾನದ ಆವರಣ ಉತ್ತರ ಪ್ರವೇಶ ದ್ವಾರದ ಬಳಿಕ ಚಿಕನ್ ಬಿರಿಯಾನಿ ಹಂಚಿ ಇದೀಗ ಭಕ್ತರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಈ ಪ್ರಕರಣ ಕೇರಳ ಹೈಕೋರ್ಟ್‌ ಮೆಟ್ಟಿಲೇರಿದೆ.
 

Kerala High court hear plea on chicken biriyani served anantha padmanabhaswamy temple premise ckm

ತಿರುವನಂತಪುರಂ(ಜು.25) ಕೇರಳ ಪದ್ಮನಾಭ ದೇವಸ್ಥಾನ ಇದೀಗ ಮತ್ತೆ ಹೈಕೋರ್ಟ್ ವಿಚಾರಣೆ ಸಂಕಷ್ಟಕ್ಕೆ ಸಿಲುಕಿದೆ. ದೇವಸ್ಥಾನ ಸಮಿತಿಯಲ್ಲಿನ ಸರ್ಕಾರಿ ಅದಿಕಾರಿ ಭಕ್ತರ ನಂಬಿಕೆ, ಆಚರಣೆ, ಪದ್ಧತಿಗೆ ವಿರುದ್ದವಾಗಿ ನಡೆದುಕೊಂಡು ಇದೀಗ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಪದ್ಮನಾಭ ದೇವಸ್ಥಾನದ ಆವರಣದ ಉತ್ತರ ಪ್ರವೇಶ ದ್ವಾರದ ಬಳಿಕ ಅದಿಕಾರಿ ಬಿ ಮಹೇಶ್ ಚಿಕನ್ ಬಿರಿಯಾನಿ ಹಂಚಿದ ಆರೋಪಕ್ಕೆ ಗುರಿಯಾಗಿದ್ದಾರೆ. ಬಿ ಮಹೇಶ್ ಪುತ್ರನಿಗೆ ಸರ್ಕಾರಿ ಉದ್ಯೋಗ ಸಿಕ್ಕ ಸಂಭ್ರಮದಲ್ಲಿ ದೇವಸ್ಥಾನದ ಒಳಗೆ ಚಿಕನ್ ಬಿರಿಯಾನಿ ಹಂಚಿ ದೇವಸ್ಥಾನವನ್ನು ಅಪವಿತ್ರಗೊಳಿಸಿದ್ದಾರೆ.

ಜಸ್ಟಿಸ್ ಅನಿಲ್ ಕೆ ನರೇಂದ್ರನ್ ಹಾಗೂ  ಹರಿಶಂಕರ್ ವಿ ಮೆನನ್ ಅವರಿದ್ದ ಪೀಠ ಈ ಪ್ರಕರಣದ ವಿಚಾರಣೆಯನ್ನು ಜುಲೈ 29ಕ್ಕೆ ನಡೆಸುವುದಾಗಿ ತಿಳಿಸಿದೆ. ಜುಲೈ 6 ರಂದು ದೇವಸ್ಥಾನದ ಸಮಿತಿ ಕಾರ್ಯದರ್ಶಿ ಬಿ ಮಹಿಳೆ ದೇವಸ್ಥಾನದ ಎದುರು ಚಿಕಿನ್ ಬಿರಿಯಾನಿ ಹಂಚಿದ್ದಾರೆ. ಮಹೇಶ್ ಪುತ್ರನಿಗೆ ಕೇರಳ ಸರ್ಕಾರಿ ಕೆಲಸ ಗಿಟ್ಟಿಸಿದ ಸಂಭ್ರಮದಲ್ಲಿ ದೇವಸ್ಥಾನವನ್ನು ಪಾವಿತ್ರ್ಯತೆಯನ್ನು ಕೆಡಿಸಿದ ಆರೋಪಕ್ಕೆ ಗುರಿಯಾಗಿದ್ದಾರೆ.

ಶಿವ ದೇವಸ್ಥಾನದ ಗರ್ಭಗುಡಿ ಪಕ್ಕದಲ್ಲೇ ಜೋಡಿಯ ರೊಮ್ಯಾನ್ಸ್ ದೃಶ್ಯ ಸೆರೆ, ಭಕ್ತರ ಆಕ್ರೋಶ! 

ತಿರುವನಂತಪುರಂದ ಸಿ ಸಾಜಿತ್ ಹಾಗೂ ಇತರ ಐವರು ದೇವಸ್ತಾನ ಪಾವಿತ್ರ್ಯತೆ ಕೆಡಿಸಿರುವ ಕುರಿತು ಹೈಕೋರ್ಟ್‌ನಲ್ಲಿ ದೂರು ಸಲ್ಲಿಸಿದ್ದಾರೆ. ದೇವಸ್ಥಾನದ ಕೆಲ ಸಿಬ್ಬಂದಿಗಳಿಗೆ ಈ ಚಿಕನ್ ಬಿರಿಯಾನಿ ಹಂಚಿದ್ದಾರೆ. ಈ ಕುರಿತು ಹಂಚುತ್ತಿರುವ ಫೋಟೋಗಳು, ದೇವಸ್ಥಾನದ ಕಚೇರಿ ಒಳಗೆ ಚಿಕಿನ್ ಬಿರಿಯಾನಿ ಇಟ್ಟಿರುವ ಬಾಕ್ಸ್ ಫೋಟೋಗಳನ್ನು ಹೈಕೋರ್ಟ್‌ಗೆ ಸಲ್ಲಿಸಲಾಗಿದೆ. ಅಧಿಕಾರಿ ತಮ್ಮ ಅಧಿಕಾರ, ಸರ್ಕಾರದ ಸಿದ್ಧಾಂತಗಳಿಗೆ ಅನುಗುಣುವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಇದು ಹಿಂದೂ ಸಂಪ್ರದಾಯ, ದೇವಸ್ಥಾನ ನೀತಿಗೆ ವಿರುದ್ಧವಾಗಿದೆ. ದೇವಸ್ಥಾನ ಪವಿತ್ರತೆ ಹಾಳು ಮಾಡಿದ್ದಾರೆ. ದೇವಸ್ಥಾನದ ಆವರಣದಲ್ಲೇ ಮಾಂಸಾಹಾರ ನಿಷಿದ್ಧವಾಗಿದೆ. ಆದರೆ ಇಲ್ಲಿ ದೇವಸ್ಥಾನ ಉತ್ತರ ದ್ವಾರದ ಬಳಿಯೇ ಮಾಂಸಾಹಾರ ನೀಡಲಾಗಿದೆ ಎಂದು ಹೈಕೋರ್ಟ್‌ಗೆ ಸಲ್ಲಿಸಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದೇವಸ್ಥಾನದ ಕೆಲ ಸಮಿತಿಯಲ್ಲಿರುವ ತಾತ್ಕಾಲಿಕ ಸಿಬ್ಬಂದಿಗಳಿಗೆ ಮಧ್ಯಾಹ್ನದ ವೇಳೆ ಬಿರಿಯಾನಿ ಹಂಚಿದ್ದಾರೆ ಎಂದು ದೇವಸ್ಥಾನ ಸಮಿತಿ ಹೇಳಿದೆ. ನಿಯಮ ವಿರುದ್ಧವಾಗಿ ನಡೆದುಕೊಂಡವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಕೆಲವರನ್ನು ಅಮಾನತು ಮಾಡಲಾಗಿದೆ ಎಂದು ಸಮಿತಿ ಹೇಳಿದೆ. ಆದರೆ ಅತ್ಯಂತ ಪವಿತ್ರ ಕ್ಷೇತ್ರದಲ್ಲಿ ಈ ರೀತಿ ನಿರ್ಲಕ್ಷ್ಯ, ದೇವಸ್ಥಾನದ ಪಾವಿತ್ರ್ಯತೆಯನ್ನು ಅಧಿಕಾರಿಯೇ ಹಾಳು ಮಾಡಿದ್ದು ಇದೀಗ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. 

ಹುಬ್ಬಳ್ಳಿ: ಕುಟುಂಬದಲ್ಲಿನ ಸಾವಿಗೆ ಅರ್ಚಕ ಕಾರಣ, ಹಂತಕ ಬಿಚ್ಚಿಟ್ಟ ಭಯಾನಕ ಸತ್ಯ..!

Latest Videos
Follow Us:
Download App:
  • android
  • ios