ಮಹಿಳೆಯ ನಮ್ರತೆಯನ್ನು ಆಕ್ರೋಶಗೊಳಿಸಲು, ಆಕೆಯ ಉಡುಪಿನ ಕಾರಣದಿಂದ ಲೈಂಗಿಕ ಪ್ರಚೋದನೆ ಅನ್ನೋ ವಾದವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ. ಮಹಿಳೆಯ ಉಡುಪು ಹಾಗೂ ಲೈಂಗಿಕ ಪ್ರಚೋದನೆ ಕುರಿತು ಹೈಕೋರ್ಟ್ ನೀಡಿರುವ ಅಭಿಪ್ರಾಯ ಹೇಳಿದೆ.
ತಿರುವನಂತಪುರಂ(ಅ.13): ಮಹಿಳೆಯರ ಉಡುಪು ಹಾಗೂ ಲೈಂಗಿಕ ಪ್ರಚೋದನೆ ಹಲವು ಬಾರಿ ಚರ್ಚೆಗಳಾಗಿವೆ. ಅತ್ಯಾಚಾರ ವಿಚಾರದ ಚರ್ಚೆ ಬಂದ ಬೆನ್ನಲ್ಲೇ ಮಹಿಳೆಯರ ಉಡುಪಿನ ಕುರಿತು ಚರ್ಚೆಗಳಾಗುತ್ತದೆ. ಆದರೆ ಈ ವಾದವನ್ನು ಹೈಕೋರ್ಟ್ ತಳ್ಳಿ ಹಾಕಿದೆ. ಮಹಿಳೆಯ ಲೈಂಗಿಕ ಪ್ರಚೋದನಕಾರಿ ಉಡುಪು ಧರಿಸಿದ್ದರೆ, ಆಕೆ ಮಾಡುವ ಲೈಂಗಿಕ ಕಿರುಕುಳ ದೂರು ನಿಲ್ಲುವುದಿಲ್ಲ ಎಂದು ಸೆಷನ್ ಕೋರ್ಟ್ ನ್ಯಾಯಾಧೀಶರು ನೀಡಿದ ಅಭಿಪ್ರಾಯವನ್ನು ಕೇರಳ ಹೈಕೋರ್ಟ್ ತೆಗೆದುಹಾಕಿದೆ. ಇಷ್ಟೇ ಅಲ್ಲ ಕೇರಳ ಸಾಮಾಜಿಕ ಹೋರಾಟಗಾರ, ಲೇಖಕ ಸಿವಿಕ್ ಚಂದ್ರನ್‌ಗೆ ನೀಡಿರುವ ಜಾಮೀನು ಎತ್ತಿ ಹಿಡಿದೆ.
ಸಿವಿಕ್ ಚಂದ್ರನ್ ವಿರುದ್ಧ ಲೈಂಗಿಕ ದೌರ್ಜನ್ಯ ದೂರು ಸೆಷನ್ ಕೋರ್ಟ್(Session Court) ಮೆಟ್ಟಿಲೇರಿತ್ತು. ಸಮುದ್ರತಟದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಆರೋಪಿ ಸಿವಿಕ್ ಚಂದ್ರನ್ ತನ್ನನ್ನು ಬಲವಂತವಾಗಿ ಆಲಿಂಗಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರು ನೀಡಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ಸೆಷನ್ ಕೋರ್ಟ್, ದೂರುದಾರೆ ಲೈಂಗಿಕ ಪ್ರಚೋದನೆ ನೀಡುವ ಉಡುಪು ಧರಿಸಿದ್ದರು. ಇದರಿಂದ ಆರೋಪಿ ವಿರುದ್ದ ಸೆಕ್ಷನ್ 354ಎ ನಿಲ್ಲುವುದಿಲ್ಲ. ಹೀಗಾಗಿ ಆರೋಪಿ ಸಿವಿಕ್ ಚಂದ್ರನ್‌ಗೆ ಜಾಮೀನು ನೀಡಲಾಗುವುದು ಎಂದು ಸೆಷನ್ ನ್ಯಾಯಾಧೀಶ ಕೃಷ್ಣಕುಮಾರ್ ಆದೇಶ ನೀಡಿದ್ದರು.
Hijab Case: ಜಾತ್ಯಾತೀತತೆ ಒಂದೇ ಧರ್ಮಕ್ಕೆ ಸೀಮಿತವೇ?: ತೀರ್ಪಿನಲ್ಲಿ ಪ್ರಶ್ನಿಸಿದ ನ್ಯಾ.ಹೇಮಂತ್ ಗುಪ್ತಾ
ಸಿವಿಕ್ ಚಂದ್ರನ್ ಜಾಮೀನು ಪ್ರಶ್ನಿಸಿ ಕೇರಳ ಸರ್ಕಾರ(Lerala) ಹೈಕೋರ್ಟ್(High Court) ಮೆಟ್ಟೆಲೇರಿತ್ತು. ಈ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್ ಕೌಸರ್ ಎಡಪ್ಪಗತ್, ಸೆಷನ್ ನ್ಯಾಯಾಧೀಶರ ವಿವಾದಾತ್ಮಕ ಅಭಿಪ್ರಾಯವನ್ನು ರದ್ದುಗೊಳಿಸಿದರು. ಆದರೆ ಸಿವಿಕ್ ಚಂದ್ರನ್‌ಗೆ(Civc Chandran Case) ನೀಡಿದ ಜಾಮೀನು ಎತ್ತಿ ಹಿಡಿದ ಹೈಕೋರ್ಟ್ ಕೆಲ ವಿಚಾರಗಳ ಮೇಲೆ ಬೆಳಕು ಚೆಲ್ಲಿದೆ. ಮಹಿಳೆಯ ಲೈಂಗಿಕ ಪ್ರಚೋದನಕಾರಿ ಉಡುಪು ಅನ್ನೋ ವಾದನ್ನು ಒಪ್ಪುಲು ಸಾಧ್ಯವಿಲ್ಲ ಎಂದಿದೆ.
ಮಹಿಳೆಯ ಅತೀರೇಖದ ಅಥವಾ ಪ್ರಚೋದನಕಾರಿ ಉಡುಪಿನಿಂದ ಆರೋಪಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಅಥವಾ ಪ್ರಚೋದನೆಯಾಗಿದೆ ಅನ್ನೋ ವಾದ ಒಪ್ಪಲು ಸಾಧ್ಯವಿಲ್ಲ. ಇದರಿಂದ ಆರೋಪಿಯನ್ನು ಮುಕ್ತಗೊಳಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ. ಸೆಕ್ಷನ್ 354 ಎ (2) & 341 ಮತ್ತು 354ರ ಅಡಿಯಲ್ಲಿ ಸಿವಿಕ್ ಚಂದ್ರನ್ ವಿರುದ್ಧ ಪ್ರಕರಣ ದಾಖಲಾಗಿದೆ.
Divorce: ಹೆಂಡತಿ ಮಾತ್ರವಲ್ಲ, ಗಂಡ ಬೇಕಾದರೂ ಕೇಳಬಹುದು ಜೀವನಾಂಶ, ಕಂಡೀಷನ್ಸ್ ಅಪ್ಲೈ
ಸೆಕ್ಷನ್ 354ಎ ರ ಅಡಿ ಅಪರಾಧ ಎಂದು ಪರಿಗಣಿಸಲು ದೈಹಿಕ ಸಂಪರ್ಕ ಅಥವಾ ಇಷ್ಟವಿಲ್ಲದ ಲೈಂಗಿಕತೆ, ಬಲವಂತದ ಲೈಂಗಿಕತೆ ಬೆಳವಣಿಗೆಗಳು ನಡೆದಿರಬೇಕು. ಲೈಂಗಿಕತೆಗಾಗಿ ಬೇಡಿಕೆ, ಬೆದರಿಕೆ ವಿನಂತಿ, ಲೈಂಗಿಕತೆಯ ಮಾತುಗಳು ಇರಬೇಕು. ಆರೋಪಿ ಸಿವಿಕ್ ಚಂದ್ರನ್ ಜಾಮೀನು ಅರ್ಜಿಗಾಗಿ ಹಲವು ಫೋಟೋಗಳನ್ನು ಸಲ್ಲಿಸಿದ್ದಾರೆ. ಇದರಲ್ಲಿ ದೂರುದಾರೆ ಲೈಂಗಿಕ ಪ್ರಚೋದನಕಾರಿ ಉಡುಪು ಧರಿಸಿದ್ದಾರೆ. ಹೀಗಾಗಿ ಆರೋಪಿ ಸಿವಿಕ್ ಚಂದ್ರನ್ ವಿರುದ್ದ ಸೆಕ್ಷನ್ 354ಎ ನಿಲ್ಲುವುದಿಲ್ಲ ಎಂದು ಸೆಶನ್ ನ್ಯಾಯಾಧೀಶ ಕೃಷ್ಣಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಮೂಲಕ ಸಿವಿಕ್ ಚಂದ್ರನ್‌ಗೆ ಜಾಮೀನು ನೀಡಿದ್ದರು.
