ತಿರುವನಂತಪುರ(ಏ.23): ಕೊರೋನಾ ವಿರುದ್ಧದ ಹೋರಾಟಕ್ಕಾಗಿ ಎಲ್ಲ ರಾಜ್ಯ ಸರ್ಕಾರಿ ನೌಕರರ 1 ತಿಂಗಳ ವೇತನವನ್ನು ಕಡಿತಗೊಳಿಸುವ ಪ್ರಸ್ತಾವನೆ ಜಾರಿಗೆ ಕೇರಳ ಸರ್ಕಾರ ನಿರ್ಧರಿಸಿದೆ.

ಆದರೆ, ಈ ವೇತನವನ್ನು ಒಮ್ಮೆಲೆ ಕಡಿತಗೊಳಿಸುವ ಬದಲಾಗಿ 5 ತಿಂಗಳ ಅವಧಿಯೊಳಗೆ ಕಡಿತಗೊಳಿಸಲಾಗುತ್ತದೆ. ಆದರೆ ಒಮ್ಮೆ ರಾಜ್ಯದ ಆರ್ಥಿಕ ಸ್ಥಿತಿ ಸುಧಾರಿಸಿದ ಬಳಿಕ ಎಲ್ಲಾ ನೌಕರರಿಗೂ ಅವರ ವೇತನದಿಂದ ಕಡಿತ ಮಾಡಿದ ಹಣವನ್ನು ಪುನಃ ನೀಡಲಾಗುತ್ತದೆ.

ಹೆದರಬೇಡ, ನಾವಿದ್ದೇವೆ: ಸೋಂಕಿತ ಪಿಜ್ಜಾ ಬಾಯ್‌ಗೆ ಗ್ರಾಹಕರಿಂದಲೇ ಧೈರ್ಯ

ಕೊರೋನಾ ನಿಗ್ರಹ ನಿಟ್ಟಿನಲ್ಲಿ ಮಹತ್ವದ ಜವಾಬ್ದಾರಿ ನಿಭಾಯಿಸುತ್ತಿರುವ ವೈದ್ಯರ ವೇತನ ಕಡಿತಗೊಳಿಸಲಾಗುತ್ತದೆಯೇ ಅಥವಾ ಅವರನ್ನು ವೇತನ ಕಡಿತದ ನಿಲುವುನಿಂದ ವಿನಾಯ್ತಿ ನೀಡಲಾಗುತ್ತದೆಯೇ ಎಂಬುದರ ಮಾಹಿತಿ ಲಭ್ಯವಾಗಿಲ್ಲ.