Asianet Suvarna News Asianet Suvarna News

ಹೆದರಬೇಡ, ನಾವಿದ್ದೇವೆ: ಸೋಂಕಿತ ಪಿಜ್ಜಾ ಬಾಯ್‌ಗೆ ಗ್ರಾಹಕರಿಂದಲೇ ಧೈರ್ಯ

ಹೆದರಬೇಡ, ನಾವಿದ್ದೇವೆ: ಸೋಂಕಿತ ಪಿಜ್ಜಾ ಬಾಯ್‌ಗೆ ಗ್ರಾಹಕರಿಂದಲೇ ಧೈರ್ಯ| ಹೆಚ್ಚಿನವರು ಫೋನಿನಲ್ಲಿ ನನ್ನನ್ನು ಸಂಪರ್ಕಿಸಿದ್ದಾರೆ ಎಂದ ಡೆಲಿವರಿ ಬಾಯ್

Be brave call if you need anything Customers tell delivery boy who tested positive for coronavirus
Author
Bangalore, First Published Apr 23, 2020, 12:59 PM IST

ನವದೆಹಲಿ(ಏ.೨೩): ಕೊರೋನಾ ಸೋಂಕು ತಟ್ಟಿದ್ದ ರಾಜಧಾನಿಯ ಪಿಜ್ಜಾ ಡೆಲಿವರಿ ಬಾಯ್‌ಗೆ, ಗ್ರಾಹಕರೇ ಧೈರ್ಯ ತುಂಬಿದ್ದಾರೆ. ಆ ವ್ಯಕ್ತಿಯನ್ನು ಸಂಪರ್ಕಿಸಿದ 15ಕ್ಕೂ ಹೆಚ್ಚು ಮಂದಿ ಗ್ರಾಹಕರು ಧೃತಿಗೆಡಬೇಡ ಎಂದು ಧೈರ್ಯ ಹೇಳಿದ್ದಾರೆ.

ಬಿಲ್‌ನಲ್ಲಿದ್ದ ನಂಬರ್‌ ಮೂಲಕ ಗ್ರಾಹಕರು ಆತನಿಗೆ ಕರೆ ಮಾಡಿ, ಸಹಾಯ ಬೇಕಿದ್ದರೆ ಸಂಪರ್ಕಿಸುವಂತೆ ವಿಶ್ವಾಸ ತುಂಬಿದ್ದಾರೆ.

ಬಾಯಿ ಚಪಲ: ಪಿಜ್ಜಾ ತರಿಸಿದ 72 ಕುಟುಂಬಕ್ಕೆ ಕ್ವಾರಂಟೈನ್!

ಈ ಬಗ್ಗೆ ಪ್ರತಿಕ್ರಿಯಿಸಿರುವ ಸೋಂಕಿತ, ಹೆಚ್ಚಿನವರು ಫೋನಿನಲ್ಲಿ ನನ್ನನ್ನು ಸಂಪರ್ಕಿಸಿದ್ದಾರೆ. ಸಹಾಯ ಬೇಕಿದ್ದರೆ ಯಾವುದೇ ಮುಜುಗರವಿಲ್ಲದೇ ಕೇಳು ಎಂದು ಧೈರ್ಯ ತುಂಬಿದ್ದರು ಎಂದು ಹೇಳಿದ್ದಾನೆ.

ತನಗೆ ಕೊರೋನಾ ಸೋಂಕು ತಟ್ಟಿರುವುದು ತಿಳಿಯದೇ ಹಲವು ಕುಟುಂಬಳಿಗೆ ಈತ ಪಿಜ್ಜಾ ಡೆಲಿವರಿ ಮಾಡಿದ್ದ.

Follow Us:
Download App:
  • android
  • ios