ಅಯೋಧ್ಯೆಗೆ ಕೇರಳ ಗವರ್ನರ್ ಭೇಟಿ: ರಾಮಲಲ್ಲಾನ ಮುಂದೆ ಶಿರಬಾಗಿ ನಮಸ್ಕರಿಸಿದ ಆರೀಫ್ ಮೊಹಮ್ಮದ್
ಕೇರಳದ ಎಡಪಂಥೀಯ ಸರ್ಕಾರದ ವಿರುದ್ಧ ಸದಾ ಕೆಂಡಕಾರುತ್ತಾ ಸುದ್ದಿಯಲ್ಲಿರುವ ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಇಂದು ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಭೇಟಿ ನೀಡಿ ಶ್ರೀರಾಮ ಲಲ್ಲಾನ ದರ್ಶನ ಪಡೆದರು.
ಅಯೋಧ್ಯಾ: ಕೇರಳದ ಎಡಪಂಥೀಯ ಸರ್ಕಾರದ ವಿರುದ್ಧ ಸದಾ ಕೆಂಡಕಾರುತ್ತಾ ಸುದ್ದಿಯಲ್ಲಿರುವ ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಇಂದು ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಭೇಟಿ ನೀಡಿದ್ದಾರೆ. ರಾಮ ಮಂದಿರಕ್ಕೆ ಭೇಟಿ ನೀಡಿದ ರಾಜ್ಯಪಾಲ ಮೊಹಮ್ಮದ್ ಆರೀಫ್ ದೇಗುಲದ ಗರ್ಭಗುಡಿಯಲ್ಲಿ ಶ್ರೀರಾಮನ ದರ್ಶನ ಪಡೆದು ರಾಮಲಲ್ಲಾನ ಮುಂದೆ ತಲೆಬಾಗಿ ನಮಸ್ಕರಿಸಿದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಜೈಶ್ರೀರಾಮ್ ಎಂಬ ಘೋಷಣೆಗಳ ನಡುವೆ ಕೇರಳ ಗವರ್ನರ್ ಮೊಹಮ್ಮದ್ ಆರೀಫ್ ಅಯೋಧ್ಯೆ ಶ್ರೀರಾಮನ ಆಶೀರ್ವಾದ ಪಡೆದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಯೋಧ್ಯೆಗೆ ಬಂದು ಶ್ರೀರಾಮನ ಪೂಜೆ ಮಾಡುವುದು ನನಗೆ ಹೆಮ್ಮೆಯ ವಿಚಾರ, ನಾನು ಕಳೆದ ಜನವರಿಯಲ್ಲಿ ಎರಡು ಬಾರಿ ಅಯೋಧ್ಯೆಗೆ ಭೇಟಿ ನೀಡಿದ್ದೆ. ಅಂದು ಯಾವ ಭಾವನೆ ಇತ್ತೋ ಇಂದು ಅದೇ ಭಾವನೆ ಇದೆ. ಹಲವು ಬಾರಿ ನಾನು ಅಯೋಧ್ಯೆಗೆ ಭೇಟಿ ನೀಡಿದ್ದೇನೆ. ಇದು ನಮಗೆ ಬರೀ ಖುಷಿಯ ವಿಚಾರ ಅಲ್ಲ, ಅಯೋಧ್ಯೆಗೆ ಬಂದು ಶ್ರೀರಾಮನ ಆರಾಧನೆ ಮಾಡುವುದು ನಮಗೆ ಹೆಮ್ಮೆಯ ವಿಚಾರ ಎಂದು ಆರೀಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ.
Hijab Row:ಹಿಜಾಬ್ ಅಡಿ ಮುಸ್ಲಿಂ ಮಹಿಳೆಯರ ಸಮಾಧಿ: ಕೇರಳ ಗವರ್ನರ್
ಕಳೆದ ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠೆಯ ನಂತರ ಸಾರ್ವಜನಿಕರಿಗೆ ಅಯೋಧ್ಯೆಗೆ ಭೇಟಿ ನೀಡಲು ಅವಕಾಶ ನೀಡಲಾಗಿದೆ. ಅಂದಿನಿಂದ ಪ್ರತಿದಿನವೂ ಲಕ್ಷಾಂತರ ಜನ ಅಯೋಧ್ಯೆ ಶ್ರೀರಾಮನ ದರ್ಶನ ಪಡೆಯುತ್ತಿದ್ದಾರೆ. ಅಯೋಧ್ಯೆ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ದೇಶದ ಉದ್ಯಮಿಗಳು ಸಿನಿಮಾ ನಟರು,ಕ್ರೀಡಾಪಟುಗಳು ಸೇರಿದಂತೆ ಅನೇಕ ಗಣ್ಯಾತಿಗಣ್ಯರು ಸೇರಿದಂತೆ 10 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.
ಈ ಹಿಂದೆ ಕೇರಳ ರಾಜ್ಯಪಾಲರು, ತನ್ನನ್ನು ನೀವು ಏಕೆ ಹಿಂದೂ ಎಂದು ಕರೆಯುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದರು. ಆರ್ಯಾ ಸಮಾಜದ ವತಿಯಿಂದ ಉತ್ತರ ಅಮೆರಿಕಾದ ಕೇರಳ ಹಿಂದೂಗಳು ತಿರುವನಂತಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಆರೀಫ್ ಮೊಹಮ್ಮದ್, ನಿಮ್ಮ ವಿರುದ್ಧ ನನ್ನ ಗಂಭೀರ ದೂರು ಇದೆ, ನೀವು ಏಕೆ ನನ್ನನ್ನು ಹಿಂದೂ ಎಂದು ಕರೆಯುತ್ತಿಲ್ಲ, ನಾನು ಹಿಂದೂ ಪದವನ್ನು ಕೇವಲ ಒಂದು ಧರ್ಮಕ್ಕೆ ಸಂಬಂಧಿಸಿದ್ದು ಎಂದು ಭಾವಿಸುವುದಿಲ್ಲ, ಅದೊಂದು ಭೌಗೋಳಿಕ ಪದ ಎಂದು ಕೇರಳ ರಾಜ್ಯಪಾಲರು ಹೇಳಿದ್ದರು.
ಕೇರಳ ರಾಜ್ಯಪಾಲರಿಗೆ ಕಪ್ಪುಬಾವುಟ ಪ್ರದರ್ಶಿಸಿದ SFI, ರಸ್ತೆಯಲ್ಲೇ ಧರಣಿ ಕುಳಿತ ಆರೀಫ್ ಮೊಹಮ್ಮದ್!
ಭಾರತದಲ್ಲಿ ಜನಿಸಿದ ಯಾರೇ ಆದರೂ, ಭಾರತದಲ್ಲಿ ಉತ್ಪಾದನೆಯಾಗುವ ಆಹಾರದಿಂದ ಬದುಕುವ ಯಾರೇ ಆದರೂ, ಭಾರತದ ನದಿಗಳ ನೀರನ್ನು ಕುಡಿಯುವ ಯಾರೇ ಆದರೂ ತಮ್ಮನ್ನು ತಾವು ಹಿಂದೂ ಎಂದು ಕರೆದುಕೊಳ್ಳಲು ಅರ್ಹರಾಗಿದ್ದಾರೆ ಮತ್ತು ಆದ್ದರಿಂದ ನೀವು ನನ್ನನ್ನು ಹಿಂದೂ ಎಂದು ಕರೆಯಬೇಕು ಎಂದು ರಾಜ್ಯಪಾಲರು ಹೇಳಿದ್ದರು.