Asianet Suvarna News Asianet Suvarna News

ಮದುವೆ ಮಂಟಪವಾಗಿ ಬದಲಾದ ಕೋವಿಡ್ ಆಸ್ಪತ್ರೆ; ಹೊಸ ಬದುಕಿಗೆ ಕಾಲಿಟ್ಟ ನವಜೋಡಿ!

ಕೊರೋನಾ 2ನೇ ಅಲೆಗೆ ಆಸ್ಪತ್ರೆ ವರಾಂಡ, ಆ್ಯಂಬುಲೆನ್ಸ್, ತಾತ್ಕಾಲಿಕ ಕೊಠಡಿಗಳೇ ಆಸ್ಪತ್ರೆಗಳಾಗಿ ಪರಿವರ್ತನೆಗೊಂಡಿದೆ. ಇದೀಗ ಕೊರೋನಾ ಆಸ್ಪತ್ರೆಯೇ ಮದುವೆ ಮಂಟಪವಾಗಿ ಬದಲಾದ ಅಪರೂಪದ ಘಟನೆ ನಡೆದಿದೆ. ಈ ಮಂಟಪದಲ್ಲಿ ನವ ಜೋಡಿ ಸಪ್ತಪದಿ ತುಳಿದಿದೆ.

Kerala Covid hospital turns wedding venue for a positive patient in Alappuzha ckm
Author
Bengaluru, First Published Apr 25, 2021, 9:43 PM IST | Last Updated Apr 25, 2021, 9:45 PM IST

ಕೇರಳ(ಏ.25): ದೇಶದಲ್ಲಿ ಎದ್ದಿರುವ ಕೊರೋನಾ ವೈರಸ್ 2ನೇ ಅಲೆಗೆ ಜನ ತತ್ತರಿಸಿದ್ದಾರೆ. ಸರ್ಕಾರ ಕಲ್ಯಾಣ ಮಂಟಪಗಳನ್ನು ಆಸ್ಪತ್ರೆಗಳನ್ನಾಗಿ ಪರಿವರ್ತಿಸುವ ಕುರಿತು ಚಿಂಚನೆ ನಡೆಸುತ್ತಿದೆ. ಇದರ ನಡುವೆ ಕೇರಳದ ಆಲಪುಜ್ಜಾದ ಕೋವಿಡ್ ಕೇರ್ ಆಸ್ಪತ್ರೆ ಒಂದು ಕ್ಷಣ ಮದುವೆ ಮಂಟಪವಾಗಿ ಬದಲಾಗಿದೆ. ಸೋಂಕಿತ ಜೋಡಿ ವಿಶೇಷ ರೀತಿಯಲ್ಲಿ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ.

ಹಾಸನ; ಮಾಸ್ಕ್ ಧರಿಸದ ಮದುಮಗಳಿಗೆ ಸ್ಥಳದಲ್ಲೇ ದಂಡ

ಆಲಪ್ಪುಜಾದ ಕೈನಕಾರಿ ವಲಯದ ಶರತ್ ಮೊನ್ ಹಾಗೂ ಅದೇ ಗ್ರಾಮದ ವಧುವಿನ ಮದುವೆ ನಿಶ್ಚಿಯವಾಗಿತ್ತು. ಮದುವೆ ಇನ್ನು 2 ವಾರ ಇದೆ ಅನ್ನುವಷ್ಟರಲ್ಲೇ ಶರತ್ ಹಾಗೂ ಆತನ ತಾಯಿಗೂ ಕೊರೋನಾ ತಗುಲಿದೆ. ಹೀಗಾಗಿ  ವಂದನಮ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇತ್ತ ವಧು ಕುಟುಂಬಸ್ಥರಲ್ಲಿ ಆತಂಕ ಮನೆ ಮಾಡಿದೆ.

Kerala Covid hospital turns wedding venue for a positive patient in Alappuzha ckmKerala Covid hospital turns wedding venue for a positive patient in Alappuzha ckm

ವಧುವಿನ ಕುಟುಂಬಕ್ಕೆ ದೂರವಾಣಿ ಮೂಲಕ ಮಾಹಿತಿ ನೀಡಿದ ಶರತ್ ಕುಟುಂಬ ಮದುವೆ ಮುಂದೂಡುವ ಕುರಿತು ಚರ್ಚೆ ನಡೆಸದೆ. ಆದರೆ ನಿಗದಿತ ಮೂಹೂರ್ತದಲ್ಲೇ ಮದುವೆ ನಡೆಸಬೇಕು ಅನ್ನೋದು ವರ ಶರತ್ ಮೋನ್ ತಾಯಿಯ ಆಗ್ರಹವಾಗಿತ್ತು. ಹೀಗಾಗಿ ಮೆಡಿಕಲ್ ಕಾಲೇಜು ವೈದ್ಯರು ಹಾಗೂ ಅಧಿಕಾರಿಗಳಲ್ಲಿ ಮನವಿ ಮಾಡಲಾಗಿತ್ತು. 

ಮನವಿಗೆ ಸ್ಪಂದಿಸಿದ ಕಾರಣ ವಧು ಅಭಿರಾಮಿ ಪಿಪಿಇ ಕಿಟ್ ಧರಿಸಿ ಆಸ್ಪತ್ರೆಗೆ ಆಗಮಿಸಿದ್ದಾರೆ. ಬಳಿಕ ಸರಳವಾಗಿ ಸೋಂಕಿತ ವರ ಶರತ್ ಮೊನ್ ಜೊತೆ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ. ಹೊಮಾಲೆ ಹಾಕೋ ಮೂಲಕ ಇಬ್ಬರು ಮದುವೆ ಕಾರ್ಯ ಸರಳವಾಗಿ ಮುಗಿದಿದೆ. ಮದುವೆ ಬಳಿಕ ಹನಿಮೂನ್ ಪ್ರವಾಸದ ದೂರ ಮಾತು, ಕೊನೆ ಪಕ್ಷ ಜೊತೆಯಾಗಿರಲು ಅವಕಾಶ ಇರಲಿಲ್ಲ. ಹೀಗಾಗಿ ಸೋಂಕಿತ ಶರತ್ ಮೊನ್ ಆಸ್ಪತ್ರೆಯಲ್ಲೇ ಉಳಿದುಕೊಂಡರೆ, ವಧು ಅಭಿರಾಮಿ ಮನೆಗೆ ತೆರಳಿದ್ದಾರೆ.

Latest Videos
Follow Us:
Download App:
  • android
  • ios