Asianet Suvarna News Asianet Suvarna News

ಕೇರಳ ಕಾಂಗ್ರೆಸ್ಸಲ್ಲೂ ಚಿತ್ರರಂಗ ರೀತಿ ಸೆಕ್ಸ್ ದಂಧೆ: 'ಕೈ' ನಾಯಕಿ ಸಿಮಿ ರೋಸ್

ಕೇರಳ ಚಿತ್ರರಂಗವನ್ನು ತಲ್ಲಣಗೊಳಿಸಿರುವ ಸೆಕ್ಸ್‌ ಹಗರಣ, ಕೇವಲ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಕೇರಳ ಕಾಂಗ್ರೆಸ್‌ ಘಟಕದಲ್ಲೂ ದೊಡ್ಡದಾಗಿಯೇ ನಡೆಯುತ್ತಿದೆ ಎಂದು ಸ್ವತಃ ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದ ಸದಸ್ಯೆ, ಪಕ್ಷದ ಹಿರಿಯ ನಾಯಕಿ ಸಿಮಿ ರೋಸ್ ಬೆಲ್ ಜಾನ್ ಗಂಭೀರ ಆರೋಪ ಮಾಡಿದ್ದಾರೆ.

Kerala Congress also has a sex racket like cinema Says simi rosebell john gvd
Author
First Published Sep 2, 2024, 7:35 AM IST | Last Updated Sep 2, 2024, 7:35 AM IST

ತಿರುವನಂತಪುರ (ಸೆ.02): ಕೇರಳ ಚಿತ್ರರಂಗವನ್ನು ತಲ್ಲಣಗೊಳಿಸಿರುವ ಸೆಕ್ಸ್‌ ಹಗರಣ, ಕೇವಲ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಕೇರಳ ಕಾಂಗ್ರೆಸ್‌ ಘಟಕದಲ್ಲೂ ದೊಡ್ಡದಾಗಿಯೇ ನಡೆಯುತ್ತಿದೆ ಎಂದು ಸ್ವತಃ ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದ ಸದಸ್ಯೆ, ಪಕ್ಷದ ಹಿರಿಯ ನಾಯಕಿ ಸಿಮಿ ರೋಸ್ ಬೆಲ್ ಜಾನ್ ಗಂಭೀರ ಆರೋಪ ಮಾಡಿದ್ದಾರೆ. ಆದರೆ ಈ ಆರೋಪಗಳನ್ನು ಮಹಿಳಾಕಾಂಗ್ರೆಸ್‌ ಘಟಕ ಸ್ಪಷ್ಟವಾಗಿ ತಳ್ಳಿಹಾಕಿ, ಸಿಮಿ ಅವರ ವಿರುದ್ಧವೇ ಪ್ರಕರಣ ದಾಖಲಿಸಿದೆ. ಮತ್ತೊಂದೆಡೆ ಪಕ್ಷಕ್ಕೆ ಕಳಂಕ ತರುವ ಉದ್ದೇಶದಿಂದಲೇ ಸಿಮಿ ಇಂಥ ಆರೋಪ ಮಾಡಿದ್ದಾರೆ ಎಂದು ಕಿಡಿಕಾರಿರುವ ರಾಜ್ಯ ಕಾಂಗ್ರೆಸ್ ಘಟಕ, ಸಿಮಿ ಅವರನ್ನು ಪಕ್ಷದಿಂದಲೇ ಉಚ್ಚಾಟಿಸಿದೆ.

ಸತೀಶನ್ ವಿರುದ್ಧ ಆರೋಪ: 'ಕೇರಳ ಚಿತ್ರರಂಗದಲ್ಲಿ ನಡೆದ ರೀತಿಯದ್ದೇ ಘಟನೆ ರಾಜ್ಯ ಕಾಂಗ್ರೆಸ್‌ನಲ್ಲೂ ನಡೆಯುತ್ತಿದೆ ಹಿರಿಯ ನಾಯಕರ ಜತೆ ಆತ್ಮೀಯರಾಗಿದ್ದವರಿಗೆ ಮಾತ್ರವೇ ಪಕ್ಷದಲ್ಲಿ ಉತ್ತಮ ಅವಕಾಶ ಸಿಗುತ್ತದೆ. ಇದು ನನ್ನೊಬ್ಬಳ ಅಭಿಪ್ರಾಯ ಮಾತ್ರ ಅಲ್ಲವೇ ಅಲ್ಲ. ಪಕ್ಷದ ಹಲವು ಮಹಿಳಾ ನಾಯಕಿಯರು ನನ್ನೊಂದಿಗೆ ತಮಗೆ ಆದ ಕಹಿ ಅನುಭವ ಹಂಚಿಕೊಂಡಿದ್ದಾರೆ. ಈ ಕುರಿತು ನನ್ನ ಬಳಿ ಸೂಕ್ತ ಸಾಕ್ಷ್ಯಗಳಿವೆ. ಅದನ್ನು ಮುಂದೆ ಸೂಕ್ತ ಸಂದರ್ಭದಲ್ಲಿ ಬಹಿರಂಗಪಡಿಸುತ್ತೇನೆ' ಎಂದು ಸಿಮಿ ಹೇಳಿದ್ದಾರೆ.

ಇಂಥ ಆರೋಪ ಮಾಡುವ ವೇಳೆ ಅವರು ರಾಜ್ಯ ವಿಧಾನಸಭೆಯ ವಿಪಕ್ಷ ನಾಯಕ ವಿ.ಡಿ.ಸತೀಶನ್ ಅವರ ಹೆಸರನ್ನೂ ಪ್ರಸ್ತಾಪ ಮಾಡಿದ್ದಾರೆ. ಪಕ್ಷದಲ್ಲಿ ನನ್ನ ಬೆಳವಣಿಗೆಗೆ ಸತೀಶನ್ ಅಡ್ಡಿ ಮಾಡುತ್ತಿದ್ದಾರೆ. ನನಗಿಂತ ಕಿರಿಯ ದೀಪ್ತಿ ಮೇರಿ ವರ್ಗೀಸ್‌ ಉನ್ನತ ಹುದ್ದೆ ನೀಡಲಾಗಿದೆ. ಪಕ್ಷದ ಬೆಳವಣಿಗೆಗೆ ಸತೀಶನ್ ಅಡ್ಡಿಯಾಗಿದ್ದಾರೆ ಎಂದು ಆರೋಪಿಸಿದರು. ಜೊತೆಗೆ ರಾಜ್ಯ ಸಭಾ ಸದಸ್ಯೆಯಾಗಿ ಆಯ್ಕೆಯಾದ ಜೇಬಿ ಮಾಥರ್ ಹೆಸರನ್ನೂ ಪ್ರಸ್ತಾಪಿಸಿದ ಸಿಮಿ, ಪಕ್ಷದಲ್ಲಿನ ಕೆಲವು ನಾಯಕರಿಗೆ ಅವರ ಅರ್ಹತೆಗಿಂತ ಹೆಚ್ಚಿನ ಹುದ್ದೆಗಳು ಅನಾಯಾಸವಾಗಿ ಸಿಗುತ್ತಿದೆ. ಆದರೆ ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಲಾಗುತ್ತಿದೆ ಎಂದು ದೂರಿದ್ದಾರೆ.

ಕೋವಿಡ್‌ ವೇಳೆ ಕಾನೂನುಬಾಹಿರ ಕೆಲಸ ಮಾಡಿಲ್ಲ, ಇದು ದರೋಡೆಕೋರರ ಸರ್ಕಾರ: ಸಂಸದ ಸುಧಾಕರ್‌

ಕೇರಳ ಚಿತ್ರರಂಗದಲ್ಲಿ ನಡೆದಂಥದ್ದೇ ಘಟನೆ ರಾಜ್ಯ ಕಾಂಗ್ರೆಸ್ಸಲ್ಲೂ ನಡೀತಿದೆ. ಹಿರಿಯ ನಾಯಕರ ಜೊತೆಗೆ ಆತ್ಮೀಯರಾಗಿದ್ದವರಿಗೆ ಮಾತ್ರವೇ ಪಕ್ಷದಲ್ಲಿ ಉತ್ತಮ ಅವಕಾಶ ಸಿಗುತ್ತದೆ. ಈ ಕುರಿತು ನನ್ನ ಬಳಿ ಸೂಕ್ತ ಸಾಕ್ಷ್ಯಗಳಿವೆ. ಅದನ್ನು ಮುಂದೆ ಸೂಕ್ತ ಸಂದರ್ಭದಲ್ಲಿ ಬಹಿರಂಗಪಡಿಸುತ್ತೇನೆ. 
-ಸಿಮಿ ರೋಸ್‌ಬೆಲ್ ಕಾಂಗ್ರೆಸ್ ನಾಯಕಿ

Latest Videos
Follow Us:
Download App:
  • android
  • ios