ತಿರುವನಂತಪುರಂ(ಜೂ.10): ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹಿರಿಯ ಮಗಳು ವೀಣಾ ಥಯಿಕ್ಕಂಡಿಯಿಲ್‌ ಮದುವೆ ಡಿವೈಎಫ್‌ಐ ರಾಷ್ಟ್ರೀಯ ಅಧ್ಯಕ್ಷ ಮುಹಮ್ಮದ್‌ ರಿಯಾಸ್‌ ಜೊತೆ ಶೀಘ್ರವೇ ನೆರವೇರಲಿದೆ.

ಇನ್ನು ಐದು ದಿನಗಳಲ್ಲಿ ಅಂದರೆ ಜೂ.15ರಂದು ಕೇವಲ ಕುಟುಂಬ ಸದಸ್ಯರು ಹಾಗೂ ಆಪ್ತರ ಸಮ್ಮುಖದಲ್ಲಿ ಸರಳ ರೀತಿಯಲ್ಲಿ ಈ ವಿವಾಹ ನಡೆಯಲಿದೆ. ಇಬ್ಬರಿಗೂ ಇದು ಎರಡನೇ ವಿವಾಹವಾಗಿದೆ.

ಗರ್ಭಿಣಿ ಆನೆ ಹತ್ಯೆ: ಖಾಸಗಿ ಎಸ್ಟೇಟ್‌ನ ಇಬ್ಬರು ಕೆಲಸಗಾರರನ್ನು ವಶಕ್ಕೆ ಪಡೆದ ಅಧಿಕಾರಿಗಳು

ರಿಯಾಸ್‌ ತನ್ನ ಮೊದಲ ಪತ್ನಿ ಡಾ. ಸಮೀಹಾಗೆ 2015ರಲ್ಲಿ ವಿಚ್ಛೇದನ ನೀಡಿದ್ದಾರೆ. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಇನ್ನು ವೀಣಾ ಐದು ವರ್ಷದ ಹಿಂದೆ ತನ್ನ ಮೊದಲ ಗಂಡನಿಂದ ದೂರವಾಘಿದ್ದಾರೆ. ಇವರಿಗೆ ಓರ್ವ ಮಗನಿದ್ದಾನೆ ಎಂದು ವರದಿಯೊಂದರಲ್ಲಿ ಪ್ರಕಟವಾಗಿದೆ. 

ಇನ್ನು ಬೆಂಗಳೂರಿನ ಐಟಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ವೀಣಾ ರಾಜಕೀಯದಿಂದ ಕೊಂಚ ದೂರವೇ ಉಳಿದಿದ್ದಾರೆ. ಅತ್ತ ರಿಯಾಸ್‌ 2009ರ ಲೋಕಸಭೆ ಚುನಾವಣೆಯಲ್ಲಿ ಸಿಪಿಐಎಂ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನುಭವಿಸಿದ್ದರು.