Asianet Suvarna News Asianet Suvarna News

ರಬ್ಬರ್‌ ಧಾರಣೆ ಹೆಚ್ಚಿಸಿದರೆ ಬೆಂಬಲ: ಬಿಜೆಪಿ ಬೆಂಬಲಿಸಲು ಕೇರಳ ಚರ್ಚ್‌ ಷರತ್ತು

ಕೇರಳದಲ್ಲಿ ಬೇರೂರಲು ಹರಸಾಹಸ ಪಡುತ್ತಿರುವ ಬಿಜೆಪಿಗೆ ಸ್ಥಳೀಯ ಕ್ರೈಸ್ತ ಸಮುದಾಯ ಬೆಂಬಲ ಘೋಷಣೆ ಮಾಡಿದೆ. ಆದರೆ ಅದಕ್ಕೊಂದು ಷರತ್ತು ಮುಂದೊಡ್ಡಿದೆ.

Kerala Church supports BJP but conditions apply akb
Author
First Published Mar 20, 2023, 1:27 PM IST

ತಿರುವನಂತಪುರ: ಕೇರಳದಲ್ಲಿ ಬೇರೂರಲು ಹರಸಾಹಸ ಪಡುತ್ತಿರುವ ಬಿಜೆಪಿಗೆ ಸ್ಥಳೀಯ ಕ್ರೈಸ್ತ ಸಮುದಾಯ ಬೆಂಬಲ ಘೋಷಣೆ ಮಾಡಿದೆ. ಆದರೆ ಅದಕ್ಕೊಂದು ಷರತ್ತು ಮುಂದೊಡ್ಡಿದೆ.

ಕಣ್ಣೂರಿನಲ್ಲಿ ಕ್ಯಾಥೋಲಿಕ್‌ ಕಾಂಗ್ರೆಸ್‌ (Catholic Congress)ಆಯೋಜಿಸಿದ್ದ ರೈತರ ಸಭೆಯಲ್ಲಿ ಮಾತನಾಡಿದ ಆಚ್‌ರ್‍ ಬಿಷಪ್‌ ಜೋಸೆಫ್‌ ಪಂಪ್ಲಾನಿ ‘ರಾಜ್ಯದ ರೈತರ ಪ್ರಮುಖ ಆದಾಯ ಮೂಲವಾದ ರಬ್ಬರ್‌ ಧಾರಣೆ ಕುಸಿದಿದೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರ ಸೂಕ್ತ ನಿರ್ಧಾರ ಕೈಗೊಂಡರೆ ದರ ಕೆ.ಜಿಗೆ 250 ರು.ಗೆ ತಲುಪಲಿದೆ. ಆದರೆ ಪ್ರಜಾಪ್ರಭುತ್ವದಲ್ಲಿ (Democracy) ನಮ್ಮ ಪ್ರತಿಭಟನೆ ಮತವಾಗಿ ಪರಿವರ್ತನೆಯಾದಾಗ ಮಾತ್ರವೇ ಬೆಲೆ ಪಡೆಯುತ್ತದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಹೀಗಾಗಿ ಕೇಂದ್ರ ಸರ್ಕಾರ (Union Govt) ರಬ್ಬರ್‌ ಅನ್ನು ಕೆ.ಜಿಗೆ 300 ರು.ಗೆ ಖರೀದಿಸಲು ಮುಂದಾದರೆ, ಪಕ್ಷ ಯಾವುದೇ ಆದರೂ ಅದನ್ನು ಬೆಂಬಲಿಸಲು ನಾವು ಸಿದ್ಧ’ ಎಂದು ಹೇಳಿದ್ದಾರೆ. ಈ ಮೂಲಕ ರೈತರಿಗೆ ನೆರವಾದರೆ ಬಿಜೆಪಿ ಬೆಂಬಲಿಸಲು ಸಿದ್ಧ ಎಂದು ಸುಳಿವು ನೀಡಿದ್ದಾರೆ.

ಕಳ್ಳಸಾಗಣೆಯಲ್ಲಿ ಕೇರಳ ನಂ.1 : ದೇಶದಲ್ಲಿ 2022ರಲ್ಲಿ 3500 ಕೆಜಿ ಚಿನ್ನ ಜಪ್ತಿ

ಕೇರಳದಲ್ಲಿಗ ಕ್ರೈಸ್ತರು ಆರ್‌ಎಸ್‌ಎಸ್‌ (RSS) ಬಗ್ಗೆ ಭಯ ಹೊಂದಿಲ್ಲ. ಅವರ ಜೊತೆ ನಾವು ಈ ಬಗ್ಗೆ ಮಾತುಕತೆ ಮುಂದುವರೆಸಲಿದ್ದೇವೆ. ಈ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಲಾಗಿದೆ ಎಂಬ ಆರ್‌ಎಸ್‌ಎಸ್‌ನ ಇತ್ತೀಚಿನ ಹೇಳಿಕೆ ಬೆನ್ನಲ್ಲೇ ಕ್ರೈಸ್ತ ಸಮುದಾಯದಿಂದ ಈ ಮಾತು ಹೊರಬಿದ್ದಿದೆ.

ಕರ್ನಾಟಕದ PFI ಕಾರ್ಯಕರ್ತರಿಗೆ ಕೇರಳದ ನಿವೃತ್ತ ಪೊಲೀಸರನ್ನು ಕರೆಸಿ ಶಸ್ತ್ರಾಸ್ತ್ರ ತರಬೇತಿ!

Follow Us:
Download App:
  • android
  • ios