Asianet Suvarna News Asianet Suvarna News

4ಕ್ಕಿಂತ ಹೆಚ್ಚು ಮಕ್ಕಳಿರುವ ಕುಟುಂಬಕ್ಕೆ ಕೇರಳ ಚರ್ಚ್ ಭರ್ಜರಿ ಆಫರ್‌!

* ಜನಸಂಖ್ಯೆ ನಿಯಂತ್ರಣಕ್ಕೆ ಇತರ ರಾಜ್ಯಗಳ ಕ್ರಮ

* ಕೇರಳದ ಕ್ಯಾಥೋಲಿಕ್‌ ಚರ್ಚ್‌ನಿಂದ ವಿಭಿನ್ನ ಆಫರ್

* 4ಕ್ಕಿಂತ ಹೆಚ್ಚು ಮಕ್ಕಳಿರುವ ಕುಟುಂಬಕ್ಕೆ ಕೇರಳ ಚರ್ಚ್ ಭರ್ಜರಿ ಆಫರ್‌!

 

Kerala church announces financial assistance for families having 4 or more children pod
Author
Bangalore, First Published Aug 2, 2021, 10:09 AM IST
  • Facebook
  • Twitter
  • Whatsapp

ತಿರುವನಂತಪುರಂ(ಆ.02): ಜನಸಂಖ್ಯೆ ನಿಯಂತ್ರಣಕ್ಕೆ ಇತರ ರಾಜ್ಯಗಳು ಕ್ರಮ ಕೈಗೊಳ್ಳಲು ಮುಂದಾಗಿರುವಾಗಲೇ, ಕೇರಳದ ಕ್ಯಾಥೋಲಿಕ್‌ ಚರ್ಚ್‌ ಒಂದು ನಾಲ್ಕಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಕುಟುಂಬಗಳಿಗೆ ನಾನಾ ರೀತಿಯ ನೆರವು ಘೋಷಿಸಿದೆ. ರಾಜ್ಯದಲ್ಲಿ ಕ್ರೈಸ್ತರ ಪ್ರಾಬಲ್ಯ ಹೆಚ್ಚಿಸಲು ಚಚ್‌ರ್‍ಗಳು ನೆರವಾಗುತ್ತಿವೆ ಎಂಬ ಹಿಂದೂ ಸಂಘಟನೆಗಳ ಆರೋಪಗಳ ನಡುವೆಯೇ ಚಚ್‌ರ್‍ನಿಂದ ಇಂಥದ್ದೊಂದು ಆಫರ್‌ ನೀಡಲಾಗಿದೆ.

ಸಿರೋ ಮಲಬಾರ್‌ ಪಾಲಾ ಡಿಯಾಸಿಸ್‌ (ಧರ್ಮ ಪ್ರಾಂತ್ಯ)ದ ವ್ಯಾಪ್ತಿಯಲ್ಲಿ ದೊಡ್ಡ ಕುಟುಂಬಗಳಿಗೆ ನೆರವನ್ನು ಪ್ರಕಟಿಸಿದ ಬೆನ್ನಲ್ಲೇ, ಪಟ್ಟಣಂತಿಟ್ಟದಲ್ಲಿರುವ ಸಿರೋ ಮಲಂಕರ ಕ್ಯಾಥೋಲಿಕ್‌ ಚಚ್‌ರ್‍ನ ಮುಖ್ಯ ಬಿಷಪ್‌, ನಾಲ್ಕು ಅಥವಾ ಅದಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದುವ ಕುಟುಂಬಕ್ಕೆ ಮಾಸಿಕ 2000 ರು. ಹಣಕಾಸು ನೆರವು ನೀಡಲಾಗುವುದು ಎಂದು ಘೋಷಿಸಿದ್ದಾರೆ.

ಏನೇನು ಆಫರ್‌

1. ನಾಲ್ಕಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಕುಟುಂಬಕ್ಕೆ ಪ್ರತಿ ತಿಂಗಳು 2,000 ರು. ಹಣಕಾಸು ನೆರವು ನೀಡಲಾಗುತ್ತದೆ.

2. ಅಗತ್ಯವಿದ್ದರೆ ನಾಲ್ಕನೇ ಮಗುವಿನ ಹೆರಿಗೆಗೂ ಹಣಕಾಸು ನೆರವನ್ನು ಒದಗಿಸಲಾಗುತ್ತದೆ.

3. ಉದ್ಯೋಗಗಳು ಮತ್ತು ಶಾಲೆ ಪ್ರವೇಶದಲ್ಲಿ ಈ ಕುಟುಂಬಗಳಿಗೆ ಆದ್ಯತೆ ನೀಡಲಾಗುತ್ತದೆ.

4. ಆಧ್ಯಾತ್ಮಿಕ ಅಗತ್ಯ ಪೂರೈಸಲು ಫಾದರ್‌, ದಾದಿಯರ ಸೇವೆ ಒದಗಿಸಲಾಗುತ್ತದೆ.

5. ಸ್ಥಳೀಯ ಚರ್ಚ್‌ಗಳ ಮುಖ್ಯಸ್ಥರು ಕುಟುಂಬದ ವಾರ್ಷಿಕ ಮಿಲನ ಕೂಟದಲ್ಲಿ ಭಾಗಿಯಾಗುತ್ತಾರೆ.

Follow Us:
Download App:
  • android
  • ios