Asianet Suvarna News Asianet Suvarna News

ಕರ್ನಾಟಕ ಉತ್ತಮ ಆಳ್ವಿಕೆಯನಂ.4 ರಾಜ್ಯ, ಕೇರಳ ನಂ.1!

ದಕ್ಷಿಣ ಭಾರತೀಯ ದೇಶದಲ್ಲಿ ಉತ್ತಮ ಆಡಳಿತ ನೀಡುತ್ತಿದ್ದು, ಅತೀ ದೊಡ್ಡ ರಾಜ್ಯವಾದ ಉತ್ತರ ಪ್ರದೇಶ ಕಡೆಯ ಸ್ಥಾನದಲ್ಲಿದೆ. ಮೊದಲ ಸ್ಥಾನವನ್ನು ಉಳಿಸಿಕೊಂಡಿದೆ ಕೇರಳ.

Kerala and Goa best governed states of India Karnataka in 4th place
Author
Bengaluru, First Published Oct 31, 2020, 8:54 AM IST

ಬೆಂಗಳೂರು (ಅ.31): ದೇಶದಲ್ಲಿ ಉತ್ತಮ ಆಳ್ವಿಕೆ ನಡೆಯುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 4ನೇ ಸ್ಥಾನದಲ್ಲಿದೆ ಎಂದು ಬೆಂಗಳೂರಿನ ಸಂಸ್ಥೆಯೊಂದು ರಾರ‍ಯಂಕಿಂಗ್‌ ಪಟ್ಟಿಬಿಡುಗಡೆ ಮಾಡಿದೆ.

ಸಾರ್ವಜನಿಕ ವ್ಯವಹಾರಗಳ ಕೇಂದ್ರವು ‘ಸಾರ್ವಜನಿಕ ವ್ಯವಹಾರಗಳ ಸೂಚ್ಯಂಕ-2020’ ಅನ್ನು ಬಿಡುಗಡೆ ಮಾಡಿದೆ. ದೊಡ್ಡ, ಸಣ್ಣ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶ ಎಂಬ ಮೂರು ವರ್ಗೀಕರಣ ಮಾಡಿ ಈ ರಾರ‍ಯಂಕಿಂಗ್‌ ಅನ್ನು ನೀಡಲಾಗಿದೆ. ಸುಸ್ಥಿರ ಅಭಿವೃದ್ಧಿಯ ಸಮಗ್ರ ಸೂಚ್ಯಂಕವನ್ನು ಆಧರಿಸಿ ಸ್ಥಾನ ನೀಡಲಾಗಿದೆ.

ಕೇರಳದಲ್ಲಿ ಕೊರೋನಾ ಸೋಂಕ್ ಹೈ ಜಂಪ್

ದೊಡ್ಡ ರಾಜ್ಯಗಳಲ್ಲಿ ಕೇರಳ ನಂ.1
ದೊಡ್ಡ ರಾಜ್ಯಗಳ ವಿಭಾಗದಲ್ಲಿ 1.388 ಅಂಕಗಳೊಂದಿಗೆ ಕೇರಳ ಪ್ರಥಮ ಸ್ಥಾನದಲ್ಲಿದ್ದರೆ, 0.912 ಅಂಕ ಗಳಿಸಿ ತಮಿಳುನಾಡು 2ನೇ ಸ್ಥಾನ, 0.531 ಅಂಕಗಳೊಂದಿಗೆ ಆಂಧ್ರಪ್ರದೇಶ 3 ಹಾಗೂ 0.468 ಅಂಕ ಸಂಪಾದಿಸಿ ಕರ್ನಾಟಕ 4ನೇ ಸ್ಥಾನ ಪಡೆದುಕೊಂಡಿದೆ. ದೊಡ್ಡ ರಾಜ್ಯಗಳ ವಿಭಾಗದ ಟಾಪ್‌ 4 ರಾರ‍ಯಂಕ್‌ಗಳೂ ದಕ್ಷಿಣ ರಾಜ್ಯಗಳಿಗೆ ಸಿಕ್ಕಿವೆ.

ಯುಪಿಗೆ ಕೊನೆಯ ಸ್ಥಾನ
ಉತ್ತರಪ್ರದೇಶ (-1.461), ಒಡಿಶಾ (-1.201) ಹಾಗೂ ಬಿಹಾರ (-1.158) ಕೊನೆಯ ಸ್ಥಾನದಲ್ಲಿವೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಮಾಜಿ ಮುಖ್ಯಸ್ಥ ಕೆ. ಕಸ್ತೂರಿರಂಗನ್‌ ನೇತೃತ್ವದ ಸಂಸ್ಥೆ ತಿಳಿಸಿದೆ.

Kerala and Goa best governed states of India Karnataka in 4th place

ಸಣ್ಯ ರಾಜ್ಯಗಳಲ್ಲಿ ಗೋವಾ ನಂ.1
ಸಣ್ಣ ರಾಜ್ಯಗಳ ವಿಭಾಗದಲ್ಲಿ ಗೋವಾ (1.745) ಪ್ರಥಮ ಸ್ಥಾನ ಗಳಿಸಿದೆ. ಮೇಘಾಲಯ (0.797) ಹಾಗೂ ಹಿಮಾಚಲಪ್ರದೇಶ (0.725) ಕ್ರಮವಾಗಿ 2, 3ನೇ ಸ್ಥಾನದಲ್ಲಿವೆ. ಮಣಿಪುರ (-0.363), ದೆಹಲಿ (-0.289) ಹಾಗೂ ಉತ್ತರಾಖಂಡ (-0.277) ಕೊನೆಯ ಸ್ಥಾನದಲ್ಲಿವೆ. ಕೇಂದ್ರಾಡಳಿತ ಪ್ರದೇಶಗಳ ಪೈಕಿ ಚಂಡೀಗಢ (1.05) ಪ್ರಥಮ ಸ್ಥಾನದಲ್ಲಿದೆ ಎಂದು ಸಮಿತಿ ತಿಳಿಸಿದೆ.

Follow Us:
Download App:
  • android
  • ios