Asianet Suvarna News Asianet Suvarna News

ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ ಪಟ್ಟಿ ಪ್ರಕಟ: ಕನ್ನಡಿಗರಿಗೆ 7 ಪ್ರಶಸ್ತಿ

* 2020ನೇ ಸಾಲಿನಲ್ಲಿ ಅನುವಾದ ಸಾಹಿತ್ಯಕ್ಕೆ ನೀಡುವ ಪ್ರಶಸ್ತಿ ಪಟ್ಟಿ
* ಡಾ. ಚಂದ್ರಶೇಖರ ಕಂಬಾರ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ
* ಕನ್ನಡಿಗ ಅನುವಾದಕ ಅಥವಾ ಕನ್ನಡ ಕೃತಿಗೆ ಸಂಬಂಧಿಸಿ ಕನ್ನಡಕ್ಕೆ ಒಟ್ಟು 7 ಪ್ರಶಸ್ತಿ

kendra sahitya akademi translation Award 2020 Announced
Author
Bengaluru, First Published Sep 18, 2021, 10:18 PM IST

ನವದೆಹಲಿ, (ಸೆ.18): ಕೇಂದ್ರ ಸಾಹಿತ್ಯ ಅಕಾಡೆಮಿಯು 2020ನೇ ಸಾಲಿನಲ್ಲಿ ಅನುವಾದ ಸಾಹಿತ್ಯಕ್ಕೆ ನೀಡುವ ಪ್ರಶಸ್ತಿ ಪಟ್ಟಿ ಇಂದು (ಸೆ.18) ಪ್ರಕಟವಾಗಿದೆ.

  ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಚಂದ್ರಶೇಖರ ಕಂಬಾರ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ನಡೆದಿದ್ದು, ಅನುವಾದದಲ್ಲಿ ವಿವಿಧ ಭಾಷೆಗೆ ಸಂಬಂಧಿಸಿ ಒಟ್ಟು 24 ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.

ವೀರಪ್ಪ ಮೊಯ್ಲಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ

ಕನ್ನಡ ಅನುವಾದ, ಕನ್ನಡಿಗ ಅನುವಾದಕ ಅಥವಾ ಕನ್ನಡ ಕೃತಿಗೆ ಸಂಬಂಧಿಸಿ ಕನ್ನಡಕ್ಕೆ ಒಟ್ಟು 7 ಪ್ರಶಸ್ತಿಗಳು ಸಂದಿವೆ.  ಆಯಾ ಭಾಷೆಗಳಿಗೆ ಕುರಿತಂತೆ ಮೂವರನ್ನು ಒಳಗೊಂಡ ಸಮಿತಿ ರಚಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 

ಕನ್ನಡಕ್ಕೆ ಸಂಬಂಧಿಸಿದಂತೆ ಚಂದ್ರಕಾಂತ ಪೋಕಳೆ, ಪ್ರೊ. ಲಕ್ಷ್ಮೀ ಚಂದ್ರಶೇಖರ್, ಪ್ರೊ.ಒ.ಎಲ್. ನಾಗಭೂಷಣ್​ ಅವರು ಆಯ್ಕೆ ಸಮಿತಿಯಲ್ಲಿದ್ದರು. ಪ್ರಶಸ್ತಿಯನ್ನು ಇದೇ ವರ್ಷಾಂತ್ಯದಲ್ಲಿ ನೀಡಲಿದ್ದು, ಪ್ರಶಸ್ತಿ ಮೊತ್ತ ತಲಾ 50 ಸಾವಿರ ರೂ. ನಗದನ್ನು ಹೊಂದಿರಲಿದೆ.

ಕನ್ನಡಕ್ಕೆ ಸಂಬಂಧಿತ ಅನುವಾದ ಪ್ರಶಸ್ತಿ

* ಶ್ರೀನಾಥ್ ಪೆರೂರ್(ಅನುವಾದಕ), ಕೃತಿ: ಘಾಚರ್ ಘೋಚರ್​, ಇಂಗ್ಲಿಷ್​. ಮೂಲ: ಲೇ-ವಿವೇಕ್​ ಶಾನುಭಾಗ್, ಘಾಚರ್​ ಘೋಚರ್, ಕನ್ನಡ.

* ಎಸ್​. ನಟರಾಜ ಬೂದಾಳು (ಅನುವಾದಕ), ಕೃತಿ: ಸರಹಪಾದ, ಕನ್ನಡ. ಮೂಲ: ಸಂಗ್ರಹ ಕೃತಿ 'ಅಪಭ್ರಂಶ ದೇವನಾಗರಿ ಸರಹಪಾದ'.

* ಜಯಶ್ರೀ ಶ್ಯಾನ್​ಭಾಗ್(ಅನುವಾದಕಿ), ಕೃತಿ: ಸ್ವಪ್ನ ಸಾರಸ್ವತ್, ಕೊಂಕಣಿ. ಮೂಲ: ಲೇ-ಗೋಪಾಲಕೃಷ್ಣ ಪೈ, ಸ್ವಪ್ನ ಸಾರಸ್ವತ, ಕನ್ನಡ.

* ಸುಧಾಕರನ್ ರಾಮಂತಾಲಿ(ಅನುವಾದಕ), ಕೃತಿ: ಶಿಖರಸೂರ್ಯನ್, ಮಲಯಾಳಂ. ಮೂಲ: ಡಾ.ಚಂದ್ರಶೇಖರ ಕಂಬಾರ, ಶಿಖರಸೂರ್ಯ, ಕನ್ನಡ.

* ಎಚ್. ಶ್ಯಾಮಸುಂದರ್ ಸಿಂಗ್(ಅನುವಾದಕ), ಕೃತಿ: ಅತುಮ್ ಅಹವೊ ಯೊಂಬಾ ನೂಪ, ಮಣಿಪುರಿ. ಮೂಲ: ಆರ್​.ಕೆ.ನಾರಾಯಣ್, ದಿ ವೆಂಡರ್ ಆಫ್ ಸ್ವೀಟ್ಸ್, ಇಂಗ್ಲಿಷ್.

* ಸಂಧ್ಯಾ ಕುಂದ್ನಾನಿ (ಅನುವಾದಕಿ), ಕೃತಿ: ಉಹ ಲಂಬಿ ಖಾಮೋಶಿ, ಸಿಂಧಿ. ಮೂಲ: ಶಶಿ ದೇಶಪಾಂಡೆ, ದಟ್ ಲಾಂಗ್ ಸೈಲೆನ್ಸ್, ಇಂಗ್ಲಿಷ್.

* ರಂಗನಾಥ ರಾಮಚಂದ್ರ ರಾವ್(ಅನುವಾದಕ). ಕೃತಿ: ಓಂ ನಮೋ, ತೆಲುಗು. ಮೂಲ: ಶಾಂತಿನಾಥ ದೇಸಾಯಿ, ಓಂ ನಮೋ, ಕನ್ನಡ.

Follow Us:
Download App:
  • android
  • ios