ಸೋನಿ ಎಂಟರ್‌ಟೈನ್‌ಮೆಂಟ್ ನ ಅತ್ಯಂತ ಜನಪ್ರಿಯ ರಸಪ್ರಶ್ನೆ ಕಾರ್ಯಕ್ರಮ ಕೌನ್ ಬನೇಗಾ ಕರೋಡ್‌ಪತಿ (ಕೆಬಿಸಿ) 16ನೇ ಸೀಸನ್‌ ಗೆ ನಿರೂಪಕರಾಗಿ ಜನರ ಒತ್ತಾಯದ ಮೇರೆಗೆ ಮರಳಲು ಅಮಿತಾಬ್ ಬಚ್ಚನ್ ಸಜ್ಜಾಗಿದ್ದಾರೆ. ಅಂದ ಹಾಗೆ ನೀವು ಇದರಲ್ಲಿ ಭಾಗವಹಿಸಬೇಕೆಂದರೆ ನೋಂದಣಿ ಮಾಡಿಕೊಳ್ಳುವುದು ಹೇಗೆ?

ಸೋನಿ ಎಂಟರ್‌ಟೈನ್‌ಮೆಂಟ್ ನ ಅತ್ಯಂತ ಜನಪ್ರಿಯ ರಸಪ್ರಶ್ನೆ ಕಾರ್ಯಕ್ರಮ ಕೌನ್ ಬನೇಗಾ ಕರೋಡ್‌ಪತಿ (ಕೆಬಿಸಿ) 16ನೇ ಸೀಸನ್‌ ನಡೆಸಲು ಸಜ್ಜಾಗಿದೆ. ಈ ನಡುವೆ ಕಳೆದ ಬಾರಿಯೇ ನಟ ಅಮಿತಾಬ್ ಬಚ್ಚನ್ ತಾವಿನ್ನು ಈ ಕಾರ್ಯಕ್ರಮದ ನಿರೂಪಕರಾಗುವುದಿಲ್ಲ ಎಂದು ಘೋಷಿಸಿದ್ದರು. ಆದರೆ, ಈಗ ಜನರ ಒತ್ತಾಯದ ಮೇರೆಗೆ ನಟ ಈ ಸೀಸನ್ನನ್ನು ಸಹ ನಡೆಸಿಕೊಡಲು ಒಪ್ಪಿಕೊಂಡಿದ್ದಾರೆ. 

ಮಂಗಳವಾರ, ಕಾರ್ಯಕ್ರಮದ ತಯಾರಕರು ಹೊಸ ಪ್ರೋಮೋವನ್ನು ಬಿಡುಗಡೆ ಮಾಡಿದ್ದು, ಈ ಬಾರಿಯೂ ನಿರೂಪಣೆ ಬಿಗ್ ಬಿಯದೇ ಎಂದು ಬಹಿರಂಗಪಡಿಸಿದ್ದಾರೆ. 2000ನೇ ಇಸವಿಯಲ್ಲಿ ಕೆಬಿಸಿ ಕಾರ್ಯಕ್ರಮದ ನಿರೂಪಕರಾಗಿ ಬಚ್ಚನ್ ಬಂದಾಗಿನಿಂದ ಒಂದು ಸೀಸನ್ ಹೊರತುಪಡಿಸಿ ಎಲ್ಲವನ್ನೂ ಅವರೇ ನಡೆಸಿಕೊಟ್ಟಿದ್ದಾರೆ.

ಪ್ರೋಮೋವನ್ನು ಹಂಚಿಕೊಳ್ಳುವ ಮೂಲಕ ಆಯೋಜಕರು ಏಪ್ರಿಲ್ 26ರಿಂದ ಕಾರ್ಯಕ್ರಮಕ್ಕೆ ನೋಂದಣಿ ಪ್ರಾರಂಭವಾಗಲಿದೆ ಎಂದು ಬಹಿರಂಗಪಡಿಸಿದರು. 

ನಾಯಕನೇ ನಾಯಕಿಯಾಗೂ ಅಭಿನಯಿಸಿದ ಈ ಚಿತ್ರ ಬಾಲಿವುಡ್‌ನ ಮೊದಲ ಬಾಕ್ಸಾಫೀಸ್ ಹಿಟ್!

ನೋಂದಣಿ ಹೇಗೆ?
ಹಲವರು ಪ್ರಶ್ನೆಗೆ ಉತ್ತರಿಸಿ ಲಕ್ಷಗಳಿಂದ ಹಿಡಿದು 7 ಕೋಟಿಯವರೆಗೆ ಗೆದ್ದುಕೊಂಡಿರುವುದನ್ನು ನಾವೀಗಾಗಲೇ ನೋಡಿದ್ದೀವಿ. ಕೌನ್ ಬನೇಗಾ ಕೋಟ್ಯಾಧಿಪತಿಗೆ ಅರ್ಜಿ ಸಲ್ಲಿಸಲು ನೀವು ಅರ್ಹತೆ ಪಡೆಯ ಮಾನದಂಡಗಳಿವೆ. ಭಾರತದಲ್ಲಿ ಎಲ್ಲೆಡೆ ಆಡಿಷನ್ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿ ನಮೂನೆ ಮತ್ತು ಮಾಹಿತಿಯನ್ನು ಆನ್‌ಲೈನ್ ಮೋಡ್‌ನಲ್ಲಿ ಸಲ್ಲಿಸಬಹುದು. ಕೌನ್ ಬನೇಗಾ ಕರೋಡ್ಪತಿಯ ನೋಂದಣಿ ಪ್ರಕ್ರಿಯೆಯ ವಿವರ ಇಲ್ಲಿದೆ. 

ಅರ್ಹತಾ ಮಾನದಂಡ
ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು ಮತ್ತು ಭಾರತದ ನಾಗರಿಕರಾಗಿರಬೇಕು.
ಅಕಾಡೆಮಿಯ ಅರ್ಹತೆ ಅಗತ್ಯವಿಲ್ಲ.
ಪ್ರಶ್ನೆಯು ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ನಾಲ್ಕು ಆಯ್ಕೆಗಳೊಂದಿಗೆ ಕಾಣಿಸಬಹುದು.
ನಿಯಮಗಳು ಮತ್ತು ನಿಬಂಧನೆಗಳನ್ನು ಭಾಗವಹಿಸುವವರು ಅನುಸರಿಸಬೇಕು.

ಕನ್ನಡಕ್ಕೆ ಬರ್ತಿದಾರೆ ಕಿಯಾರಾ ಅದ್ವಾನಿ; ಯಶ್ ತಾವು ಹೇಳ್ದಂಗೇ ಬಾಲಿವುಡ್‌ನೇ ಇಲ್ಲಿಗೆ ಕರೆಸ್ತಿದಾರೆ!

KBC ನೋಂದಣಿ 2024 ಕ್ಕೆ ಅಗತ್ಯವಿರುವ ದಾಖಲೆಗಳು
ನೀವು ಕಾನ್ ಬನೇಗಾ ಕರೋಡ್ ಪತಿಯಲ್ಲಿ ಭಾಗವಹಿಸುತ್ತಿದ್ದರೆ, ನೀವು ಮಾನ್ಯವಾದ ವಿಳಾಸ ಪುರಾವೆಗಳೊಂದಿಗೆ ಕೆಲವು ದಾಖಲೆಗಳನ್ನು ಹೊಂದಿರಬೇಕು. ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಫೋಟೋ ಮತ್ತು ಛಾಯಾಚಿತ್ರ ಬೇಕು.
ಜೊತೆಗೆ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಜನನ ಪ್ರಮಾಣಪತ್ರ, ಪಾಸ್ಪೋರ್ಟ್, ವಿದ್ಯುತ್ ಬಿಲ್, ಪಾಸ್ಪೋರ್ಟ್ ವಿಳಾಸ, ಚಾಲನೆ ಪರವಾನಗಿ ಯಾವುದನ್ನೂ ನೀಡಬಹುದು. 

ಮೊದಲು ನೀವು ಸೋನಿ ಲೈವ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಆನ್‌ಲೈನ್ ನೋಂದಣಿಗೆ ಅರ್ಜಿ ಸಲ್ಲಿಸಬೇಕು. ನಂತರ ಎರಡನೇ ಪ್ರಕ್ರಿಯೆಯು ಸ್ಕ್ರೀನಿಂಗ್ ಆಗಿರುತ್ತದೆ. ಸ್ಕ್ರೀನಿಂಗ್ ಸುತ್ತಿನಲ್ಲಿ ಅರ್ಹತೆ ಪಡೆದವರನ್ನು ಆಡಿಷನ್‌ಗೆ ಆಹ್ವಾನಿಸಲಾಗುತ್ತದೆ. ಅಂತಿಮವಾಗಿ ವ್ಯಕ್ತಿಗಳಿಗೆ ಸಂದರ್ಶನ ನಡೆಯಲಿದೆ.