Asianet Suvarna News Asianet Suvarna News

'ನನ್ನ ಹತ್ಯೆಯಾದರೂ ಸರಿ, ಕಾಶ್ಮೀರ ಯಾವತ್ತಿದ್ದರೂ ಭಾರತದ ಭಾಗ, ಪಾಕ್‌ಗೆ ಹಕ್ಕಿಲ್ಲ'

* ಕಣಿವೆ ನಾಡಿನಲ್ಲಿ ಹಿಂಸಾಚಾರ, ಹಿಂದೂಗಳ ಹತ್ಯೆ

* ಸುಪಿಂದರ್ ಕೌರ್ ಶ್ರದ್ಧಾಂಜಲಿ ಸಭೆಯಲ್ಲಿ ಫಾರೂಕ್ ಅಬ್ದುಲ್ಲಾ ಮಹತ್ವದ ಹೇಳಿಕೆ

* ನನ್ನ ಹತ್ಯೆಯಾದರೂ ಸರಿ, ಆದರೆ ಕಾಶ್ಮೀರ ಯಾವತ್ತಿದ್ದರೂ ಭಾರತದ ಭಾಗ, ಪಾಕ್‌ಗೆ ಹಕ್ಕಿಲ್ಲ

Kashmir will remain part of India even if I am killed Farooq Abdullah pod
Author
Bangalore, First Published Oct 14, 2021, 11:36 AM IST

ಶ್ರೀನಗರ(ಅ.14): ಕಾಶ್ಮೀರವು(Kashmir) ಯಾವತ್ತಿಗೂ ಪಾಕಿಸ್ತಾನದ(Pakistan) ಭಾಗವಾಗುವುದಿಲ್ಲ, ನಾವು ಭಾರತದ ಭಾಗವಾಗಿದ್ದೇವೆ ಹಾಗೂ ಯಾವತ್ತಿಗೂ ಹೀಗೇ ಇರಲಿದೆ. ಇದಕ್ಕಾಗಿ ನನ್ನನ್ನು ಹತ್ಯೆಗೈದರೂ ಪರವಾಗಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್(National Conference) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ(Farooq Abdullah) ಹೇಳಿದ್ದಾರೆ. ಸರ್ಕಾರಿ ಶಾಲೆಯ ಪ್ರಾಂಶುಪಾಲರಾದ ಸುಪಿಂದರ್ ಕೌರ್ ಅವರಿಗೆ ಗೌರವ ಸಲ್ಲಿಸಲು ಬುಧವಾರ ಇಲ್ಲಿನ ಗುರುದ್ವಾರದಲ್ಲಿ ಆಯೋಜಿಸಲಾಗಿದ್ದ ಸಂತಾಪ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಬ್ದುಲ್ಲಾ, ಕಾಶ್ಮೀರದ ಜನರು ಧೈರ್ಯದಿಂದ ಇರಬೇಕು ಮತ್ತು ಕೊಲೆಗಾರರ ವಿರುದ್ಧ ಒಟ್ಟಾಗಿ ಹೋರಾಡಬೇಕು ಎಂದಿದ್ದಾರೆ. ಇನ್ನು ಕೌರ್ ಅವರನ್ನು ಅಕ್ಟೋಬರ್ 7 ರಂದು ಭಯೋತ್ಪಾದಕರು ಹೊಡೆದುರುಳಿಸಿದ್ದರು.

'ನಾವು ಭಾರತದ ಭಾಗ ಮತ್ತು ನಾವು ಎಂದೆಂದಿಗೂ ಭಾರತದ ಭಾಗವಾಗಿರುತ್ತೇವೆ'

ಶ್ರೀನಗರದ(Srinagar) ಲೋಕಸಭಾ ಸದಸ್ಯ(Loksabha Member) ಅಬ್ದುಲ್ಲಾ, "ನಾವು ಈ ಪ್ರಾಣಿಗಳ ವಿರುದ್ಧ ಹೋರಾಡಬೇಕು. ಕಾಶ್ಮೀರ ಎಂದಿಗೂ ಪಾಕಿಸ್ತಾನವಾಗುವುದಿಲ್ಲ, ನೆನಪಿಡಿ. ನಾವು ಭಾರತದ ಭಾಗವಾಗಿದ್ದೇವೆ ಮತ್ತು ಏನೇ ಆಗಲಿ ನಾವು ಭಾರತದ ಭಾಗವಾಗಿರುತ್ತೇವೆ. ಅವರು ನನಗೆ ಗುಂಡು ಹಾರಿಸಿದರೂ ಅದನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ನಾವು ನಮ್ಮ ಮನೋಬಲವನ್ನು ಹೆಚ್ಚಿಸಿಕೊಳ್ಳಬೇಕು - ಫಾರೂಕ್ ಅಬ್ದುಲ್ಲಾ

ಕೌರ್ ಹತ್ಯೆಗೆ ದುಃಖ ವ್ಯಕ್ತಪಡಿಸಿದ ಅಬ್ದುಲ್ಲಾ, 1990 ರ ದಶಕದಲ್ಲಿ ಸಿಖ್(Sikh) ಸಮುದಾಯವು ಕಾಶ್ಮೀರವನ್ನು ತೊರೆಯಲಿಲ್ಲ, ಅನೇಕ ಜನರು ಭಯದಿಂದ ಕಣಿವೆಯನ್ನು ತೊರೆದರು. ನಾವು ನಮ್ಮ ಮನೋಬಲವನ್ನು ಹೆಚ್ಚಿಸಿಕೊಂಡು ಧೈರ್ಯದಿಂದ ಇರಬೇಕು ಎಂದು ಹೇಳಿದರು.

ಶಿಕ್ಷಕನನ್ನು ಕೊಲ್ಲುವುದು ಇಸ್ಲಾಂ ಧರ್ಮ ಪಾಲಿಸಿದಂತಲ್ಲ

'ನಾವು ಧೈರ್ಯದಿಂದ ಒಟ್ಟಾಗಿ ಹೋರಾಡಬೇಕು. ಎಲ್ಲರ ನಿರ್ಗಮನದ ನಂತರವೂ ಸಿಖ್ ಸಮುದಾಯ ಮಾತ್ರ ಇಲ್ಲಿ ಉಳಿದಿದೆ. ಚಿಕ್ಕ ಮಕ್ಕಳಿಗೆ ಕಲಿಸುವ ಶಿಕ್ಷಕನನ್ನು ಕೊಲ್ಲುವುದು ಇಸ್ಲಾಂ(Islam) ಸೇವೆ ಮಾಡಿದಂತಲ್ಲ ಎಂದಿದ್ದಾರೆ.

'ಮುಸ್ಲಿಮರು, ಸಿಖ್ಖರು, ಹಿಂದೂಗಳು ಮತ್ತು ಕ್ರಿಶ್ಚಿಯನ್ನರು ಎಲ್ಲರೂ ವಿರುದ್ಧ ಒಟ್ಟಾಗಿ ಹೋರಾಡಬೇಕಾಗುತ್ತದೆ'

ಗುರುದ್ವಾರದ ಹೊರಗಿನ ಸಂಭಾಷಣೆಯಲ್ಲಿ, ಅಬ್ದುಲ್ಲಾ, "ಅವರು (ಭಯೋತ್ಪಾದಕರು) ಎಂದಿಗೂ ಯಶಸ್ವಿಯಾಗುವುದಿಲ್ಲ ಮತ್ತು ಅವರ ಪಿತೂರಿ ವಿಫಲಗೊಳ್ಳುತ್ತದೆ. ಆದರೆ ನಾವೆಲ್ಲರೂ - ಮುಸ್ಲಿಮರು, ಸಿಖ್ಖರು, ಹಿಂದೂಗಳು ಮತ್ತು ಕ್ರಿಶ್ಚಿಯನ್ನರು ಅವರ ವಿರುದ್ಧ ಒಟ್ಟಾಗಿ ಹೋರಾಡಬೇಕಾಗುತ್ತದೆ ಎಂದಿದ್ದಾರೆ.

ಭಾರತದಲ್ಲಿ ದ್ವೇಷದ ಸುಳಿ: ಫಾರೂಕ್ ಅಬ್ದುಲ್ಲಾ

ಭಾರತದಲ್ಲಿ "ದ್ವೇಷದ ಬಿರುಗಾಳಿ" ಹುಟ್ಟಿಕೊಂಡಿದೆ ಮತ್ತು ಮುಸ್ಲಿಂ, ಹಿಂದೂ ಮತ್ತು ಸಿಖ್ ಸಮುದಾಯಗಳು ವಿಭಜನೆಯಾಗುತ್ತಿವೆ ಎಂದು ಅಬ್ದುಲ್ಲಾ ಹೇಳಿದ್ದಾರೆ. ಈ ವಿಭಜನೆಯ ರಾಜಕೀಯ ನಿಲ್ಲಬೇಕು, ಇಲ್ಲದಿದ್ದರೆ ಭಾರತ ಉಳಿಯುವುದಿಲ್ಲ. ನಾವು ಭಾರತವನ್ನು ಉಳಿಸಬೇಕಾದರೆ ನಾವೆಲ್ಲರೂ ಒಟ್ಟಾಗಿ ಬದುಕಬೇಕು ಮತ್ತು ಆಗ ಮಾತ್ರ ನಾವು ಮುಂದುವರಿಯಬಹುದು ಎಂದಿದ್ದಾರೆ

Follow Us:
Download App:
  • android
  • ios