ಲಖನೌ[ಮಾ.17]: ಕಾಶ್ಮೀರದ ರಾಜ್ಯಪಾಲರಿಗೆ ಮದ್ಯಪಾನ ಹಾಗೂ ಗಾಲ್ಫ್ ಆಡುವುದು ಬಿಟ್ಟರೆ ಬೇರೇನೂ ಕೆಲಸ ಇಲ್ಲ ಎಂದು ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಹಾಗೂ ಹಾಲಿ ಗೋವಾ ರಾಜ್ಯಪಾಲರಾಗಿರುವ ಸತ್ಯಪಾಲ್‌ ಮಲಿಕ್‌ ಹೇಳಿದ್ದಾರೆ.

ಉತ್ತರ ಪ್ರದೇಶದ ಭಾಗ್‌ಪತ್‌ನಲ್ಲಿ ಮಾತನಾಡಿದ ಅವರು, ರಾಜ್ಯಪಾಲರಿಗೆ ಏನೂ ಕೆಲಸ ಇರುವುದಿಲ್ಲ. ಕಾಶ್ಮೀರದಲ್ಲಂತೂ ಮದ್ಯಪಾನ ಮಾಡುವುದು ಮತ್ತು ಗಾಲ್ಫ್ ಆಡುವುದು ಬಿಟ್ಟರೆ ರಾಜ್ಯಪಾರಿಗೆ ಮತ್ಯಾವ ಕೆಲಸವೂ ಇರುವುದಿಲ್ಲ. ಬೇರೆ ಕಡೆಯಲ್ಲಿ ರಾಜ್ಯಪಾಲರು ಆರಾಮಾಗಿ ಇರುತ್ತಾರೆ. ಯಾವ ಕಿರಿ ಕಿರಿಯೂ ಇರುವುದಿಲ್ಲ ಎಂದು ಹೇಳಿದ್ದಾರೆ.

ಕಾಶ್ಮೀರದ 370ನೇ ವಿಧಿ ರದ್ದು ವೇಳೆ ಮಲ್ಲಿಕ್‌ ಅಲ್ಲಿನ ರಾಜ್ಯಪಾಲರಾಗಿದ್ದರು.