ಚೀನಾ ವಸ್ತುಗಳನ್ನು ಭಾರತೀಯರು ನಿಷೇಧಿಸುತ್ತಿರುವ ಬೆನ್ನಲ್ಲೇ ಇದೀಗ ಬಾಲಿವುಡ್ ಯುವನಟ ಕಾರ್ತಿಕ್ ಆರ್ಯನ್ ಚೈನೀಸ್ ಫೋನ್‌ ಜೊತೆಗಿನ ಕೋಟಿ ಬೆಲೆ ಬಾಳುವ ಡೀಲ್ ಒಂದನ್ನು ಕ್ಯಾನ್ಸಲ್ ಮಾಡಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ.

 
 
 
 
 
 
 
 
 
 
 
 
 

Yes. I am that Bua who needs to click the sky every time there is a cloud ⛅️

A post shared by KARTIK AARYAN (@kartikaaryan) on Jul 8, 2020 at 1:09am PDT

ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್ ಒಂದರಲ್ಲಿ ಬೇರೆ ಬ್ರ್ಯಾಂಡ್‌ನ ಮೊಬೈಲ್ ಫೋನ್‌ ಜೊತೆಗಿನ ಫೋಟೋ ಪೋಸ್ಟ್ ಮಾಡಿದ ಬೆನ್ನಲ್ಲೇ ಇಂತಹದೊಂದು ಸುದ್ದಿ ಕೇಳಿ ಬಂದಿದೆ. ಒಪ್ಪೋ ಮೊಬೈಲ್ ಫೋನ್‌ ಜಾಹೀರಾತಿನಲ್ಲಿ ಕಾರ್ತಿಕ್ ಕಾಣಿಸಿಕೊಳ್ಳುತ್ತಿದ್ದರು. ಚೈನೀಸ್ ಮೊಬೈಲ್ ಬ್ರಾಂಡ್ ಒಪ್ಪೋಗೆ ಕಾರ್ತಿಕ್ ಜಾಹೀರಾತು ನೀಡುತ್ತಿದ್ದರು.

ಚೈನೀಸ್ ಪ್ರಾಡಕ್ಟ್ ಆ್ಯಡ್‌ ನೀಡದಂತೆ ಸಾರಾ, ದೀಪಿಕಾ ಸೇರಿ ಸೆಲೆಬ್ರಿಟಿಗಳಿಗೆ ಸೂಚನೆ

ಇತ್ತೀಚೆಗಷ್ಟೇ ಕಾರ್ತಿಕ್ ಕ್ಲೀನ್ ಶೇವ್ ಮಾಡಿಕೊಂಡು ಫೋಟೋ ಪೋಸ್ಟ್ ಮಾಡಿದ್ದರು. ಲಾಕ್‌ಡೌನ್ ಸಂದರ್ಭ ರಣವೀರ್ ಸಿಂಗ್, ವಿಕ್ಕಿ ಕೌಶಲ್, ಅಕ್ಷಯ್ ಕುಮಾರ್, ಹೃತಿಕ್ ರೋಷನ್ ಸೇರಿ ಹಲವು ಹೀರೋಗಳು ಲಾಕ್‌ಡೌನ್ ಸಂದರ್ಭ ಬಿಯರ್ಡ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಭಾರತೀಯ ವ್ಯಾಪಾರಿ ಒಕ್ಕೂಟ ಚೀನಾ ವಸ್ತುಗಳನ್ನು ಭಾರತದಿಂದ ನಿಷೇಧಿಸುವ ಅಭಿಯಾನವನ್ನೇ ಆರಂಭಿಸಿ, ಚೀನಾ ವಸ್ತುಗಳಿಗೆ ಜಾಹೀರಾತು ನೀಡಬಾರದು ಎಂದು ಸಿಐಎಟಿ ಸಲೆಬ್ರಿಟಿಗಳಿಗೆ ಪತ್ರದ ಮೂಲಕ ತಿಳಿಸಿತ್ತು.