ನವದೆಹಲಿ(ಅ. 16) ನೆರೆ ಹಾವಳಿಯಿಂದ ತತ್ತರಿಸುತ್ತಿರುವ  ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಯ ನೀಡಿದ್ದಾರೆ.  ಕರ್ನಾಟಕದೊಂದಿಗೆ ನಾವಿದ್ದೇವೆ ಎಂದು ಟ್ವಿಟ್ ಮೂಲಕ ತಿಳಿಸಿದ್ದಾರೆ.

ಕರ್ನಾಟಕದ ಸಿಎಂ ಬಿಎಸ್ ಯಡಿಯೂರಪ್ಪ ಅವರೊಂದಿಗೆ ಮಾತನಾಡಿದ್ದೇನೆ. ಕರ್ನಾಟಕದ ಪ್ರವಾಹ ಸ್ಥಿತಿಯ ಮಾಹಿತಿ ಪಡೆದುಕೊಂಡಿದ್ದೇನೆ. ಕರ್ನಾಟಕದ ಸಹೋದರ-ಸಹೋದರಿಯರೊಂದಿಗೆ ನಾವಿದ್ದೇವೆ. ರಕ್ಷಣೆಗೆ ಕೇಂದ್ರ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂದು ತಿಳಿಸಿದ್ದಾರೆ.

ಉತ್ತರ ಕರ್ನಾಟಕದ ಪರಿಸ್ಥಿತಿ ಹೇಗಿದೆ?

ಉತ್ತರ ಕರ್ನಾಟಕ ಭಾಗ ಈ ವರ್ಷ ಎರಡನೇ ಸಾರಿ ಪ್ರವಾಹ ಸ್ಥಿತಿ ಅನುಭವಿಸುತ್ತಿದೆ. ಇನ್ನೊಂದು ಕಡೆ ಮಹಾರಾಷ್ಟ್ರದಲ್ಲಿಯೂ ಧಾರಾಕಾರ ಮಳೆ ಸುರಿಯುತ್ತಿದ್ದು ಜಲಾಶಯಗಳಿಂದ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಲಾಗುತ್ತಿದೆ. 

ಕಳೆದ ವರ್ಷ ಪ್ರವಾಹವಾದಾಗಲೂ ರಾಜ್ಯ ಸರ್ಕಾರ ಪರಿಹಾರಕ್ಕೆ ಬೇಡಿಕೆ ಇಟ್ಟಿತ್ತು. ಕೇಂದ್ರದ ತಂಡ ಸಹ ಬಂದು ಪರಿಸ್ಥಿತಿ ಅವಲೋಕನ ಮಾಡಿಕೊಂಡು ಹೋಗಿತ್ತು. ಕೇಂದ್ರ ಸಚಿವರ ಆದಿಯಾಗಿ ಉತ್ತರ ಕರ್ನಾಟಕದ ನೆರೆ ಪರಿಸ್ಥಿತಿ ಅವಲೋಕನ ಮಾಡಿದ್ದರು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು (ಎನ್‌ಡಿಆರ್‌ಎಫ್‌) ಕರ್ನಾಟಕಕ್ಕೆ 897 ಕೋಟಿ ರೂಪಾಯಿ ನೆರೆ ಪರಿಹಾರ ಬಿಡುಗಡೆ ಮಾಡಿತ್ತು.