'ಡಾರ್ಲಿಂಗ್‌ ಮಾಡ್ಕೊಂಡು ಬೆಡ್‌ರೂಮ್‌ಗೆ ತಂದಿದ್ದಾರೆ..' ಸ್ಮೃತಿ ಇರಾನಿ ವಿರುದ್ಧ ಬಿವಿ ಶ್ರೀನಿವಾಸ್‌ 'ಸೆಕ್ಸಿಸ್ಟ್‌' ಹೇಳಿಕೆ!

ಕರ್ನಾಟಕ ಕಾಂಗ್ರೆಸ್ ನಾಯಕ ಶ್ರೀನಿವಾಸ್ ಬಿವಿ ಅವರು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು 'ಕಿವುಡ ಮತ್ತು ಮೂಗಿ' ಎಂದು ನಿಂದಿಸುವ ಮೂಲಕ ಸುದ್ದಿಯಾಗಿದ್ದು, ಬಿಜೆಪಿ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ.

Karnataka Congress Leader BV Srinivas Insults Smriti Irani she is deaf and dumb san

ನವದೆಹಲಿ (ಮಾ.27): ಕರ್ನಾಟಕ ಕಾಂಗ್ರೆಸ್ ನಾಯಕ ಶ್ರೀನಿವಾಸ್ ಬಿವಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು 'ಕಿವುಡ ಮತ್ತು ಮೂಗಿ' ಎಂದು ನಿಂದಿಸಿದ್ದು, ಇದಕ್ಕೆ ಬಿಜೆಪಿಯಿಂದ ದೊಡ್ಡ ಮಟ್ಟದ ಖಂಡನೆ ವ್ಯಕ್ತವಾಗಿದೆ. ಅದಲ್ಲದೆ, ಹಣದುಬ್ಬರದ ಮಾಟಗಾತಿಯನ್ನು ಡಾರ್ಲಿಂಗ್‌ ಮಾಡಿಕೊಂಡು ಮಲಗುವ ಕೋಣೆಗೆ ಸ್ಮೃತಿ ಇರಾನಿ ಕರೆತಂದಿದ್ದಾಳೆ ಎಂದು ಹೇಳುವ ಮೂಲಕ 'ಸೆಕ್ಸಿಸ್ಟ್‌' ಕಾಮೆಂಟ್‌ ಕೂಡ ಮಾಡಿದ್ದಾರೆ. ಕಾಂಗ್ರೆಸ್‌ನ ಯುವ ನಾಯಕ ಹೇಳಿರುವ ಹೇಳಿಕೆ ನಾಚಿಕೆಗೇಡಿನದ್ದು ಎಂದು ಟೀಕೆ ಮಾಡಿದೆ.  ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಅವರು ಪ್ರಧಾನಿ ಮೋದಿಯವರ ಉಪನಾಮಕ್ಕೆ ಮಾಡಿದ ಅವಮಾನವನ್ನು ಉಲ್ಲೇಖಿಸಿದ್ದಾರೆ. “ಮೊದಲು ಅವರು ಒಬಿಸಿ ಸಮುದಾಯವನ್ನು ಅವಮಾನಿಸಿದರು, ನಂತರ ಅವರು ಪತ್ರಕರ್ತರು, ಸಾವರ್ಕರ್, ನ್ಯಾಯಾಲಯ, ಸಂವಿಧಾನವನ್ನು ಅವಮಾನಿಸಿದರು, ಸ್ಪೀಕರ್ ಮೇಲೆ ಪೇಪರ್ ಎಸೆದು ಈಗ ಎಲ್ಲರಿಗೂ ಅವಮಾನ ಮಾಡುತ್ತಿದ್ದಾರೆ. ದೇಶದ ಮಹಿಳೆಯರು ವಿಶೇಷವಾಗಿ ಕಠಿಣ ಪರಿಶ್ರಮದಿಂದ ತಲುಪಿದವರನ್ನೂ ಅವಮಾನ ಮಾಡುವ ಹಂತಕ್ಕೆ ತಲುಪಿದ್ದಾರೆ' ಎಂದು ಟೀಕಿಸಿದೆ.

ಇದರಲ್ಲಿ ಸ್ಮೃತಿ ಇರಾನಿ ಅವರ ತಪ್ಪೇನಿದೆ. ಅವರು ಸಾಮಾನ್ಯ ಕುಟುಂಬದಿಂದ ಬಂದು, ರಾಹುಲ್‌ ಗಾಂಧಿಯನ್ನು ಸೋಲಿಸಿದರು ಅನ್ನೋ ಕಾರಣವೇ. ಇದೇ ಜನರು ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿಯ ಬಗ್ಗೆಯೂ ಇದೇ ರೀತಿಯ ಮಾತುಗಳನ್ನಾಡಿದ್ದರು. ಇದು ಶ್ರೀನಿವಾಸ್‌ ಅವರ ಮಾತುಗಳಲ್ಲ. ಇಡೀ ಕಾಂಗ್ರೆಸ್‌ ನವರದ್ದೇ ಇದೇ ಮನಸ್ಥಿತಿ. ಇದು ರಾಹುಲ್‌ ಗಾಂಧಿಯವರ ಮಾತುಗಳು.  ಪ್ರಿಯಾಂಕಾ ಗಾಂಧಿ ವಾದ್ರಾ, ಸೋನಿಯಾ ಗಾಂಧಿ ಅವರಲ್ಲಿ ನಿಮಗೆ ಈ ಮಾತಿಗೆ ಸಹಮತ ಇದೆಯೇ ಎಂದು ಕೇಳಬೇಕಾಗಿದೆ. ಇದನ್ನು ನಾನು ಕಠಿಣ ಶಬ್ದದಿಂದ ಖಂಡನೆ ಮಾಡುತ್ತೇನೆ' ಎಂದು ಬರೆದುಕೊಂಡಿದ್ದಾರೆ.

ಮತ್ತೊಬ್ಬ ಬಿಜೆಪಿ ನಾಯಕ ಆರ್‌ಪಿ ಸಿಂಗ್ ಅವರು ಈ ಹೇಳಿಕೆಯನ್ನು ಅವಮಾನಕರ ಮತ್ತು ಕೆಟ್ಟ ಮನಸ್ಥಿತಿಯಿಂದ ಕೂಡಿದ ಹೇಳಿಕೆ ಎಂದಿದ್ದಾರೆ. “ಯಾವುದೇ ಮಹಿಳೆ ಅಥವಾ ಸಂಸದರ ವಿರುದ್ಧ ನೀವು ಈ ರೀತಿಯ ಟೀಕೆಯನ್ನು ಹೇಗೆ ಮಾಡುತ್ತೀರಿ? ಈ ಬಗ್ಗೆ ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ಅಥವಾ ರಾಹುಲ್ ಗಾಂಧಿಯ ಯಾವುದೇ ಕಾಂಗ್ರೆಸ್ ನಾಯಕರು ಯಾಕೆ ಮಾತನಾಡುತ್ತಿಲ್ಲ' ಎಂದು ಪ್ರಶ್ನೆ ಮಾಡಿದ್ದಾರೆ.

ಇದಲ್ಲದೆ, ಕಾಂಗ್ರೆಸ್ ಮತ್ತು ಬಿಜೆಪಿ ಪರಸ್ಪರ ವಾಕ್ಸಮರಗಳಲ್ಲಿಯೇ ಕಾಲ ಕಳೆಯುತ್ತಿದೆ ಮತ್ತು ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿಲ್ಲ ಎಂದು ಜೆಡಿಎಸ್ ಮುಖಂಡ ತನ್ವೀರ್ ಅಹಮದ್ ಹೇಳಿದ್ದಾರೆ, “ಇಂದು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನಡೆಯುತ್ತಿರುವ ಎಲ್ಲವನ್ನೂ ನಾನು ಖಂಡಿಸುತ್ತೇನೆ ಏಕೆಂದರೆ ಯಾರೂ ಅಭಿವೃದ್ಧಿಯತ್ತ ಕೆಲಸ ಮಾಡುತ್ತಿಲ್ಲ. ಎಲ್ಲರೂ ಪರಸ್ಪರ ಟೀಕೆಗಳನ್ನು ಮಾಡುವುದರಲ್ಲಿಯೇ ನಿರತರಾಗಿದ್ದಾರೆ. ಶ್ರೀನಿವಾಸ್ ಹೇಳಿದ್ದನ್ನು ನಾನು ಸಂಪೂರ್ಣವಾಗಿ ಖಂಡಿಸುತ್ತೇನೆ ಎಂದಿದ್ದಾರೆ.

ಮೇಕಪ್​ಮ್ಯಾನ್​ ಮಾಡಿದ ಅವಮಾನ ನೆನೆದ ಸಚಿವೆ ಸ್ಮೃತಿ ಇರಾನಿ

ಚಿಕ್ಕ ಕ್ಲಿಪ್‌ ಹಂಚಿಕೊಂಡಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ, "ಈ ಅಸಭ್ಯ, ಸೆಕ್ಸಿಸ್ಟ್‌ ವ್ಯಕ್ತಿ ಭಾರತೀಯ ಯುವ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದಾರೆ. ಮಹಿಳಾ ಸಚಿವೆಯೊಬ್ಬರು ಅಮೇಥಿಯಿಂದ ರಾಹುಲ್ ಗಾಂಧಿಯನ್ನು ಸೋಲಿಸಿದರು ಎಂಬ ಕಾರಣಕ್ಕೆ ಇದು ಅವರ ಹತಾಶೆಯ ಲಕ್ಷಣವಾಗಿದೆ. ಕಾಂಗ್ರೆಸ್ ಇಂದು ದೇಶದಲ್ಲಿಯೇ ಅಪ್ರಸ್ತುತವಾಗುವ ಹಾದಿಯಲ್ಲಿದೆ' ಎಂದು ಟೀಕಿಸಿದ್ದಾರೆ.

ನಿನ್ನನ್ನ ನೀನು ಸಾಯಿಸಿಕೊಳ್ಳಬೇಡ ಅಂದಿದ್ದೆ; ಸುಶಾಂತ್ ಸಿಂಗ್ ನೆನೆದು ಕಣ್ಣೀರಿಟ್ಟ ಸ್ಮೃತಿ ಇರಾನಿ

ಕಾಂಗ್ರೆಸ್ ಮಾಜಿ ನಾಯಕ ಅನಿಲ್ ಕೆ ಆಂಟನಿ ಕೂಡ ಶ್ರೀನಿವಾಸ್ ಅವರ ಹೇಳಿಕೆಯನ್ನು ಟೀಕಿಸಿದ್ದಾರೆ. ನಾಚಿಕೆಗೇಡಿಗಳೇ, ನಾನು ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡಿದ ದಿನದಿಂದ ನನ್ನ ಇನ್‌ಬಾಕ್ಸ್‌ಗಳು ಮತ್ತು ಕಾಮೆಂಟ್ ವಿಭಾಗಗಳು ಅವರ ಕೈಕೆಳಗಿನವರಿಂದ ಹೊಲಸು ನಿಂದನೆಗಳಿಂದ ತುಂಬಿ ಹೋಗಿತ್ತು. 2024 ಭಾರತದ ಮಹಾನ್ ಜನರಿಗೆ ಈ ನಕಾರಾತ್ಮಕ ಜನರನ್ನು ಇತಿಹಾಸದ ಕಸದ ಬುಟ್ಟಿಗೆ ಕಳುಹಿಸಲು ಉತ್ತಮ ಅವಕಾಶವಾಗಿದೆ ಎಂದು ಟ್ವೀಟ್‌ ಮಾಡಿದ್ದಾರೆ.

Latest Videos
Follow Us:
Download App:
  • android
  • ios