Asianet Suvarna News Asianet Suvarna News

ತಬ್ಲಿಘಿಗಳನ್ನು ಹೀರೋಗಳು ಎಂದ ಕರ್ನಾಟಕ ಕೇಡರ್ IAS ಅಧಿಕಾರಿ!

ಒಂದೆಡೆ ಮುಗಿಯದ ಕೊರೋನಾ ಆತಂಕ/ ಸೋಶಿಯಲ್ ಮೀಡಿಯಾದಲ್ಲಿ ವಿವಾದ ಎಬ್ಬಿಸಿದ ಐಎಎಸ್ ಅಧಿಕಾರಿ ಟ್ವೀಟ್/ ಸಮುದಾಯದ ಓಲೈಕೆಗೆ ಹೀಗೆಲ್ಲ ಮಾಡಬೇಕಾ?

Karnataka cadre IAS officer Mohammad Mohsin has said Tablighi Jamaat workers are heroes
Author
Bengaluru, First Published Apr 28, 2020, 10:34 PM IST
  • Facebook
  • Twitter
  • Whatsapp

ಬೆಂಗಳೂರು(ಏ. 28) ಕೊರೋನಾ ವೈರಸ್ ಆತಂಕ ಇಡೀ ಪ್ರಪಂಚ ಕಾಣುತ್ತಿದ್ದರೆ ಇಲ್ಲೊಬ್ಬರು ಐಎಎಸ್ ಅಧಿಕಾರಿ ವಿವಾದಾತ್ಮಕ ಟ್ವೀಟ್ ಮಾಡಿದ್ದಾರೆ. ಸಹಜವಾಗಿಯೇ ಸೋಶಿಯಲ್ ಮೀಡಿಯಾದಲ್ಲಿ ಟ್ವೀಟ್ ಬೆಂಕಿ ಹಚ್ಚಿದೆ.

ತಬ್ಲಿಘಿಗಳನ್ನು ಹೀರೋಗಳು ಎಂದು ಈ ಅಧಿಕಾರಿ ಕರೆದಿದ್ದಾರೆ. ತಬ್ಲಿಘಿಗಳ ವಿರುದ್ಧ ನೀವೆಲ್ಲ ಆರೋಪಗಳ ಸುರಿಮಳೆ ಮಾಡಿದಿ, ಆದರೆ ಮಾತ್ರ ಅವರು ಪ್ಲಾಸ್ಮಾ ಚಿಕಿತ್ಸೆಗೆ ರಕ್ತ ನೀಡಿ ಹೂಮಳೆ ಸುರಿಸಿದ್ದಾರೆ ಎಂದು ಐಎಎಸ್ ಅಧಿಕಾರಿ ಮಹಮದ್ ಮೊಹಸಿನ್ ಟ್ವೀಟ್ ಮಾಡಿದ್ದಾರೆ.

ಈ ಎರಡು ಜಿಲ್ಲೆಗಳಲ್ಲಿ ತಬ್ಲಿಘಿಗಳು ಮಾಡಿದ ಎಟವಟ್ಟು ಸಣ್ಣದಾ!

ಪ್ಲಾಸ್ಮಾ ಚಿಕಿತ್ಸೆಗೆ ಕೊರೋನಾದಿಂದ ಚೇತರಿಸಿಕೊಂಡವರ ರಕ್ತ ಪಡೆಯಲಾಗುತ್ತಿದೆ. ತಬ್ಲಿಘಿಗಳಿಂದಲೂ ರಕ್ತ ಪಡೆದುಕೊಳ್ಳಲಾಗಿದೆ. ಆದರೆ ಇದೇ ವಿಚಾರವನ್ನು ಇಟ್ಟುಕೊಂಡು ಅಧಿಕಾರಿ ಟ್ವೀಟ್ ಮಾಡಿದ್ದಾರೆ.

ವಿವಾದ ಎಬ್ಬಿಸುವುದು ಈ ಅಧಿಕಾರಿಗೆ ಹೊಸದೇನೂ ಅಲ್ಲ. ಹಿಂದೆ ಲೋಕಸಭಾ ಚುನಾವಣೆ ವೇಳೆ ಪ್ರಧಾನಿ ಮೋದಿ ಅವರ ಕಾರಬನ್ನೇ ಪರಿಶೀಲನೆ ಮಾಡಿ ಸುದ್ದಿಯಾಗಿದ್ದು.  ಸಮುದಾಯವೊಂದನ್ನು ಓಲೈಕೆ ಮಾಡಲು ಈ ರೀತಿ ನಡೆದುಕೊಳ್ಳುವುದು ಎಷ್ಟು ಸರಿ ಎಂಬ ಪ್ರಶ್ನೆ ಸಹ ಎದ್ದಿದೆ.


 

Follow Us:
Download App:
  • android
  • ios