Asianet Suvarna News Asianet Suvarna News

Nari shakti Puraskar ಇಂದು ಕರ್ನಾಟಕದ ಇಬ್ಬರು ಮಹಿಳಾ ಸಾಧಕರಿಗೆ ನಾರಿ ಶಕ್ತಿ ಪ್ರಶಸ್ತಿ!

- ಶೋಭಾ ಗಸ್ತಿ, ನಿವೃತ್ತಿ ರಾಯ್‌ಗೆ ಗೌರವ
- ಇಂದು ರಾಷ್ಟ್ರಪತಿಗಳಿಂದ ಪ್ರದಾನ
- ಮೋದಿ ಭೇಟಿಯಾದ 29 ಸಾಧಕಿಯರು
 

Karnataka 2 women achievers will receive nari shakti puraskar from president ram nath kovind ckm
Author
Bengaluru, First Published Mar 8, 2022, 1:25 AM IST

ನವದೆಹಲಿ(ಮಾ.08):  ಕರ್ನಾಟಕದ ಇಬ್ಬರು ಸಾಧಕಿಯರು ಸೇರಿದಂತೆ 29 ಮಹಿಳೆಯರಿಗೆ 2020 ಹಾಗೂ 21ನೇ ಸಾಲಿನ ನಾರಿಶಕ್ತಿ ಪುರಸ್ಕಾರ ಪ್ರಶಸ್ತಿ ಘೋಷಣೆಯಾಗಿದೆ. ಮಂಗಳವಾರ ನವದೆಹಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮಂಗಳವಾರ ರಾಷ್ಟ್ರೀಯ ಮಹಿಳಾ ದಿನಾಚರಣೆ ನಡೆಯಲಿದ್ದು, ಅಂದು ಈ ಪ್ರಶಸ್ತಿಯನ್ನು ದೇಶದ ವಿವಿಧ ವಲಯಗಳಿಗೆ ನೀಡಿದ ಕೊಡುಗೆ ಪರಿಗಣಿಸಿ ನೀಡಲಾಗುತ್ತದೆ.

ಕರ್ನಾಟಕದ ಇಂಟೆಲ್‌ ಇಂಡಿಯಾ ಕಂಪನಿಯ ಕಂಟ್ರಿ ಹೆಡ್‌ ಆಗಿರುವ ನಿವೃತ್ತಿ ರಾಯ್‌ ಅವರಿಗೆ ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ನೀಡಿದ ಕೊಡುಗೆ ಪರಿಗಣಿಸಿ 2020ನೇ ಸಾಲಿನ ಪ್ರಶಸ್ತಿ ಪ್ರಕಟಿಸಲಾಗಿದೆ. ಇನ್ನು ಬೆಳಗಾವಿಯ ಶೋಭಾ ಗಸ್ತಿ ದೇವದಾಸಿ ಮಹಿಳೆಯರ ಸಬಲೀಕರಣ ಹಾಗೂ ದೇವದಾಸಿ ಪದ್ಧತಿಯ ನಿರ್ಮೂಲನೆಗೆ ಶ್ರಮ ಪಡುತ್ತಿರುವ ಮಹಿಳೆ ಸಾಧಕಿ. ಅವರಿಗೆ 2021ನೇ ಸಾಲಿನ ಪ್ರಶಸ್ತಿ ನೀಡಲಾಗುತ್ತದೆ.

Nari Shakti Puraskar ನಾರಿ ಶಕ್ತಿ ಪುರಸ್ಕಾರ ವಿಜೇತರ ಮಾತು ಕೇಳಿ ನಕ್ಕು ನೀರಾದ ಪ್ರಧಾನಿ ಮೋದಿ

ಹೆಣ್ಣು ಮಕ್ಕಳ ಸಮಸ್ಯೆಗಳಿಗೆ ಸ್ಪಂದನೆ, ದೇವದಾಸಿಯರ ಕುರಿತಾಗಿ ಮಾಡಿರುವ ಅಮೋಘ ಸೇವೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರವು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಘಟಪ್ರಭಾದ ಶೋಭಾ ಗಸ್ತಿ ಅವರಿಗೆ ನಾರಿಶಕ್ತಿ ಪುರಸ್ಕಾರಕ್ಕೆ ಆಯ್ಕೆ ಮಾಡಿದೆ. ವಿಶ್ವ ಮಹಿಳಾ ದಿನದ ಅಂಗವಾಗಿ ಮಾ.8ರಂದು ದೆಹಲಿಯಲ್ಲಿ ಈ ಪ್ರಶಸ್ತಿಯನ್ನು ಶೋಭಾ ಅವರಿಗೆ ಪ್ರದಾನ ಮಾಡಲಿದೆ ಕೇಂದ್ರ ಸರ್ಕಾರ.

ನನಗೆ ಕೇಂದ್ರ ಸರ್ಕಾರದ ಅತ್ಯುನ್ನತ ನಾರಿ ಶಕ್ತಿ ಪುರಸ್ಕಾರ ಸಿಗುತ್ತದೆ ಎನ್ನುವುದು ನನಗೆ ಗೊತ್ತಿರಲಿಲ್ಲ ಎಂದು ಆರಂಭದಲ್ಲಿಯೇ ತಮ್ಮ ಸಂತಸ ಹಂಚಿಕೊಂಡ ಶೋಭಾ ಗಸ್ತಿ ಅವರು, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹಾಗೂ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುವುದು ಇಂದಿನ ಅತ್ಯವಶ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನಾರಿ ಶಕ್ತಿ: ಮೋದಿ ಮನ್ ಕೀ ಬಾತ್ ನಲ್ಲಿ ಸದ್ದು ಮಾಡಿದ ಈ ಪುಟ್ಟ ಹುಡುಗಿ ಯಾರು?

ಮೋದಿ ಜತೆ ಸಂವಾದ:
ಈ ನಡುವೆ, ಪ್ರಶಸ್ತಿ ಸ್ವೀಕಾರಕ್ಕೆ ದಿಲ್ಲಿಗೆ ಆಗಮಿಸಿರುವ ಎಲ್ಲ 29 ಮಹಿಳಾ ಸಾಧಕಿಯರ ಜತೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದರು.

ಪ್ರತಿ ವರ್ಷ ಮಾಚ್‌ರ್‍-8 ರಂದು ‘ಅಂತಾರಾಷ್ಟ್ರೀಯ ಮಹಿಳಾ ದಿನ’ ಆಚರಿಸಲಾಗುತ್ತದೆ. ವೃತ್ತಿಪರ ಪರಿಸರದಲ್ಲಿ ಮಹಿಳೆ ದಿನನಿತ್ಯ ಎದುರಿಸುತ್ತಿರುವ ಸಮಸ್ಯೆಗಳನ್ನು ಎತ್ತಿ ತೋರಿಸುತ್ತಾ, ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳನ್ನು ಈ ದಿನ ನೆನಪಿಸಿಕೊಳ್ಳಲಾಗುತ್ತದೆ.

‘ಯತ್ರ ನಾರ‍್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಃ’
‘ಎಲ್ಲಿ ಮಹಿಳೆಯರನ್ನು ಪೂಜಿಸಲಾಗುತ್ತದೋ ಅಲ್ಲಿ ದೇವತೆಗಳು ನೆಲೆಸುತ್ತಾರೆ’ ಎಂಬ ಭಾವನೆಯ ದೇಶ ನಮ್ಮದು. ಮಹಿಳೆಯರು ಸ್ವತಂತ್ರವಾಗಿ ಮಧ್ಯ ರಾತ್ರಿಯೂ ನಿರ್ಭಯವಾಗಿ ಓಡಾಡುವಂತಹ ಸಮಯ ಬಂದಾಗ ಮಾತ್ರ ಈ ಮಾತಿಗೆ ಸಂಪೂರ್ಣ ಅರ್ಥ ಹಾಗೂ ಮಹಾತ್ಮಾ ಗಾಂಧೀಜಿಯವರ ರಾಮರಾಜ್ಯದ ಕಲ್ಪನೆ ಸಾಕಾರವಾಗುತ್ತದೆ.

ಮಹಿಳಾ ಸಬಲೀಕರಣ
ಮಹಿಳಾ ಸಬಲೀಕರಣ ಎಂದರೆ ಮಹಿಳೆಯನ್ನು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ನಿರ್ಬಂಧದಿಂದ ಸ್ವಾತಂತ್ರ್ಯಗೊಳಿಸುವುದಾಗಿದೆ. ಮಹಿಳೆಯನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ಮಹಿಳಾ ಸಬಲೀಕರಣದ ಮುಖ್ಯ ಉದ್ದೇಶ. ದೇಶದ ಜನಸಂಖ್ಯೆಯಲ್ಲಿ ಶೇ. 48ರಷ್ಟುಮಹಿಳೆಯರಿದ್ದು, ಇದರಲ್ಲಿ ದೀರ್ಘ ಸಂಖ್ಯೆಯ ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ ಇನ್ನೊಬ್ಬರನ್ನು ಅವಲಂಬಿಸಿ ಜೀವನ ಸಾಗಿಸಬೇಕಾಗಿರುತ್ತದೆ. ಸರ್ಕಾರಗಳು ಮಹಿಳಾ ಸಬಲೀಕರಣಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದರೂ ಕೂಡ ಕೇವಲ ಅಲ್ಪ ಪ್ರಮಾಣದ ಮಹಿಳೆಯರು ಇದರ ಪ್ರಯೋಜನ ಪಡೆದು, ಇಂದು ಸ್ವತಂತ್ರ ಬದುಕು ಸಾಗಿಸುತ್ತಿದ್ದಾರೆ. ತಮ್ಮ ಮನದಿಚ್ಛೆಯ ಕಾರ್ಯದಲ್ಲಿ ತೊಡಗಿದ್ದಾರೆ. ಇಂಥವರು ದೇಶದ ನಗರ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಾರೆ.

Follow Us:
Download App:
  • android
  • ios