Asianet Suvarna News Asianet Suvarna News

ನಮಗೆ ಕಾವೇರಿ ಸಂಕಷ್ಟ ಸೂತ್ರ ಬೇಕು: ಕರವೇ ನಾರಾಯಣ ಗೌಡ

ಕಾವೇರಿ ಜಲ ವಿವಾದದ ವಿಷಯದಲ್ಲಿ ನಮಗೆ ಸಂಕಷ್ಟ ಸೂತ್ರ ಬೇಕು ಎನ್ನುವ ವಿಷಯವಾಗಿ ಮಾತನಾಡಲು ನಾವು ಬಂದಿದ್ದೇವೆ. ಈ ವಿಷಯದಲ್ಲಿ ಪ್ರಧಾನಿ ಮೋದಿಯವರು ಮಧ್ಯಪ್ರವೇಶ ಮಾಡಲಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಬಣ ಆಗ್ರಹಿಸಿದ್ದಾರೆ. 

Karave Narayana Gowda Reaction On Cauvery Water Issue gvd
Author
First Published Oct 19, 2023, 12:01 PM IST

ನವದೆಹಲಿ (ಅ.19): ಕಾವೇರಿ ಜಲ ವಿವಾದದ ವಿಷಯದಲ್ಲಿ ನಮಗೆ ಸಂಕಷ್ಟ ಸೂತ್ರ ಬೇಕು ಎನ್ನುವ ವಿಷಯವಾಗಿ ಮಾತನಾಡಲು ನಾವು ಬಂದಿದ್ದೇವೆ. ಈ ವಿಷಯದಲ್ಲಿ ಪ್ರಧಾನಿ ಮೋದಿಯವರು ಮಧ್ಯಪ್ರವೇಶ ಮಾಡಲಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಬಣ ಆಗ್ರಹಿಸಿದ್ದಾರೆ. ದೆಹಲಿಯಲ್ಲಿ ಬುಧವಾರ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, ನಾವು ಮತ್ತು ತಮಿಳುನಾಡಿನವರು ಅಣ್ಣ-ತಮ್ಮಂದಿರ ತರಹ ಬದುಕುತ್ತಾ ಇದ್ದೇವೆ. ನಾವು ನೀರು ಕೊಡ್ತೇವೆ, ಆದ್ರೆ ನಮ್ಮ ಬಳಿ ನೀರೇ ಇಲ್ಲಾ ಅಂದಾಗ ಏನು ಮಾಡ್ಬೇಕು. 

ಹಾಗಾಗಿ, ಈ ಸಮಸ್ಯೆಯ ಪರಿಹಾರಕ್ಕೆ ಪ್ರಧಾನಿಯವರು ಮಧ್ಯಸ್ಥಿಕೆ ವಹಿಸಿ, ಕಾವೇರಿ ಕೊಳ್ಳದ 4 ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆದು ಚರ್ಚೆ ಮಾಡಬೇಕು. ಹಿಂದೆ ಇಂತ ಸಂಕಷ್ಟ ಬಂದಾಗ, ಇಂದಿರಾಗಾಂಧಿಯವರು ಬಂದು ಸಂಕಷ್ಟ ಬಗೆ ಹರಿಸಿದ್ದರು. 2003ರಲ್ಲಿ ಅನಂತ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ವಾಜಪೇಯಿ ಅವರನ್ನು ಭೇಟಿ ಮಾಡಿದ್ವಿ. ಇದಕ್ಕೆ ಒಂದು ಶಾಶ್ವತ ಪರಿಹಾರ ಹುಡುಕುವಂತಹ ಕೆಲಸವನ್ನು ಈಗ ಮೋದಿಯವರು ಮಾಡಲಿ. ಕರ್ನಾಟಕ -ತಮಿಳುನಾಡು ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆದು, ಮಾತನಾಡಿ, ಈ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡಿಸಬೇಕು ಎಂದು ಆಗ್ರಹಿಸಿದರು.

ಮೇಕೆದಾಟು ಅಣೆಕಟ್ಟು ಕಟ್ಟಿದರೆ ಸುಮಾರು 60 ಟಿಎಂಸಿಯಷ್ಟು ನೀರು ಸಿಗುತ್ತದೆ. ಇದನ್ನು ಬೆಂಗಳೂರಿನ ಜನರಿಗೆ ಕುಡಿಯುವ ನೀರಿಗೆ ಬಳಸಿಕೊಳ್ಳಬಹುದಾಗಿದೆ. ಇದರಿಂದ ತಮಿಳುನಾಡಿಗೆ ನೀರು ಕೊಡಲೂ ಅನುಕೂಲ ಆಗುತ್ತೆ. ಎರಡೂ ರಾಜ್ಯಗಳು ಒಂದಾಗಿ ಬರೋದಾದ್ರೆ ಮೇಕೆದಾಟು ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮತಿ ಕೊಡುತ್ತೆ ಎಂದು ಪ್ರಹ್ಲಾದ್ ಜೋಶಿ, ಗಜೇಂದ್ರ ಸಿಂಗ್‌ ಶೇಖಾವತ್‌ ಕೂಡ ಹೇಳಿದ್ದಾರೆ. ಈ ಸಂಬಂಧ ರಾಜ್ಯದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರು ಮುಂದಾಗಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಕರೆಂಟ್‌ಗಾಗಿ ಜಾಗರಣೆ: ಬೆಳೆ ಕಾಪಾಡಿಕೊಳ್ಳಲು ಮಧ್ಯರಾತ್ರಿ ನೀರು ಕಟ್ಟುತ್ತಿರುವ ರೈತರು!

ಪ್ರಧಾನಿಯವರು ಕಾವೇರಿ ಜಲ ವಿವಾದದ ವಿಷಯದಲ್ಲಿ ಶಾಶ್ವತ ಪರಿಹಾರ ಕಲ್ಪಿಸಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾವೆಲ್ಲ ಮೋದಿ ಪರವಾಗಿ ನಿಲ್ಲುತ್ತೇವೆ. ಆದರೆ, ಈ ಹಿಂದೆ ಮೋದಿಯವರು ಸಿದ್ದರಾಮಯ್ಯ ಭೇಟಿಗೆ ಅವಕಾಶ ಕೊಡದಿರುವುದು ರಾಜ್ಯದ ಏಳೂವರೆ ಕೋಟಿ ಜನರಿಗೆ ಮಾಡಿದ ಅವಮಾನ ಎಂದು ಬೇಸರ ವ್ಯಕ್ತಪಡಿಸಿದರು.

Follow Us:
Download App:
  • android
  • ios