ನವದೆಹಲಿ(ನ.14): ಮಹಾರಾಷ್ಟ್ರದಲ್ಲಿ ಯಾವುದೇ ಪಕ್ಷ  ಸರ್ಕಾರ ರಚಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಈ ಮಧ್ಯೆ ಮಹಾರಾಷ್ಟ್ರ ರಾಜಕೀಯ ಸಂಘರ್ಷಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರಣ ಎಂದಿರುವ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್, ಪಕ್ಷಗಳನ್ನು ಒಡೆಯುವ ಕಲೆ ಅಮಿತ್ ಶಾ ಅವರಿಗೆ ಚೆನ್ನಾಗಿ ಗೊತ್ತು ಎಂದು ಹರಿಹಾಯ್ದಿದ್ದಾರೆ.

ಮಹಾರಾಷ್ಟ್ರದಲ್ಲಿ ಟ್ರೈ-ಆ್ಯಂಗಲ್ ಸರ್ಕಾರ?: ಬಿಜೆಪಿ ತಲೆ ಗಿರಗಿರ!

ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಅಮಿತ್ ಶಾ ಹೆಣೆದ ಬಲೆ ಎಂದು ಆರೋಪಿಸಿರುವ ಕಪಿಲ್ ಸಿಬಲ್, ಪಕ್ಷಗಳನ್ನು ಒಡೆದು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕಲೆ ಗೃಹ ಸಚಿವರಿಗೆ ಚೆನ್ನಾಗಿ ಗೊತ್ತು ಎಂದು ಕಿಡಿಕಾರಿದ್ದಾರೆ.

ಮೌನ ಮುರಿದ ಅಮಿತ್ ಶಾ, ಠಾಕ್ರೆಗೆ ತಿರುಗೇಟು!

ತಮ್ಮ ರಾಜಕೀಯ ಲಾಭಕ್ಕಾಗಿ ಪಕ್ಷಗಳನ್ನಿ ಒಡೆಯುವ, ಒಟ್ಟುಗೂಡಿಸುವ ಕಲೆ ಅಮಿತ್ ಶಾಗೆ ಗೊತ್ತು ಎಂದಿರುವ ಕಪಿಲ್ ಸಿಬಲ್, ಗೋವಾ ಹಾಗೂ ಕರ್ನಾಟಕದಲ್ಲಿ ಅಮಿತ್ ಶಾ ಮಾಡಿದ್ದು ಇದನ್ನೇ ಎಂದು ಚುಚ್ಚಿದ್ದಾರೆ.

'ಮುಚ್ಚಿದ ಕೋಣೆಯಲ್ಲಾದ ಒಪ್ಪಂದ ಅಮಿತ್ ಶಾ ಪಿಎಂ ಮೋದಿಯಿಂದ ಮುಚ್ಚಿಟ್ರು'