* ಅಡುಗೆ ಮನೆ ಫೋಟೋ ಶೇರ್ ಮಾಡಿ ಟ್ರೋಲ್ ಆದ ಕಾನ್ಪುರ ಕಮಿಷನರ್* ಅಡುಗೆ ಮಾಡುವ ಭರದಲ್ಲಿ ಗ್ಯಾಸ್ ಆನ್ ಮಾಡೋದೇ ಮರೆತ್ರಾ ಅಧಿಕಾರಿ* ವೈರಲ್ ಆಯ್ತು ಕಮಿಷನರ್ ಪೋಸ್ಟ್‌

ಕಾನ್ಪುರ(ಡಿ.20): ಕಾನ್ಪುರದ ಕಮಿಷನರ್ ಮತ್ತು ಐಎಎಸ್ ಅಧಿಕಾರಿ ರಾಜ್ ಶೇಖರ್ ಅವರು ತಮ್ಮ ಮನೆಯಲ್ಲಿ ಅಡುಗೆ ಮಾಡುವ ವಿಚಾರದಲ್ಲಿ ಅದೃಷ್ಟವನ್ನು ಪರೀಕ್ಷಿಸುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಈ ಫೊಟೋ ಸದ್ಯ ನೆಟ್ಟಿಗರ ಗಮನ ಸೆಳೆದಿದೆ. ಪೋಹಾ ಮಾಡೋ ಪೋಸ್‌ ಕೊಟ್ಟ ಈ ಅಧಿಕಾರಿ ಮಾಡಿದ ಎಡವಟ್ಟೊಂದು ನೆಟ್ಟಿಗರ ಕಣ್ಣಿಗೆ ಬಿದ್ದಿದ್ದು, ಸದ್ಯ ಈ ಕಮಿಷನರ್ ಟ್ರೋಲ್‌ಗೆ ಗುರಿಯಾಗಿದ್ದಾರೆ.

ಈ ಬಗ್ಗೆ ಟ್ವಿಟ್ ಮಾಡಿರುವ ಕಾನ್ಪುರ ಕಮಿಷನರ್ ರಾಜ್ ಶೇಖರ್ ದಯವಿಟ್ಟು ನನಗೆ ಶುಭ ಹಾರೈಸಿ. ಅಡುಗೆಯಲ್ಲಿ ನನ್ನ ಅದೃಷ್ಟವನ್ನು ಪ್ರಯತ್ನಿಸುತ್ತಿದ್ದೇನೆ. ಗೃಹ ಸಚಿವರ ಮಾರ್ಗದರ್ಶನದಲ್ಲಿ ಬೆಳಗಿನ ಉಪಾಹಾರಕ್ಕಾಗಿ ಪೋಹಾವನ್ನು ತಯಾರಿಸುತ್ತಿದ್ದೇನೆ ಎಂದಿದ್ದಾರೆ. ಹೀಗಿದ್ದರೂ ಅಧಿಕಾರಿ ಪೋಟೋ ಶೇರ್ ಮಾಡುವ ಮೊದಲು ಅಡುಗೆ ತಯಾರಿಸುವ ವೆಳೆ ಗ್ಯಾಸ್‌ ಸ್ಟೌವ್ ಆನ್ ಮಾಡಬೇಕೆಂಬುವುನ್ನು ಮರೆತ್ತಿದ್ದಾರೆ. ಅಲ್ಲದೇ ಈ ವಿಚಾರ ಎಲ್ಲರ ಗಮನ ಸೆಳೆಯಬಹುದೆಂದೂ ಊಹಿಸಿಲ್ಲ,.ಆ

Scroll to load tweet…

ಆದರೀಗ ಕಾನ್ಪುರ ಕಮಿಷನರ್ ಫೋಟೋ ನೆಟ್ಟಿಗರಿಗೆ ಆಹಾರವಾಗಿದೆ. ಅನೇಕ ಮಂದಿ ಅಡುಗೆ ಏನೋ ತಯಾರಿಸಲು ಸಜ್ಜಾಗಿದ್ದೀರಿ ಎಂಬುವುದನ್ನು ಒಪ್ಪಿಕೊಳ್ಳೋಣ ಆದರೆ ಮೊದಲು ಗ್ಯಾಸ್‌ ಸ್ಟೌವ್ ಹೊತ್ತಿಸಿ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಅಡುಗೆಮನೆಯಲ್ಲಿ ಸೂಟ್ ಧರಿಸಿ ಅಡುಗೆ ಮಾಡುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.ಹೀಗಿದ್ದರೂ ಅನೇಕರು ಅಧಿಕಾರಿಯನ್ನು ಸಮರ್ಥಿಸಿಕೊಂಡಿದ್ದಾರೆ, ಆಹಾರವನ್ನು ಬೇಯಿಸಿದ ನಂತರ ಗ್ಯಾಸ್ ಆಫ್ ಮಾಡಿ ಫೋಟೋ ತೆಗೆದಿರಬಹುದು ಎಂದು ಹೇಳಿದ್ದಾರೆ.

Scroll to load tweet…

ಇನ್ನು ಈ ವೈರಲ್ ಚಿತ್ರಕ್ಕೆ ಪ್ರತಿಕ್ರಿಯಿಸಿದವರಲ್ಲಿ, ಶಿವಸೇನಾ ನಾಯಕಿ ಪ್ರಿಯಾಂಕಾ ಚತುರ್ವೇದಿ ಕೂಡ ಎಲ್‌ಪಿಜಿಯ ಏರುತ್ತಿರುವ ಬೆಲೆಗಳ ಬಗ್ಗೆ ಕೇಂದ್ರದ ವಿರುದ್ಧ ಜನಸಾಮಾನ್ಯರು ಕಿಡಿ ಕಾರುತ್ತಿರುವ ಸಂದರ್ಭದಲ್ಲಿ ಬೆಂಕಿ ಹೊತ್ತಿಸದೇ ಆಹಾರ ತಯಾರಿಸುವ ವಿಧಾನ ಬಹಳ ಚೆನ್ನಾಗಿದೆ ಎಂದು ಲೇವಡಿ ಮಾಡಿದ್ದಾರೆ. ಈ ಬಗ್ಗೆ ಬರೆದಿರುವ ಪ್ರಿಯಾಂಕಾ ಅಡುಗೆ ಅನಿಲವನ್ನು ಅಗ್ಗವಾಗಿಸಲು ಸರ್ಕಾರಕ್ಕೆ ಬಲವಾದ ಸಂದೇಶವನ್ನು ಕಳುಹಿಸಿದ್ದಕ್ಕಾಗಿ ಧನ್ಯವಾದಗಳು. ಅದು ಇಲ್ಲದೆ ಅಡುಗೆ ಮಾಡಲು ಸಾಧ್ಯವಿದೆ, ಒಲೆಯ ಬದಲು ಜನರ ಕೋಪದ ಬಿಸಿಯಿಂದಲೇ ಸಾಧ್ಯ ಎಂದು ತೋರಿಸಿಕೊಟ್ಟಿದ್ದೀರಿ ಎಂದು ಕಮೆಂಟ್ ಮಾಡಿದ್ದಾರೆ.