ಕಣ್ಣೂರು[ಜ.23]: ಭಯದ ವಾತಾವರಣ ನಿರ್ಮಿಸಲು ಕೇರಳದ ಕಣ್ಣೂರಿನ RSS ಕಚೇರಿ ಹಾಗೂ ಪೊಲೀಸ್ ಕಾವಲು ಠಾಣೆಯ ಮೇಲೆ ಕಚ್ಚಾ ಬಾಂಬ್ ಎಸೆದಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತನನ್ನು  ಬಂಧಿಸಲಾಗಿದೆ. ಆರೋಪಿಯನ್ನು ಪ್ರಭೇಶ್ ಎಂದು ಗುರುತಿಸಲಾಗಿದ್ದು, ತಮಿಳುನಾಡಿನ ಕೊಯಂಬತ್ತೂರಿನಲ್ಲಿ ರೆಸ್ಟ್ ಮಾಡಲಾಗಿದೆ.

ಕೊತೀರೂರಿನ RSS ಕಚೇರಿ, ಮನೋಜ್ ಸ್ಮೃತಿ ಕೇಂದ್ರಂ ಬಳಿ ಈ ಘಟನೆ ನಡೆದಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಕೊತೀರೂರು ಪೊಲೀಸ್ ಕಾವಲು ಠಾಣೆಯ ಎಸ್ ಐ 'ಜನವರಿ 16ರಂದು ಬೆಳಗ್ಗೆ RSS ಕಾರ್ಯಕರ್ತ ಪ್ರಭೇಶ್ ಬಾಂಬ್ ಗಳನ್ನು ಎಸೆದಿದ್ದಾನೆ. ಆತನನ್ನು ಬಂಧಿಸಿ ವಿಚಾರಣೆ ನಡೆಸಿದ್ದೇವೆ. ಈ ವೇಳೆ ತಾನು RSS ಕಚೇರಿ ಮೇಲೆ ದಾಳಿ ನಡೆಸುವ ಉದ್ದೇಶದಿಂದ ಬಾಂಬ್ ದಾಳಿ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾನೆ' ಎಂದು ತಿಳಿಸಿದ್ದಾರೆ.

ಪ್ರಾಣಿಯಂತೆ ಮಕ್ಕಳು ಹುಟ್ಟಿಸುವುದು ಮಾರಕ: ವಸೀಂ ರಿಜ್ವಿ

ಪೊಲೀಸ್ ಠಾಣೆಯನ್ನು ಸ್ಥಳಾಂತರಿಸಲು, ರಾಜಕೀಯ ಸಂಘರ್ಷ ಹಾಗೂ ಭಯದ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಈತ ಈ ದಾಳಿ ನಡೆಸಿರುವ ಸಾಧ್ಯತೆಗಳಿವೆ. ಆದರೆ ಘಟನೆಯ ಬೆನ್ನಲ್ಲೇ CCTV ದೃಶ್ಯಾವಳಿಗಳ ಆಧಾರದ ಮೇರೆಗೆ ಈತನ ಗುರುತು ಪತ್ತೆ ಹಚ್ಚಲಾಗಿದೆ. ಘಟನೆ ಬಳಿಕ ಕೊಯಂಬತ್ತೂರಿಗೆ ತೆರಳಿದ್ದ ಆತನನ್ನು ಬೆನ್ನತ್ತಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಪ್ರಭೇಶ್ ವಿರುದ್ಧ ಈ ಮೊದಲೇ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. 
 

2 ಮಕ್ಕಳ ಮಿತಿ ಹೇರಬೇಕು ಎಂದು ಹೇಳಿಲ್ಲ: ಭಾಗವತ್‌