ಜಲಂಧರ್(ಸೆ.22)‌: ಭಾನುವಾರ ರಾಜ್ಯಸಭೆಯಲ್ಲಿ ಅಂಗೀಕೃತವಾದ ಎರಡು ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆಗೆ ಇಳಿದಿರುವ ಪಂಜಾಬ್‌ ರೈತರನ್ನು ಬಾಲಿವುಡ್‌ ನಟಿ ಕಂಗನಾ ರಾಣಾವತ್‌ ‘ಭಯೋತ್ಪಾದಕರು’ ಎಂದು ಕರೆದಿದ್ದಾರೆ ಎಂದು ಆರೋಪ ಕೇಳಿಬಂದಿದೆ.

ಕಂಗನಾ ರಣಾವತ್ ಭೇಟಿ ಮಾಡಿದ ಸಂಚಾರಿ ವಿಜಯ್; 'ಎಷ್ಟು ಬೇಕಾದ್ರೂ ಫೋಟೋ ಹಿಡಿಯಿರಿ'!

ಪ್ರಧಾನಿಯವರು ರೈತರಿಗೆ ಮಸೂದೆ ಬಗ್ಗೆ ಭರವಸೆ ನೀಡಿದ್ದ ಟ್ವೀಟ್‌ವೊಂದನ್ನು ಉಲ್ಲೇಖಿಸಿರುವ ಕಂಗನಾ ‘ಪ್ರಧಾನಮಂತ್ರಿಗಳೇ ಮಲಗಿದ್ದವರನ್ನು ಎಬ್ಬಿಸಬಹುದು ಆದರೆ ಮಲಗಿದಂತೆ ನಟಿಸುವವರನ್ನು ಎಬ್ಬಿಸುವುದು ಹೇಗೆ. ಸಿಎಎ ಯಾರ ಪೌರತ್ವವನ್ನು ಕಸಿಯದಿದ್ದರೂ ರಕ್ತಪಾತವನ್ನು ಬಯಸಿದ್ದ ಅದೇ ಭಯೋತ್ಪಾದಕರಿವರು’ ಎಂದು ಬರೆದುಕೊಂಡಿದ್ದಾರೆ.

ಕಂಗನಾ ಅವರ ಟ್ವೀಟ್‌ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಆದರೆ ತಾವು ರೈತರನ್ನು ಭಯೋತ್ಪಾದಕರು ಎಂದು ಕರೆದಿಲ್ಲ. ಅದನ್ನು ಸಾಬೀತುಪಡಿಸಿದರೆ ಕ್ಷಮಾಪಣೆ ಕೇಳಿ, ಟ್ವೀಟರ್‌ ತ್ಯಜಿಸುವೆ ಎಂದು ಕಂಗನಾ ಸವಾಲು ಹಾಕಿದ್ದಾರೆ.