ಭಾರತದಿಂದ ಪರಾರಿಯಾಗಿರುವ ಬಿಡದಿಯ ನಿತ್ಯಾನಂದ ಸ್ವಾಮಿ ಇದೀಗ ರಾಮ ಮಂದಿರ ಪ್ರಾಣಪ್ರತಿಷ್ಠೆ ಕುರಿತು ಮಾತನಾಡಿದ್ದಾರೆ. ತನಗೂ ಆಹ್ವಾನ ಸಿಕ್ಕಿರುವುದಾಗಿ ಹೇಳಿಕೊಂಡಿದ್ದಾರೆ. ಇದೀಗ ಕೈಲಾಸ ದೇಶದಿಂದ ನಿತ್ಯಾನಂದ ಆಯೋಧ್ಯೆಗೆ ಆಗಮಿಸುತ್ತಾರ ಅನ್ನೋ ಪ್ರಶ್ನೆ ಎದ್ದಿದೆ.

ಆಯೋಧ್ಯೆ(ಜ.21) ಆಯೋಧ್ಯೆ ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ಆಹ್ವಾನಿತ ಗಣ್ಯರು ಆಯೋಧ್ಯೆಗೆ ಆಗಮಿಸುತ್ತಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈಗಾಗಲೇ ಆಯೋಧ್ಯೆಯಲ್ಲಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್, ಬಾಲಿವುಡ್ ಸೆಲೆಬ್ರೆಟಿಗಳು ಈಗಾಗಲೇ ಆಯೋಧ್ಯೆಗೆ ಆಗಮಿಸಿದ್ದಾರೆ. ಹಲವು ಆಹ್ವಾನಿತ ಗಣ್ಯರು ನಾಳೆ ಬೆಳಗ್ಗೆ ಆಯೋಧ್ಯೆಗೆ ಆಗಮಿಸಲಿದ್ದಾರೆ. ಇದೀಗ ಪ್ರಾಣಪ್ರತಿಷ್ಠೆಗೆ ಕೈಲಾಸ ದೇಶದ ನಿತ್ಯಾನಂದ ಸ್ವಾಮಿ ಆಗಮಿಸುತ್ತಿದ್ದಾರೆ ಅನ್ನೋ ಮಾತುಗಳು ಹರಿದಾಡುತ್ತಿದೆ. ಇದಕ್ಕೆ ಮುಖ್ಯ ಕಾರಣ ಖುದ್ದು ನಿತ್ಯಾನಂದ ಈ ಕುರಿತು ಮಾತನಾಡಿದ್ದಾರೆ. ತನಗೆ ಆಯೋಧ್ಯೆ ರಾಮ ಮಂದಿರ ಪ್ರಾಣಪ್ರತಿಷ್ಠೆಯ ಅಧಿಕೃತ ಆಹ್ವಾನ ಬಂದಿದೆ. ಹೀಗಾಗಿ ಆಯೋಧ್ಯೆಗೆ ತೆರಳಿ ಪ್ರಾಣಪ್ರತಿಷ್ಠೆಯಲ್ಲಿ ಭಾಗಿಯಾಗುವುದಾಗಿ ಹೇಳಿಕೊಂಡಿದ್ದಾನೆ.

ಈ ಕುರಿತು ಮಹತ್ವದ ಸಂದೇಶ ರವಾನಿಸಿರುವ ನಿತ್ಯಾನಂದ, ಯಾರೂ ಕೂಡ ರಾಮಮಂದಿರ ಪ್ರಾಣಪ್ರತಿಷ್ಠೆ ನೋಡುವುದನ್ನು ಮಿಸ್ ಮಾಡಿಕೊಳ್ಳಬೇಡಿ. ಭಗವಾನ್ ರಾಮಲಲ್ಲಾ ಮೂರ್ತಿಯನ್ನು ಭವ್ಯ ರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ನನಗೆ ರಾಮ ಮಂದಿರ ಪ್ರಾಣಪ್ರತಿಷ್ಠೆಯ ಅಧಿಕೃತ ಆಹ್ವಾನ ಬಂದಿದೆ. ನಾನು ಆಯೋಧ್ಯೆಯ ರಾಮಲಲ್ಲಾ ಪ್ರಾಣಪ್ರತಿಷ್ಠೆಯಲ್ಲಿ ಪಾಲ್ಗೊಳ್ಳುವುದಾಗಿ ನಿತ್ಯಾನಂದ ಹೇಳಿಕೊಂಡಿದ್ದಾನೆ.

ಭಗವಾನ್ ಶ್ರೀರಾಮನ ಶೋಭಯಾತ್ರೆ ಮೇಲೆ ಕಲ್ಲು ತೂರಾಟ, ಹಲವರಿಗೆ ಗಾಯ!

ಕೈಲಾಸ ದೇಶದಲ್ಲಿ ರಾಮ ಮಂದಿರ ಪ್ರಾಣಪ್ರತಿಷ್ಠೆ ಸಂಭ್ರಮ ಮನೆ ಮಾಡಿದೆ. ಕೈಲಾಸದಲ್ಲೂ ಪ್ರಾಣಪ್ರತಿಷ್ಠೆ ಸಂಭ್ರಮ ಆಚರಿಸಲಾಗುತ್ತದೆ. ವಿಶೇಷ ಶ್ರೀರಾಮ ಪೂಜೆ ಆಯೋಜಿಸಲಾಗಿದೆ. ಅಖಂಡ ರಾಮ ಜಪ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿದೆ ಎಂದು ನಿತ್ಯಾನಂತ ಅಧಿಕೃತ ಟ್ವಿಟರ್ ಖಾತೆ ಮೂಲಕ ಹೇಳಲಾಗಿದೆ.

ನಿತ್ಯಾನಂದ ಖುದ್ದು ಆಯೋಧ್ಯೆಗೆ ಆಗಮಿಸುವುದಾಗಿ ಹೇಳಿಕೊಂಡಿರುವ ಬೆನ್ನಲ್ಲೇ ಇದೀಗ ಪರ ವಿರೋಧಗಳು ವ್ಯಕ್ತವಾಗುತ್ತಿದೆ. 2019ರಲ್ಲಿ ಭಾರತದಿಂದ ಪರಾರಿಯಾಗಿರುವ ನಿತ್ಯಾನಂದ ಮತ್ತೆ ಭಾರತಕ್ಕೆ ಮರಳುತ್ತಾರಾ ಅನ್ನೋ ಚರ್ಚೆಗಳು ನಡೆಯುತ್ತಿದೆ. 2019ರಲ್ಲಿ ಪರಾರಿಯಾದ ನಿತ್ಯಾನಂದ ಹಲವು ದಿನಗಳ ಕಾಲ ಯಾವುದೇ ಸುಳಿವಿರಲಿಲ್ಲ. ಬಳಿಕ ದ್ವೀಪವೊಂದನ್ನು ಖರೀದಿಸಿ ಕೈಲಾಸ ದೇಶ ಮಾಡಿಕೊಂಡಿರುವುದಾಗಿ ಘೋಷಿಸಿದ್ದ. ಆದರೆ ಈ ಕೈಲಾಸ ಎಲ್ಲಿದೆ ಅನ್ನೋದರ ನಿಖರ ಮಾಹಿತಿಗಳು ಇದುವರೆಗೂ ಲಭ್ಯವಾಗಿಲ್ಲ.

ಪ್ರಾಣಪ್ರತಿಷ್ಠೆಗೆ ಹೂವುಗಳಿಂದ ಕಂಗೊಳಿಸುತ್ತಿದೆ ಆಯೋಧ್ಯೆ ರಾಮ ಮಂದಿರ, ಇಲ್ಲಿದೆ ಫೋಟೋ!