ಕಡಪ[ಡಿ.19]: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ವೇಳೆ ನಿಶ್ಶಕ್ತಳಾಗಿ ಕುಸಿದು ಬಿದ್ದ ಮಹಿಳೆಯೊಬ್ಬರನ್ನು ಪೊಲೀಸ್‌ ಪೇದೆಯೊಬ್ಬರು ಹೊತ್ತುಕೊಂಡ ಬೆಟ್ಟಏರಿದ ಘಟನೆ ನಡೆದಿದೆ.

ರಾಜಂಪೇಟ್‌ನ ಮಾಜಿ ಶಾಸಕ ಅಮರನಾಥ್‌ ರೆಡ್ಡಿ ನೇತೃತ್ವದಲ್ಲಿ ಕಾಲ್ನಡಿಗೆ ಮೂಲಕ ತಿರುಮಲಕ್ಕೆ ತೆರಳುತ್ತಿದ್ದ ಗುಂಪಿನಲ್ಲಿದ್ದ ಬುಜ್ಜಿ (20) ಎನ್ನುವ ಯುವತಿಯೊಬ್ಬಳು ನಡೆಯಲಾಗದೇ ನಿಶ್ಶಕ್ತಳಾಗಿದ್ದಾಳೆ. ಸ್ಥಳದಲ್ಲಿ ಯಾವುದೇ ವಾಹನ ಇಲ್ಲದಿದ್ದರಿಂದ, ಪೇದೆ ಕುಲ್ಲಾಯಪ್ಪ ಎಂಬವರು ಯುವತಿಯನ್ನು ಹೆಗಲಲ್ಲೇ ಹೊತ್ತುಕೊಂಡು 4 ಕಿ.ಮಿ ಕ್ರಮಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪೇದೆಯ ಈ ಸೇವೆ ಭಾರೀ ಪ್ರಶಂಸೆಗೆ ಪಾತ್ರವಾಗಿದ್ದು, ಈ ಸೇವೆ ಇತರರಿಗೆ ಮಾದರಿಯಾಗಬೇಕು ಎಂದು ಕಡಪ ಎಸ್‌ಪಿ ಹೇಳಿದ್ದಾರೆ.