ಆಗಸ್ಟ್ 15ರಂದು ತ್ರಿವರ್ಣ ಧ್ವಜದ ಜೊತೆ ಬ್ರಿಟಿಷ್ ಬಾವುಟ ಹಾರಿಸಲು ಮುಂದಾಗಿದ್ರಾ ನೆಹರು?
ಬ್ರಿಟಿಷ್ ಯೂನಿಯನ್ ಬಾವುಟ ಹಾರಿಸಲು ದೇಶದ ಮೊದಲ ಪ್ರಧಾನಿಯಾಗಿದ್ದ ಜವಹಾರ್ ಲಾಲ್ ನೆಹರು ಮುಂದಾಗಿದ್ದರು ಎಂಬ ಮಾಹಿತಿಯುಳ್ಳ ಪತ್ರವೊಂದು ಬೆಳಕಿಗೆ ಬಂದಿದೆ
ನವದೆಹಲಿ: 1947 ಆಗಸ್ಟ್ 15ರಂದು ತ್ರಿವರ್ಣ ಧ್ವಜದ ಜೊತೆ ಬ್ರಿಟಿಷ್ ಯೂನಿಯನ್ ಬಾವುಟ ಹಾರಿಸಲು ದೇಶದ ಮೊದಲ ಪ್ರಧಾನಿಯಾಗಿದ್ದ ಜವಹಾರ್ ಲಾಲ್ ನೆಹರು ಮುಂದಾಗಿದ್ದರು ಎಂಬ ಮಾಹಿತಿಯುಳ್ಳ ಪತ್ರವೊಂದು ಬೆಳಕಿಗೆ ಬಂದಿದೆ. 1947ರ ಆಗಸ್ಟ್ 15ರ ಮಧ್ಯರಾತ್ರಿ ಭಾರತದಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಸ್ವತಂತ್ರ ದಿನವನ್ನು ಆಚರಣೆ ಮಾಡಲಾಗಿತ್ತು. 10 ಆಗಸ್ಟ್ 1947 ರಂದು ನೆಹರೂ ಅವರು ಮೌಂಟ್‌ಬ್ಯಾಟನ್‌ಗೆ ಬರೆದಿರುವ ಎನ್ನಲಾದ ಪತ್ರ ಸಾಮಾಜಿಕ ಜಾಲತಾಣದಲ್ಲಿ ಮುನ್ನಲೆಗೆ ಬಂದಿದೆ.
ನೆಹರು ಬರೆದ ಪತ್ರದಲ್ಲಿ ಏನಿದೆ?
ಆತ್ಮೀಯ ಲಾರ್ಡ್ ಮೌಂಟೇನ್ ಬ್ಯಾಟನ್ ಅವರೇ, ಆಗಸ್ಟ್ 9ರಂದು ಬ್ರಿಟಿಷ್ ಯೂನಿಯನ್ ಬಾವುಟ ಹಾರಿಸುವ ಕುರಿತ ಪತ್ರ ತಲುಪಿದೆ. ನಿಮ್ಮ ಸಲಹೆಯನ್ನು ಪರಿಗಣಿಸಲಾಗಿದೆ. ಮುಂದಿನ ವರ್ಷ ಆಗಸ್ಟ್ 15ರಂದು ಧ್ವಜ ಹಾರಿಸುವ ಕುರಿತು ಪಾಕಿಸ್ತಾನ ಸರ್ಕಾರದ ಜೊತೆ ಚರ್ಚೆ ನಡೆಸಲಾಗುವುದು ಎಂದು ಜವಹಾರ್ ಲಾಲ್ ನೆಹರು ಪತ್ರ ಬರೆದಿದ್ದಾರೆ.