Asianet Suvarna News Asianet Suvarna News

Gyanvapi Case: ಶಿವಲಿಂಗದ ಕಾರ್ಬನ್‌ ಡೇಟಿಂಗ್ ತೀರ್ಪು, ಅ. 11ಕ್ಕೆ ಮುಂದೂಡಿದ ಕೋರ್ಟ್‌

ಕಾಶಿಯ ಜ್ಞಾನವಾಪಿ ಮಸೀದಿಯಲ್ಲಿರುವ ಶಿವಲಿಂಗದ ಕಾರ್ಬನ್‌ ಡೇಟಿಂಗ್‌ ನಡೆಸುವಂತೆ ಹಿಂದು ಪರ ಅರ್ಜಿದಾರರು ಸಲ್ಲಿಕೆ ಮಾಡಿದ್ದ ಪ್ರಕರಣದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್‌, ತೀರ್ಪನ್ನು ಅಕ್ಟೋಬರ್‌ 1ಕ್ಕೆ ಕಾಯ್ದಿರಿಸಿದೆ. 

Judgment in Gyanvapi case deferred next hearing on carbon dating of Shivling on October 11 san
Author
First Published Oct 7, 2022, 2:47 PM IST

ವಾರಣಾಸಿ (ಅ.7): ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ಇರುವ ಕಲ್ಲಿನ ಮೂರ್ತಿಯ ಶಿವಲಿಂಗ ಹೌದೋ, ಅಲ್ಲವೋ ಎನ್ನುವ ನಿಟ್ಟಿನಲ್ಲಿ ಕಾರ್ಬನ್‌ ಡೇಟಿಂಗ್ ಪರೀಕ್ಷೆ ನಡೆಸುವಂತೆ ಹಿಂದು ಪರ ಅರ್ಜಿದಾರರು ಸಲ್ಲಿಕೆ ಮಾಡಿದ್ದ ಅರ್ಜಿಯ ವಿಚಾರಣೆಯನ್ನು ವಾರಣಾಸಿ ಜಿಲ್ಲಾ ಕೋರ್ಟ್‌ ಪೂರ್ತಿ ಮಾಡಿದೆ. ಶುಕ್ರವಾರ ಈ ಕುರಿತಾದ ತೀರ್ಪು ನೀಡಬೇಕಿತ್ತು. ವಿಚಾರಣೆ ನಡೆಸಿದ ಕೋರ್ಟ್‌ ಅಕ್ಟೋಬರ್‌ 11 ರಂದು ಇದರ ತೀರ್ಪು ನೀಡುವುದಾಗಿ ಹೇಳಿದ್ದು, ಅಲ್ಲಿಯವರೆಗೂ ಪ್ರಕರಣದ ನಿಟ್ಟಿನಲ್ಲಿ ಯಾವುದೇ ವಿಚಾರಣೆ ನಡೆಯುವುದಿಲ್ಲ. ಮಧ್ಯಾಹ್ನ 2 ಗಂಟೆಗೆ ಪ್ರಕರಣದ ತೀರ್ಪು ನೀಡಲಾಗುವುದು ಎಂದು ತಿಳಿಸಿದೆ. ಜ್ಞಾನವಾಪಿ ಮಸೀದಿ ಆವರಣದಲ್ಲಿ ನಡೆದ ಸಮೀಕ್ಷೆಯಲ್ಲಿ ಪತ್ತೆಯಾದ ಸುತ್ತಮುತ್ತಲಿನ ಪ್ರದೇಶದ ಉದ್ದ, ಅಗಲ, ಆಳ, ಹಾಗೂ ಶಿವಲಿಂಗ ಎಂದು ಹೇಳಲಾಗುವ ಕಲ್ಲಿನ ಆಕೃತಿ ಎಷ್ಟು ವರ್ಷ ಹಿಂದಿನದು ಎಂದು ತಿಳಿಸುವ ಕಾರ್ಬನ್ ಡೇಟಿಂಗ್ ಪರೀಕ್ಷೆ ನಡೆಯಬೇಕು ಎಂದು ಹಿಂದು ಪರ ಅರ್ಜಿದಾರರು ಕೋರ್ಟ್‌ ಮೆಟ್ಟಿಲೇರಿದ್ದರು. ವೈಜ್ಞಾನಿಕ ಪರೀಕ್ಷೆ ಮೂಲಕ ಯಾವುದೇ ವಸ್ತುವಿನ ಕಾಲಮಾನ ನಿರ್ಧಾರ ಮಾಡಲಾಗುತ್ತದೆ.

50 ಸಾವಿರ ವರ್ಷಗಳ ಹಿಂದಿನ ವಸ್ತುಗಳ ಕಾಲಮಾನ ತಿಳಿಯಬಹುದು:  ಪುರಾತನ ವಸ್ತುಗಳ ಕಾಲಮಾನ ನಿರ್ಧರಿಸುವ ವೈಜ್ಞಾನಿಕ ಪರೀಕ್ಷೆ ಇದಾಗಿದೆ. ವಸ್ತುವಿನ ಮೇಲೆ ಉಳಿದಿರುವ ಕಾರ್ಬನ್ ಆಧರಿಸಿ ನಡೆಯುವ ಪರೀಕ್ಷೆ ಇದು. ಕಾರ್ಬನ್ ಡೇಟಿಂಗ್ ಪರೀಕ್ಷೆಯಿಂದ ಕಾಲಮಾನವನ್ನು ನಿರ್ಧಾರ ಮಾಡಲಾಗುತ್ತದೆ. ಅಂದಾಜು 50 ಸಾವಿರ ವರ್ಷಗಳವರೆಗಿನ ವಸ್ತುಗಳ ಕಾಲಮಾನ ಈ ಪರೀಕ್ಷೆಯಿಂದ ತಿಳಿಯಬಹುದು.

ವಾರಣಾಸಿ ಜಿಲ್ಲಾ ಕೋರ್ಟ್‌ನಲ್ಲಿ (Varanasi District Court) ಹಿಂದುಗಳ ಪರವಾಗಿ ವಕೀಲ ವಿಷ್ಣು ಜೈನ್‌ (Vishnu Jain) ವಾದ ಮಂಡಿಸಿದರು. ನಾವು ಬರೀ ಕಾರ್ಬನ್ ಡೇಟಿಂಗ್ ಪರೀಕ್ಷೆಗಾಗಿ ಅರ್ಜಿ ಸಲ್ಲಿಸಿಲ್ಲ. ಸಂಪೂರ್ಣ ವೈಜ್ಞಾನಿಕ ಪರೀಕ್ಷೆ ನಡೆಯಬೇಕೆಂದು ಅರ್ಜಿ ಸಲ್ಲಿಸಿದ್ದೇವೆ. ವೈಜ್ಞಾನಿಕ ಪರೀಕ್ಷೆಯಿಂದ ಅದು ಶಿವಲಿಂಗವೇ, ಮುಸ್ಲಿಂ ಅರ್ಜಿದಾರರು ಹೇಳಿರುವಂತೆ ಕಾರಂಜಿಯೇ ಎನ್ನುವುದು ತಿಳಿಯಲಿದೆ ಎಂದು ಹೇಳಿದರು. ತೀರ್ಪು ಬರುವುದಕ್ಕೆ ಮೊದಲು ವಿಷ್ಣು ಜೈನ್ ಈ ವಾದ ಮಂಡಿಸಿದ್ದಾರೆ.

 

Gyanvapi Mosque Case: ಎಎಸ್‌ಐ ಸಮೀಕ್ಷೆಗೆ ನೀಡಿದ್ದ ತಡೆಯಾಜ್ಞೆ ಅ.31ರವರೆಗೆ ವಿಸ್ತರಿಸಿದ ಅಲಹಾಬಾದ್ ಹೈಕೋರ್ಟ್‌!

ಜ್ಞಾನವಾಪಿ (Gyanvapi Case) ಮಸೀದಿಯಲ್ಲಿ ನಡೆದ ಸಮೀಕ್ಷೆಯ ವೇಳೆ ಪತ್ತೆಯಾದ ಶಿವಲಿಂಗದ (Shivaling) ಕಾರ್ಬನ್ ಡೇಟಿಂಗ್ ಬಗ್ಗೆ ಇಂದೇ ನಿರ್ಧಾರ ಬರಲಿದೆ ಎನ್ನಲಾಗಿತ್ತು. ನ್ಯಾಯಾಲಯದ ತೀರ್ಪಿನ ಮೊದಲು, ಹಿಂದೂ ಕಡೆಯ ಜನರು ಪೂಜೆ ಮತ್ತು ಹವನವನ್ನು ಮಾಡಿದ್ದರು. ಹಿಂದೂಗಳ ಪರವಾಗಿ ತೀರ್ಪು ಬರುವಂತೆ ದೇವರಲ್ಲಿ ಪ್ರಾರ್ಥನೆ ಕೂಡ ಸಲ್ಲಿಸಿದ್ದಾರೆ. ಸೆಪ್ಟೆಂಬರ್ 29 ರಂದು ನಡೆದ ಕೊನೆಯ ವಿಚಾರಣೆಯಲ್ಲಿ, ಎರಡೂ ಕಡೆಯವರು ಕಾರ್ಬನ್‌ ಡೇಟಿಂಗ್‌ ವಿಚಾರವಾಗಿ ಎದುರಾಗಿದ್ದರು. ಜಿಲ್ಲಾ ನ್ಯಾಯಾಧೀಶ ಡಾ.ಅಜಯ್ ಕೃಷ್ಣ ವಿಶ್ವೇಶ್ ಅವರ ನ್ಯಾಯಾಲಯದಲ್ಲಿ ನಾಲ್ವರು ಮಹಿಳಾ ಅರ್ಜಿದಾರರ ಪರವಾಗಿ ಸುಪ್ರೀಂ ಕೋರ್ಟ್ ವಕೀಲರಾದ ಹರಿಶಂಕರ್ ಜೈನ್ (Lawyer Harishankar Jain) ಮತ್ತು ವಿಷ್ಣು ಜೈನ್ ಅವರು ಶಿವಲಿಂಗದ ಅಡಿಯಲ್ಲಿ ಅರ್ಘೆ ಮತ್ತು ಸುತ್ತಮುತ್ತಲಿನ ಪ್ರದೇಶದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದರು.

ಅಯೋಧ್ಯೆ ರೀತಿ ಕೋರ್ಟ್‌ನಲ್ಲಿಯೇ ಇತ್ಯರ್ಥವಾಗಲಿದ್ದಾನೆ ಕಾಶಿ ವಿಶ್ವನಾಥ!

 

ಅ.7ಕ್ಕೆ ತೀರ್ಪು ಎಂದಿದ್ದ ಕೋರ್ಟ್‌: ಕಾರ್ಬನ್‌ ಡೇಟಿಂಗ್‌ (Carbon Dating) ಮಾಡ್ತೀರೋ, ವೈಜ್ಞಾನಿಕ ಪರೀಕ್ಷೆ ಮಾಡ್ತೀರೋ ಗೊತ್ತಿಲ್ಲ. ಆದರೆ, ಯಾವ ರೀತಿಯ ಪರೀಕ್ಷೆ ಮಾಡಿದರೂ ಶಿವಲಿಂಗಕ್ಕೆ ಒಂದು ಚೂರು ವಿಘ್ನ ಬರದೇ ಇರುವ ರೀತಿಯಲ್ಲಿ ಎಚ್ಚರ ವಹಿಸಬೇಕು. ಫಿರ್ಯಾದಿ ರಾಖಿ ಸಿಂಗ್ ಅವರ ವಕೀಲರು ಕಾರ್ಬನ್ ಡೇಟಿಂಗ್‌ನಿಂದ ಶಿವಲಿಂಗದ ಮುರಿತದ ಆತಂಕವನ್ನು ವ್ಯಕ್ತಪಡಿಸಿದ್ದರು. ಮುಸ್ಲಿಂ ಕಡೆಯವರು ಕಲ್ಲು ಮತ್ತು ಮರದ ಕಾರ್ಬನ್ ಅಲ್ಲದ ಡೇಟಿಂಗ್ ಅನ್ನು ಉಲ್ಲೇಖಿಸಿದ್ದಾರೆ. ಈ ಪ್ರಕರಣದ ವಾದ-ಪ್ರತಿವಾದಗಳು ಪೂರ್ಣಗೊಂಡ ನಂತರ, ಜಿಲ್ಲಾ ನ್ಯಾಯಾಧೀಶರು ಅಕ್ಟೋಬರ್ 7 ತೀರ್ಪು ನೀಡುವುದಾಗಿ ಈ ಹಿಂದೆ ಹೇಳಿದ್ದರು.

Follow Us:
Download App:
  • android
  • ios