ಕೇರಳ(ಡಿ.17):  ಮೂರು ಹಂತದಲ್ಲಿ ನಡೆದ ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ.  ಆಡಳಿತಾರೋಢ LDF ಮೈತ್ರಿಕೂಟ ಅಧಿಕಾರದ ಚುಕ್ಕಾಣಿ ಹಿಡಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಗ್ರಾಮಪಂಚಾಯಿತು ಹಾಗೂ  ಪುರಸಬೆ ಸೇರಿ ಒಟ್ಟು 26 ಸ್ಥಾನ ಗೆದ್ದುಕೊಂಡು  3ನೇ ಸ್ಥಾನದಲ್ಲಿದೆ. ಈ ಬಾರಿಯ ಚುನಾವಣೆಯಲ್ಲಿ ಕೇರಳ ಜನತೆ ಬಿಜೆಪಿಗೆ ಪ್ರಗತಿ ನೀಡಿದ್ದಾರೆ. ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ.

ಶಬರಿಮಲೆಯಲ್ಲಿ ಕೇಸರಿ ಕಮಾಲ್‌, ಎನ್‌ಡಿಎಗೆ ಬಹುಮತ

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಗೆ ಪ್ರಗತಿ ನೀಡಿದ ಕೇರಳ ಜನತೆಗೆ ನನ್ನ ಧನ್ಯವಾದ. ಕೇರಳ ಬಿಜೆಪಿ, ಕೇರಳ ಬಿಜೆಪಿ ಅಧ್ಯಕ್ಷ ಸುರೇಂದ್ರನ್, ಕಾರ್ಯಕರ್ತರು ನಿರಂತರವಾಗಿ ದುಡಿದಿದ್ದಾರೆ. ಈ ಪ್ರಗತಿಯೊಂದಿಗೆ ಬಿಜೆಪಿ, ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಕೋಮುವಾದ ಹಾಗೂ LDF, UDF ರಾಜಕೀಯ ಕುತಂತ್ರಗಳನ್ನು ಬಹಿರಂಗ ಮಾಡುತ್ತೇವೆ ಎಂದು ಜಪಿ ನಡ್ಡಾ ಟ್ವೀಟ್ ಮಾಡಿದ್ದಾರೆ.

 

ಕೇರಳ 1,200 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿತ್ತು. ಡಿಸೆಂಬರ್ 8, 10 ಹಾಗೂ 14 ರಂದು ಮೂರು ಹಂತದಲ್ಲಿ ಚುನಾವಣೆ ನಡೆದಿತ್ತು. LDF ಮೈತ್ರಿಕೂಟ ಗೆಲುವಿನ ನಗೆ ಬೀರಿದೆ.