Asianet Suvarna News Asianet Suvarna News

ಮತ್ತೊಮ್ಮೆ ಮೋದಿ: ಬಿಜೆಪಿ ಗೋಡೆ ಬರಹ ಅಭಿಯಾನಕ್ಕೆ ಜೆ.ಪಿ. ನಡ್ಡಾ ಚಾಲನೆ; ರಾಜ್ಯದಲ್ಲೂ ಶುರು

ದಿಲ್ಲಿಯ ಸ್ಥಳೀಯ ಮಾರುಕಟ್ಟೆಯಲ್ಲಿ ಪ್ರಚಾರದಲ್ಲಿ ಭಾಗವಹಿಸಿದ ನಡ್ಡಾ, ಏಪ್ರಿಲ್-ಮೇನಲ್ಲಿ ಲೋಕಸಭೆಗೆ ಚುನಾವಣೆ ನಡೆಯಲಿದೆ. ಅದಕ್ಕೂ ಮುನ್ನ ದೇಶಾದ್ಯಂತ ಪ್ರತಿ ಮತಗಟ್ಟೆಯಲ್ಲಿ ಇದೇ ರೀತಿಯ ಆಂದೋಲನ ಆಯೋಜಿಸಲಾಗುವುದು ಎಂದರು.

jp nadda launches bjp s ek baar phir se modi sarkar wall writing campaign ash
Author
First Published Jan 16, 2024, 8:04 AM IST

ನವದೆಹಲಿ (ಜನವರಿ 16, 2024): ಲೋಕಸಭೆ ಚುನಾವಣೆಗೆ ಪೂರ್ವಭಾವಿಯಾಗಿ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಸೋಮವಾರ ನವದೆಹಲಿ ಯಲ್ಲಿ ತಮ್ಮ ಪಕ್ಷದ ಚುನಾವಣಾ ಚಿಹ್ನೆ ಕಮಲದ ಚಿತ್ರ ಹಾಗೂ 'ಏಕ್ ಬಾರ್ ಫಿರ್ ಸೇ ಮೋದಿ ಸರ್ಕಾ‌ರ್' ಎಂಬ ಘೋಷಣೆ ಯನ್ನು ಗೋಡೆ ಮೇಲೆ ಬರೆದು 'ಮತ್ತೊಮ್ಮೆ ಮೋದಿ ಸರ್ಕಾರ' ಗೋಡೆ ಬರಹ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಿದರು.

ದಿಲ್ಲಿಯ ಸ್ಥಳೀಯ ಮಾರುಕಟ್ಟೆಯಲ್ಲಿ ಪ್ರಚಾರದಲ್ಲಿ ಭಾಗವಹಿಸಿದ ನಡ್ಡಾ, ಏಪ್ರಿಲ್-ಮೇನಲ್ಲಿ ಲೋಕಸಭೆಗೆ ಚುನಾವಣೆ ನಡೆಯಲಿದೆ. ಅದಕ್ಕೂ ಮುನ್ನ ದೇಶಾದ್ಯಂತ ಪ್ರತಿ ಮತಗಟ್ಟೆಯಲ್ಲಿ ಇದೇ ರೀತಿಯ ಆಂದೋಲನ ಆಯೋಜಿಸಲಾಗುವುದು ಎಂದರು. ಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ಐತಿಹಾಸಿಕ ಜಯಕ್ಕೆ ಶ್ರಮಿಸಲು ಜನರಿಗೆ ಮನವಿ ಮಾಡಿದರು. ‘ದೇಶದ ಅಭಿವೃದ್ಧಿ ಆಗುತ್ತಿದೆ. ಭಾರತಕ್ಕೆ ಜಾಗತಿಕ ಮನ್ನಣೆ ಸಿಗುತ್ತಿದೆ. ಜನರು ಸ್ಥಿರ ಮತ್ತು ಎಲ್ಲರನ್ನೂ ಒಳಗೊಂಡ ಸರ್ಕಾರವನ್ನು ಆಯ್ಕೆ ಮಾಡುತ್ತಾರೆ ಮತ್ತು ಮೋದಿಯವರ ನಾಯಕತ್ವದಲ್ಲಿ ಅಭಿವೃದ್ಧಿಯ ಸಂಕಲ್ಪ ಸಾಕಾರವಾಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನು ಓದಿ: ಉತ್ತರ ಕನ್ನಡಕ್ಕಾಗಿ ಅನಂತ ಕುಮಾರ್ ಹೆಗಡೆ ಏನು ಮಾಡಿದ್ದಾರೆ?: ಸಿಎಂ ಸಿದ್ದರಾಮಯ್ಯ

ಪ್ರತಿ ಬೂತ್‌ನಲ್ಲಿ 5 ಕಡೆ ಬರಹ
ಮೋದಿ ಅವರು 3ನೇ ಬಾರಿ ಪ್ರಧಾನಿಯಾಗುವ ಮೂಲಕ 2047ರಲ್ಲಿ ವಿಕಸಿತ ಭಾರತದ ಕನಸು ನನಸಾಗಬೇಕು. ಈ ನಿಮಿತ್ತ ನಡ್ಡಾ ಅವರ ಸೂಚನೆ ಮೇರೆಗೆ ಗೋಡೆ ಬರಹ ಅಭಿಯಾನ ಆರಂಭಿಸಲಾಗಿದೆ. ಪ್ರತಿ ಬೂತ್‌ನಲ್ಲಿ 5 ಕಡೆ ಬರಹ ಬರೆಯಲಾಗುತ್ತದೆ.

- ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

ಅನಂತಕುಮಾರ್‌ ಹೆಗಡೆ ಮಾನಸಿಕ ಆರೋಗ್ಯದ ಕಡೆ ಗಮನ ನೀಡಲಿ: ಡಿಕೆಶಿ

Follow Us:
Download App:
  • android
  • ios