ಕೋಲ್ಕತಾ(ಮಾ.16): ಬಾಟ್ಲಾ ಹೌಸ್ ಎನ್‌ಕೌಂಟರ್ ಪ್ರಕರಣದಲ್ಲಿ ದೆಹಲಿ ಕೋರ್ಟ್ ತೀರ್ಪು ನೀಡಿದೆ. ಇಂಡಿಯನ್ ಮುಜಾಹಿದ್ದೀನ್ ಉಗ್ರ ಆರಿಝ್ ಖಾನ್‌ಗೆ ಗಲ್ಲು ಶಿಕ್ಷೆ ವಿಧಿಸಿದೆ. ಈ ಮೂಲಕ ಬಾಟ್ಲಾ ಹೌಸ್ ಎನ್‌ಕೌಂಟರ್ ನಕಲಿ ಅಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಕೋರ್ಟ್ ತೀರ್ಪು ಇದೀಗ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಬಾಟ್ಲಾ ಹೌಸ್ ಎನ್‌ಕೌಂಟರ್ ಪ್ರಕರಣ: ಉಗ್ರ ಆರಿಝ್ ಖಾನ್‌ಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್

ಉಗ್ರ ಅರಿಝ್ ಖಾನ್‌ಗೆ ಗಲ್ಲು ಶಿಕ್ಷೆ ತೀರ್ಪು ಭಾರತೀಯರಲ್ಲಿ ಸಂತಸ ಮೂಡಿಸಿದೆ. ಇಷ್ಟೇ ಅಲ್ಲ ಇದೇ ಉಗ್ರರಿಂದ ಹುತಾತ್ಮರಾದ ದೆಹಲಿ ಇನ್ಸ್‌ಪೆಕ್ಚರ್ ಮೋಹನ್ ಚಂದ್ ಶರ್ಮಾ ಆತ್ಮಕ್ಕೆ ಶಾಂತಿ ಸಿಕ್ಕಿದೆ. ಕುಟುಂಬಸ್ಥರಿಗೆ ಕೊಂಚ ಸಮಾಧಾನ ಸಿಕ್ಕಿದೆ. ಆದರೆ ಮಮತಾ ಬ್ಯಾನರ್ಜಿ ನೆಮ್ಮದಿ ಕೆಡಿಸಿದೆ. ಕಾರಣ ಬಾಟ್ಲಾ ಹೌಸ್ ಎನ್‌ಕೌಂಟರ್ ಅಸಲಿ ಎಂದು ಸಾಬೀತಾಗಿದ್ದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಹೇಳಿದ್ದರು.

ಬಾಟ್ಲಾ ಹೌಸ್ ಎನ್‌ಕೌಂಟರ್: ಉಗ್ರ ಆರಿಝ್ ಖಾನ್ ದೋಷಿ, ಏನಿದು ಪ್ರಕರಣ!

ಪಶ್ಚಿಮ ಬಂಗಾಳದ ಕೊಟುಲ್ಪುರದಲ್ಲಿ ಆಯೋಜಿಸಿದ ಬಿಜೆಪಿ ರ್ಯಾಲಿಯಲ್ಲಿ ಮಾತನಾಡಿದ ರಾಷ್ಟ್ರೀಯ  ಅಧ್ಯಕ್ಷ ಜೆಪಿ ನಡ್ಡಾ ಇದೀಗ ಮಮತಾಗೆ ಟಾಂಗ್ ನೀಡಿದ್ದಾರೆ. ರಾಜಕೀಯಕ್ಕೆ ಗುಡ್ ಬೈ ಯಾವಾಗ ಎಂದು ನಡ್ಡಾ ಪಶ್ನಿಸಿದ್ದಾರೆ. 

ಉಗ್ರರ ಪರ ಮೊಸಳೆ ಕಣ್ಣೀರಿಟ್ಟಿದ್ದ ಮಮತಾ ಬ್ಯಾನರ್ಜಿಗೆ ಇದೀಗ ಉತ್ತರವೇ ಇಲ್ಲ ಎಂದು ನಡ್ಡಾ ಹೇಳಿದ್ದಾರೆ. 2008ರ ಬಾಟ್ಲಾ ಹೌಸ್ ಎನ್‌ಕೌಂಟರ್ ನಕಲಿ ಎಂದು ಮಮತಾ ಮಾತ್ರವಲ್ಲ ಕಾಂಗ್ರೆಸ್ ಕೂಡ ಆರೋಪಿಸಿತ್ತು.