ಮುಂಬೈ(ನ.08): ನಟಿ ಕಂಗನಾ ರಾವತ್ ಈಗಾಗಲೇ ಅಮೆರಿಕ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜೋ ಬೈಡನ್ ವಿರುದ್ಧ ಸರಣಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಜೋ ಬೈಡೆನ್ ನಿಮಿಷ ನಿಮಿಷಕ್ಕೂ ಮರೆವು ಇರುವ ಗಜನಿ ಎಂದಿದ್ದರು. ಇದೀಗ ಮೆರೆ ಗುಳಿತನ ಗಜನಿ ಜೋ ಬೈಡೆನ್ ಆಡಳಿತದಲ್ಲಿ ಒಂದು ವರ್ಷವೂ ಪೂರೈಸಲ್ಲ ಎಂದು ಕಂಗನಾ ಹೇಳಿದ್ದಾರೆ.

ಅಮೆರಿಕದ ಹೊಸ ಅಧ್ಯಕ ಜಾನ್‌ ಬೈಡನ್‌ನನ್ನು ಗಜನಿ ಎಂದ ನಟಿ ಕಂಗನಾ..!

ಗಜನಿ ಬೈಡನ್ ಡಾಟಾ 5 ನಿಮಿಷಕ್ಕೊಮ್ಮ ಡಿಲೀಟ್ ಆಗುತ್ತೆ. ಎಲ್ಲವೂ ಇಂಜೆಕ್ಷನ್ ಮೂಲಕ ನಡೆಯುತ್ತಿದೆ. ಹೀಗಾಗಿ ಒಂದು ವರ್ಷಕ್ಕಿಂತ ಮೇಲ್ಪಟ್ಟು ಬೈಡನ್ ಆಡಳಿತ ಇರಲ್ಲ ಎಂದು ಕಂಗನಾ ಟ್ವೀಟ್ ಮೂಲಕ ಹೇಳಿದ್ದಾರೆ. ಇನ್ನು ಭಾರತೀಯ ಮೂಲಕ ಕಮಲಾ ಹ್ಯಾರಿಸ್ ಗೆಲುವಿಗೆ ಅಭಿನಂದನೆ ತಿಳಿಸಿರುವ ಕಂಗನಾ, ಕಮಲಾ ಹ್ಯಾರಿಸ್ ಗೆಲುವು ಪ್ರತಿಯೊಬ್ಬ ಮಹಿಳೆಗೂ ಸಂಭ್ರಮ ತಂದಿದೆ. ಇದು ಐತಿಹಾಸಿಕ ದಿನ. ಕಮಲಾ ಹ್ಯಾರಿಸ್ ದೇಶವನ್ನು ಮುನ್ನಡೆಸಲಿದ್ದಾರೆ ಎಂದು ಕಂಗನಾ ಹೇಳಿದ್ದಾರೆ.

 

ಕಂಗನಾ ಹೇಳಿಕೆಗೆ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಅಮೆರಿಕ ಜನ ಜೋ ಬೈಡನ್‌ಗೆ ಮತ ನೀಡಿ ಗೆಲ್ಲಿಸಿದ್ದಾರೆ. ಅಲ್ಲಿನ ಜನ ಬದಲಾವಣೆ ಬಯಸಿದ್ದರು. ಅಭೂತಪೂರ್ವ ಗೆಲುವಿನ ಮೂಲಕ ಅಧ್ಯಕ್ಷ ಸ್ಥಾನ ಗೆದ್ದಿದ್ದಾರೆ. ಇದು ಜನರ ಅಭಿಪ್ರಾಯ. ಹೀಗಾಗಿ ಜೋ ಬೈಡನ್‌ ಗೆ ಈ ರೀತಿಯ ಟೀಕೆ ಉತ್ತಮವಲ್ಲ ಎಂದಿದ್ದಾರೆ.