JNUನಲ್ಲಿ ಸೆಕ್ಸ್ ಹಗರಣ: ರಾಹುಲ್ ದೀಪಿಕಾ ಕೂಡಾ ಹೋಗುತ್ತಾರೆ: ಯೋಗಿ ಸಚಿವನ ವಿವಾದಾತ್ಮಕ ಹೇಳಿಕೆ!
* ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ಸೆಕ್ಸ್ ಹಗರಣದ ಹೇಳಿಕೆ
* ಯೋಗಿ ಸಚಿವನಿಂದ ವಿವಾದಾತ್ಮಕ ಹೇಳಿಕೆ
* ರಾಹುಲ್ ದೀಪಿಕಾ ಕೂಡಾ ಹೋಗುತ್ತಾರೆ
ಲಕ್ನೋ(ಡಿ. 31): ಉತ್ತರ ಪ್ರದೇಶ ಚುನಾವಣಾ ಹೊಸ್ತಿಲಲ್ಲಿ ರಾಜಕೀಯ ನಾಯಕರ ವಾಗ್ದಾಳಿ ತೀವ್ರವಾಗಲಾರಂಭಿಸಿದೆ. ನಾಯಕರು ಪ್ರತಿಪಕ್ಷ ನಾಯಕರ ವಿರುದ್ಧ ವೈಯುಕ್ತಿಕ ಟೀಕೆಗಿಳಿದಿದ್ದಾರೆ. ಸದ್ಯ ಉತ್ತರ ಪ್ರದೇಶದ ಯೋಗಿ ಸರ್ಕಾರದ ರಾಜ್ಯ ಸಚಿವ ಠಾಕೂರ್ ರಘುರಾಜ್ ಸಿಂಗ್ ಅವರು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ದೆಹಲಿಯ ಜೆಎನ್‌ಯುನಲ್ಲಿ ಲೈಂಗಿಕ ಹಗರಣ ನಡೆಯುತ್ತಿದೆ ಎಂದು ಅವರು ಹೇಳಿದರು. ಅಷ್ಟೇ ಅಲ್ಲದೇ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನ ಘಟಾನುಘಟಿ ನಾಯಕರು ಅಲ್ಲಿಗೆ ಹೋಗುತ್ತಾರೆ ಎಂದಿದ್ದಾರೆ. ನಟಿ ದೀಪಿಕಾ ಪಡುಕೋಣೆ ಕೂಡ ಹೋಗಿದ್ದಾರೆ ಎಂದೂ ಆರೋಪಿಸಿದ್ದಾರೆ.
ಅಲಿಗಢದಲ್ಲಿ ಸಚಿವ ರಘುರಾಜ್ ಮಾತನಾಡಿ, 'ನೆಹರೂ ತಮ್ಮ ತಂತ್ರಗಾರಿಕೆ ಮೂಲಕ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಆರಂಭವಾಗಿತ್ತು. ಜೆಎನ್‌ಯುನಲ್ಲಿ ಲೈಂಗಿಕ ಹಗರಣ ನಡೆಯುತ್ತಿತ್ತು. ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ಕಮ್ಯುನಿಸ್ಟರು ಮತ್ತು ದೇಶದ್ರೋಹಿಗಳನ್ನು ಬೆಳೆಸಲಾಗಿದೆ. ರಾಷ್ಟ್ರವಿರೋಧಿಗಳು ಅಲ್ಲಿ ಲೈಂಗಿಕ ಹಗರಣಗಳನ್ನು ನಡೆಸುತ್ತಾರೆ, ಅದರಲ್ಲಿ ರಾಹುಲ್ ಗಾಂಧಿ ಮತ್ತು ದೀಪಿಕಾ ಪಡುಕೋಣೆಯಂತಹ ದೊಡ್ಡವರು ಭಾಗಿಯಾಗುತ್ತಾರೆ. ದೇಶವಿರೋಧಿ ಜನರು ಅಲ್ಲಿ ಸೇರುತ್ತಿದ್ದಾರೆ, ಆದರೆ ಮುಂದಿನ ದಿನಗಳಲ್ಲಿ ನಾವು ಈ ದೇಶ ವಿರೋಧಿ ಶಕ್ತಿಗಳನ್ನು ಹತ್ತಿಕ್ಕುತ್ತೇವೆ ಎಂದುದ್ದಾರೆ.
ಇಷ್ಟಕ್ಕೇ ಸುಮ್ಮನಾಗದ ಸಚಿವ ರಘುರಾಜ್ ಅಲಿಗಢ ಮುಸ್ಲಿಂ ವಿವಿಯಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಉರ್ದು ಕಡ್ಡಾಯಗೊಳಿಸಬಾರದು ಎಂದು ಹೇಳಿದರು. ಹಿಂದೂ ವಿದ್ಯಾರ್ಥಿಗಳಿಗೆ ಹಿಂದಿ ಗೊತ್ತು. ಹಿಂದಿ ಕಲಿಯಬೇಕು. ಅಲ್ಲದೆ, ಇಲ್ಲಿ ಮೀಸಲಾತಿ ಪ್ರಶ್ನೆಗೆ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ವಿಶ್ವವಿದ್ಯಾಲಯ ಮಾಡಲು ಬಯಸಿದೆ ಎಂದು ಹೇಳಿದರು. ಅದು ಹಿಂದೂಸ್ತಾನ್ ವಿಶ್ವವಿದ್ಯಾಲಯವಾಗಲಿದೆ ಎಂದಿದ್ದಾರೆ.
ರಘುರಾಜ್ ಸಿಂಗ್ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗುತ್ತಿರುವುದು ಇದೇ ಮೊದಲಲ್ಲ. ಕೆಲವು ದಿನಗಳ ಹಿಂದೆ ಮದರಸಾಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಚಿವರು, ದೇವರು ಅವಕಾಶ ನೀಡಿದರೆ ದೇಶದಲ್ಲಿ ನಡೆಯುತ್ತಿರುವ ಎಲ್ಲಾ ಮದರಸಾಗಳನ್ನು ಮುಚ್ಚುತ್ತೇನೆ ಎಂದು ಹೇಳಿದ್ದರು. ಮದರಸಾಗಳಲ್ಲಿ ಭಯೋತ್ಪಾದಕ ನೆಲೆಗಳಿವೆ. ಇಲ್ಲಿಂದ ತರಬೇತಿ ಪಡೆದ ನಂತರ ಭಯೋತ್ಪಾದಕ ಚಿಂತನೆ ಅರಳುತ್ತದೆ ಎಂದಿದ್ದರು.