ಸದಾ ವಿವಾದಗಳಿಂದ ಸುದ್ದಿಯಾಗುತ್ತಿದ್ದ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾನಿಯಲ ವಿಶೇಷ ಸಾಧನೆಗೆ ಪಾತ್ರವಾಗಿದೆ. ಮಲೇರಿಯಾಕ್ಕೆ ಚಿಕಿತ್ಸೆ ನೀಡಲು ಆಂಟಿ-ಹೆಪಟೈಟಿಸ್ ಸಿ ಔಷಧ ಅಲಿಸ್ಪೊರಿವಿರ್ ಮರುಸ್ಥಾನಗೊಳಿಸುವ ಮೂಲಕ ಹೊಸ ಪ್ರಯೋಗದಲ್ಲಿ ಯಶಸ್ಸು ಕಂಡಿದೆ.
ದೆಹಲಿ(ನ.16): ಮಲೇರಿಯಾಗೆ ಪರಿಣಾಮಕಾರಿಯಾದ ಔಷದ ಪತ್ತೆ ಹಚ್ಚುವಲ್ಲಿ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯ ಯಶಸ್ವಿಯಾಗಿದೆ. ಜೆಎನ್‌ಯು ಮಾಲಿಕ್ಯುಲರ್ ಮೆಡಿಸಿನ್ ವಿಶೇಷ ಕೇಂದ್ರ ಸಂಶೋಧಕರು ಹೊಸ ಪ್ರಯೋಗದಲ್ಲಿ ಯಶಸ್ಸು ಕಂಡಿದ್ದಾರೆ. ಮಾಲಿಕ್ಯುಲರ್ ಮೆಡಿಸಿನ್ ಕೇಂದ್ರದಲ್ಲಿ ಮಲೇರಿಯಾಕ್ಕೆ ಚಿಕಿತ್ಸೆ ನೀಡಲು ಆ್ಯಂಟಿ-ಹೆಪಟೈಟಿಸ್ ಸಿ ಔಷಧ ಅಲಿಸ್ಪೊರಿವಿರ್ ಮರು-ಸ್ಥಾನಗೊಳಿಸುವ ಮೂಲಕ ಪರಿಣಾಮಕಾರಿ ಔಷಧ ಪತ್ತೆಹಚ್ಚಲಾಗಿದೆ.
ಸೊಳ್ಳೆಗಳ ಮೂಲಕ ಹರಡುವ ಮಲೇರಿಯಾ ಸೋಂಕು ಭಾರತದಲ್ಲಿ ಹೆಚ್ಚಾಗುತ್ತಿದೆ. ಸೋಂಕಿತ ಸೊಳ್ಳೆಗಳ ಕಡಿತದಿಂದ ಮಲೇರಿಯಾ ಹರಡುತ್ತದೆ. ಮಲೇರಿಯಾ ಹರಡುವ ಪ್ಲಾಸ್ಮೋಡಿಯಂ ಜಾತಿಗಳಿಂದ ಇದೀಗ ಆ್ಯಂಟಿ ಮಲೇರಿಯಾ ಚಿಕಿತ್ಸೆಗೆ ಔಷಧಿ ಪ್ರತಿರೋಧಕ ಅಭಿವೃದ್ಧಿಪಡಿಸಲಾಗಿದೆ. ಈ ಔಷಧಿಯಿಂದ ಈಗಾಗಲೇ ಮಲೇರಿಯಾಗೆ ನೀಡಲಾಗುತ್ತಿರುವ ಕ್ಲೋರೊಕ್ವಿನ್, ಪ್ರೊಗ್ವಾನಿಲ್, ಪಿರಿಮೆಥಮೈನ್, ಸಲ್ಫಾಡಾಕ್ಸಿನ್ ನಂತರ ಚಿಕಿತ್ಸೆಗಳು ಸ್ಥಗಿತಗೊಳ್ಳಲಿದೆ. ಕಾರಣ ಸದ್ಯ ಅಭಿವೃದ್ಧಿಪಡಿಸಿರುವ ಆ್ಯಂಟಿ-ಹೆಪಟೈಟಿಸ್ ಸಿ ಔಷಧ ಅಲಿಸ್ಪೊರಿವಿರ್ ಮಲೇರಿಯಾ ವಿರುದ್ಧ ತ್ವರಿತ ಹಾಗೂ ಪರಿಣಾಮಕಾರಿಯಾಗಿ ಹೋರಾಟ ಮಾಡಲಿದೆ. ಇಷ್ಟೇ ಅಲ್ಲ ಒಂದೇ ಔಷಧದಲ್ಲಿ ಸುಲಭವಾಗಿ ಮಲೇರಿಯಾ ವೈರಸ್ ವಿರುದ್ಧ ದೇಹ ಹೋರಾಡಲು ಶಕ್ತಿ ನೀಡುತ್ತದೆ.
ಮಲೇರಿಯಾ ಪ್ರಕರಣಗಳಲ್ಲಿ ಏರಿಕೆ; WHOನಿಂದ ಹೊಸ ಮಾರ್ಗಸೂಚಿ ಬಿಡುಗಡೆ
ಸದ್ಯ ಚಾಲ್ತಿಯಲ್ಲಿರುವ ಔಷಧಗಳಿಂದ ಮಲೇರಿಯಾ ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗಿಲ್ಲ. ಹೀಗಾಗಿ ಪ್ರತಿ ವರ್ಷ ಭಾರತ ಸೇರಿದಂತೆ ಬಹುತೇಕ ದೇಶಗಳು ಮಲೇರಿಯಾ ಆತಂಕ ಎದುರಿಸುತ್ತಿದೆ. ಹಲವು ದೇಶಗಳು ಭಾರತದಿಂದಲೇ ಮಲೇರಿಯಾ ಔಷಧಿಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಆರ್ಟೆಮಿಸಿನಿನ್ ಆಧಾರಿತ ಸಂಯೋಜನೆಯ ಚಿಕಿತ್ಸೆಗಳಿಂದ ಮಲೇರಿಯಾ ನಿಯಂತ್ರಣ ಸಾಧ್ಯವಾಗದ ಕಾರಣ ಹೊಸ ಔಷಧಿಗಳ ಅನಿವಾರ್ಯತೆ ಸೃಷ್ಟಿಸಿದೆ. ಹಲವು ದೇಶಗಳಲ್ಲಿ ಮಲೇರಿಯಾಗೆ ಪರಿಣಾಮಕಾರಿ ಔಷಧ ಅಭಿವೃದ್ಧಿ ಹಾಗೂ ಸಂಶೋಧನೆ ನಡೆಯುತ್ತಿದೆ. ಇದೀಗ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ಸಂಶೋಧನೆ ಈ ನಿಟ್ಟಿನಲ್ಲಿ ಭಾರಿ ಮಹತ್ವ ಪಡೆದುಕೊಂಡಿದೆ.
Mosquito Diseases : ಈ ಸೀಸನ್‌ನಲ್ಲಿ ಈ ರೋಗಗಳ ಬಗ್ಗೆ ಎಚ್ಚರವಾಗಿರಿ !
ಅಲಿಸ್ಪೊರಿವಿರ್ ಮರು ಸ್ಥಾನಗೊಳಿಸುವ ಮೂಲಕ ಮಲೇರಿಯಾಗೆ ಪರಿಣಾಮಕಾರಿ ಔಷಧ ಅಭಿವೃದ್ಧಿಯಲ್ಲಿ ಯಶಸ್ವಿಯಾಗಿದ್ದೇವೆ. ಪ್ಲಾಸ್ಮೋಡಿಯಂನಲ್ಲಿರುವ ಮಲೇರಿಯಾ ವಿರೋಧಿ ಸಾಮರ್ಥ್ಯದ ಕುರಿತು ಅಧ್ಯಯನ ನಡೆಸಿ ಈ ಔಷಧಿ ಅಭಿವೃದ್ಧಿ ಮಾಡಲಾಗಿದೆ ಎಂದು ಪ್ರೊಫೆಸರ್ ಆನಂದ್ ರಂಗನಾಥನ್ ಹೇಳಿದ್ದಾರೆ.
