Asianet Suvarna News Asianet Suvarna News

Jnanapeeta Award : ಗೋವಾದ ದಾಮೋದರ, ಅಸ್ಸಾಂನ ನೀಲಮಣಿಗೆ ಜ್ಞಾನಪೀಠ

  • ಭಾರತ ಸಾಹಿತ್ಯ ವಲಯಕ್ಕೆ ನೀಡಿರುವ ಕೊಡುಗೆ ಪರಿಗಣಿಸಿ  ಜ್ಞಾನಪೀಠ ಪ್ರಶಸ್ತಿ
  • ಅಸ್ಸಾಂ ಕವಿ ನೀಲಮಣಿ ಫೂಕನ್‌ ಹಾಗೂ ಗೋವಾದ ಕೊಂಕಣಿ ಕಾದಂಬರಿಕಾರ ದಾಮೋದರ್‌ ಮೌಝೋಗೆ ಜ್ಞಾನಪೀಠ
Jnanapeeta Award for Damodar mauj neelamani phookan snr
Author
Bengaluru, First Published Dec 8, 2021, 10:09 AM IST
  • Facebook
  • Twitter
  • Whatsapp

ನವದೆಹಲಿ (ಡಿ.08): ಭಾರತ ಸಾಹಿತ್ಯ ( Indian literature ) ವಲಯಕ್ಕೆ ನೀಡಿರುವ ಕೊಡುಗೆ ಪರಿಗಣಿಸಿ, ಅಸ್ಸಾಂ (Assam) ಕವಿ ನೀಲಮಣಿ ಫೂಕನ್‌ ಹಾಗೂ ಗೋವಾದ ಕೊಂಕಣಿ ಕಾದಂಬರಿಕಾರ ದಾಮೋದರ್‌ ಮೌಝೋ ಅವರು ಜ್ಞಾನಪೀಠ ಪ್ರಶಸ್ತಿಗೆ (Jnanapeeta award) ಪಾತ್ರರಾಗಿದ್ದಾರೆ.ಪೂಕನ್‌ ಅವರಿಗೆ 56ನೇ ಹಾಗೂ ಅವರಿಗೆ 57ನೇ ಪ್ರಶಸ್ತಿ ನೀಡಲಾಗಿದೆ. 1933ರಲ್ಲಿ ಅಸ್ಸಾಂನಲ್ಲಿ ಜನಿಸಿದ ಫೂಕನ್‌ ಅವರು 1981ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1990ರಲ್ಲಿ ಪದ್ಮಶ್ರೀ ಪಡೆದಿದ್ದರು. ಗುಲಾಪಿ ಜಮೂರ್‌ ಲಗ್‌ನಾ, ಕೊಬಿಟಾ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.

ಕೊಂಕಣಿ (Konkani) ಸಣ್ಣ ಕಥೆ ಹಾಗೂ ಕಾದಂಬರಿಗಾರ ದಾಮೋದರ ಅವರು 1983ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (Award) ಪಡೆದಿದ್ದರು. ಸುನಾಮಿ ಸಿಮೋನ್‌, ಕರ್ಮೇಲಿಯನ್‌, ಭುರ್ಗಿಮ್‌ ಮುಗೆಲಿಮ್‌ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಪತ್ರಕರ್ತೆ ಗೌರಿ ಲಂಕೇಶ್‌ ಅವರ ಹತ್ಯೆಯ ಸಮಯದಲ್ಲಿ ಇವರ ಜೀವಕ್ಕೂ ಅಪಾಯವಿತ್ತು ಎಂದು ಪೊಲೀಸರು ಹೇಳಿದ್ದರು.

ಬೈರಪ್ಪ, ಮೊಯ್ಲಿ, ಕಣವಿ ಹೆಸರು ಶಿಫಾರಸು ಮಾಡಲಾಗಿತ್ತು :   ಪ್ರತಿಷ್ಠಿತ ಜ್ಞಾನಪೀಠ ಪುರಸ್ಕಾರದ(Jnanpith Award) ಆಯ್ಕೆ ಪ್ರಕ್ರಿಯೆ ಚುರುಕುಗೊಂಡಿದ್ದು, ಪ್ರಶಸ್ತಿಗಾಗಿ ಕನ್ನಡ (kannada) ಸಾರಸ್ವತ ಲೋಕದ ಮೂವರು ದಿಗ್ಗಜರ ಹೆಸರುಗಳನ್ನು ಶಿಫಾರಸು ಮಾಡಲಾಗಿತ್ತು. ಆದರೆ ಕನ್ನಡಕ್ಕೆ ಪ್ರಶಸ್ತಿ ಕೈ ತಪ್ಪಿದೆ.  

ಟೈಮ್ಸ್‌ ಗ್ರೂಪ್‌ (Times Group) ನೀಡುವ ಭಾರತೀಯ ಜ್ಞಾನಪೀಠ ಪ್ರಶಸ್ತಿಗೆ (India Jnanapeeta award) ಕರುನಾಡ ಸಾರಸ್ವತ ಲೋಕದ ದಿಗ್ಗಜರಾದ ಎಸ್‌.ಎಲ್‌.ಭೈರಪ್ಪ(SL Bhyrappa), ವೀರಪ್ಪ ಮೊಯ್ಲಿ(Veerappa Moily) ಮತ್ತು ಚೆನ್ನವೀರ ಕಣವಿ(Chennaveera Kanavi) ಹೆಸರು ಶಿಫಾರಸುಗೊಂಡಿತ್ತು.   ಆದರೆ, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿರುವ ಡಾ.ಚಂದ್ರಶೇಖರ್‌ ಕಂಬಾರ ಅವರಿಗೆ ವೀರಪ್ಪ ಮೊಯ್ಲಿ ಅವರು ಆಪ್ತರಾಗಿರುವ ಕಾರಣ ಕರುನಾಡಿಗೆ 9ನೇ ಜ್ಞಾನಪೀಠ ಪ್ರಶಸ್ತಿ ಮೊಯ್ಲಿ ಮೂಲಕ ಪ್ರಾಪ್ತವಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು.  ಆದರೆ ನಿರೀಕ್ಷೆಯಂತೆ ಈ ಬಾರಿ ಕನ್ನಡ ಸಾಹಿತ್ಯ ಲೋಕಕ್ಕೆ ಜ್ಞಾನಪೀಠ ದೊರೆತಿಲ್ಲ.

ಈಗಾಗಲೇ ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಸಂದಿವೆ. ಒಂದು ಭಾಷೆಗೆ ಜ್ಞಾನಪೀಠ ಪ್ರಶಸ್ತಿ ನೀಡಿದ ಬಳಿಕ ಮುಂದಿನ ಮೂರು ವರ್ಷ ಆ ಭಾಷೆಯ ಕೃತಿಗಳನ್ನು ಪ್ರಶಸ್ತಿಗೆ ಪರಿಗಣಿಸುವುದಿಲ್ಲ. ಈಗಾಗಲೇ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ಬಂದು ದಶಕ ಕಳೆದಿದೆ. ಹಾಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರೂ ಆಗಿರುವ ಡಾ.ಚಂದ್ರಶೇಖರ್‌ ಕಂಬಾರರಿಗೆ 2010ರಲ್ಲಿ ಸಮಗ್ರ ಸಾಹಿತ್ಯದ ಕೊಡುಗೆಗಾಗಿ ಜ್ಞಾನಪೀಠ ಪ್ರಶಸ್ತಿ ನೀಡಲಾಗಿತ್ತು.

ಅತ್ಯಂತ ಪ್ರತಿಷ್ಠಿತವೂ ವಿಶಿಷ್ಟವೂ ಆಗಿರುವ ಮತ್ತು ಅಧಿಕೃತತೆಯನ್ನು ಪಡೆದಿರುವ ಈ ಪ್ರಶಸ್ತಿಯು ವ್ಯಾಪಕವಾಗಿರುವ ತನ್ನ ಆಯ್ಕೆ ಪ್ರಕ್ರಿಯೆಯಿಂದಾಗಿ ಪಾರದರ್ಶಕತೆ ಉಳಿಸಿಕೊಂಡಿದೆ. ಪ್ರಶಸ್ತಿ ಆಯ್ಕೆ ಸಂದರ್ಭದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಶಿಫಾರಸನ್ನು ಕೂಡ ಕೇಳಲಾಗುತ್ತದೆ. ಶಿಫಾರಸಾದ ಸಾಹಿತಿಗಳ ಕೃತಿಗಳನ್ನು ಪರಿಣತರಿಗೆ ನೀಡಿ ಮೌಲ್ಯಮಾಪನ ನಡೆಸಿ ಅನಂತರ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ಕನ್ನಡದ ಜ್ಞಾನಪೀಠ ಪುರಸ್ಕೃತರು:  ಕುವೆಂಪು- ಶ್ರೀರಾಮಾಯಣ ದರ್ಶನಂ(1967), ದ.ರಾ.ಬೇಂದ್ರೆ- ನಾಕುತಂತಿ (1973), ಶಿವರಾಮ ಕಾರಂತ- ಮೂಕಜ್ಜಿಯ ಕನಸುಗಳು(1977), ಮಾಸ್ತಿ ವೆಂಕಟೇಶ ಅಯ್ಯಂಗಾರ್‌- ಸಮಗ್ರ ಸಾಹಿತ್ಯ: ವಿಶೇಷ ಉಲ್ಲೇಖ- ಚಿಕವೀರ ರಾಜೇಂದ್ರ (1983), ವಿ.ಕೃ.ಗೋಕಾಕ್‌- ಸಮಗ್ರ ಸಾಹಿತ್ಯ- ವಿಶೇಷ ಉಲ್ಲೇಖ: ಭಾರತ ಸಿಂಧುರಶ್ಮಿ (1990), ಯು.ಆರ್‌.ಅನಂತಮೂರ್ತಿ- ಸಮಗ್ರ ಸಾಹಿತ್ಯ (1994), ಗಿರೀಶ್‌ ಕಾರ್ನಾಡ್‌- ಸಮಗ್ರ ಸಾಹಿತ್ಯ (1998), ಡಾ.ಚಂದ್ರಶೇಖರ್‌ ಕಂಬಾರ- ಸಮಗ್ರ ಸಾಹಿತ್ಯ (2010)

Follow Us:
Download App:
  • android
  • ios