ಸ್ಪೆಕ್ಟ್ರಂ ಹರಾಜು: ಜಿಯೋದಿಂದ ಅತ್ಯಧಿಕ 57122 ಕೋಟಿ ರೂ. ಸ್ಪೆಕ್ಟ್ರಂ ಖರೀದಿ!
ಕಳೆದ ಐದು ವರ್ಷದಲ್ಲಿ ಮೊದಲ ಬಾರಿ ನಡೆದ ದೂರವಾಣಿ ತರಂಗಾಂತರ (ಸ್ಪೆಕ್ಟ್ರಂ) ಹರಾಜು| ಜಿಯೋದಿಂದ ಅತ್ಯಧಿಕ .57122 ಕೋಟಿ ಸ್ಪೆಕ್ಟ್ರಂ ಖರೀದಿ
ನವದೆಹಲಿ(ಮಾ.03): ಕಳೆದ ಐದು ವರ್ಷದಲ್ಲಿ ಮೊದಲ ಬಾರಿ ನಡೆದ ದೂರವಾಣಿ ತರಂಗಾಂತರ (ಸ್ಪೆಕ್ಟ್ರಂ) ಹರಾಜು 2 ದಿನಗಳ ಪ್ರಕ್ರಿಯೆ ಮಂಗಳವಾರ ಮುಕ್ತಾಯಗೊಂಡಿದ್ದು, ಸರ್ಕಾರವು 77,814.80 ಕೋಟಿ ರು. ಮೌಲ್ಯದ ಸ್ಪೆಕ್ಟ್ರಂ ಹರಾಜು ಹಾಕಿದೆ.
ಈ ಪೈಕಿ ಮುಕೇಶ್ ಅಂಬಾನಿ ಅವರ ರಿಲಯನ್ಸ್ ಜಿಯೋ ಅತಿ ಹೆಚ್ಚು ಎಂದರೆ 57,122 ಕೋಟಿ ರು. ಮೌಲ್ಯದ ತರಂಗಾಂತರಗಳನ್ನು ಖರೀದಿಸಿದೆ. ನಂತರದ ಸ್ಥಾನವನ್ನು ವೊಡಾಫೋನ್-ಐಡಿಯಾ ಪಡೆದಿದ್ದು, 1,993.40 ರು. ಮೊತ್ತದ ಸ್ಪೆಕ್ಟ್ರಂ ಖರೀದಿ ಮಾಡಿದೆ. ಒಟ್ಟಾರೆ 2,250 ಮೆಗಾ ಹಟ್‌್ರ್ಜ ತರಂಗಾಂತರ ಹರಾಜು ಹಾಕಲು ನಿರ್ಧರಿಸಲಾಗಿತ್ತು. ಇವುಗಳ ಮೌಲ್ಯ 4 ಲಕ್ಷ ಕೋಟಿ ರು. ಆಗಿತ್ತು.
900, 1800, 2100 ಹಾಗೂ 2300 ಮೆಗಾ ಹಟ್‌್ರ್ಜ ಬ್ಯಾಂಡ್ ಖರೀದಿಗೆ ಕಂಪನಿಗಳು ಆಸಕ್ತಿ ತೋರಿದವು. ಆದರೆ 700 ಹಾಗೂ 2500 ಮೆಗಾ ಹಟ್‌್ರ್ಜ ತರಂಗಾಂತರ ಖರೀದಿಗೆ ಯಾರೂ ಮುಂದೆ ಬರಲಿಲ್ಲ.