ಕಾರ್ಯಕ್ರಮ ಒಂದರಲ್ಲಿ ಅಮಿತ್ ಶಾ, ಇಂಗ್ಲೀಷ್ ಮಾತನಾಡುವವರಿಗೆ ನಾಚಿಕೆ ಪಡೋ ದಿನ ದೂರವಿಲ್ಲ ಅನ್ನೋ ಹೇಳಿಕೆ ಇದೀಗ ಭಾರಿ ಚರ್ಚೆಯಾಗುತ್ತಿದೆ. ಇದರ ನಡುವೆ ಅಮಿತ್ ಶಾ ಇದೇ ಮಾತನ್ನು ಮುಂದಿಟ್ಟು ಅಮಿತ್ ಶಾ ಪುತ್ರ ಜಯ್ ಶಾರನ್ನು ಟ್ರೋಲ್ ಮಾಡಲಾಗುತ್ತಿದೆ. ಅಷ್ಟಕ್ಕೂ ಜಯ್ ಶಾ ಟಾರ್ಗೆಟ್ ಆಗಿದ್ದು ಹೇಗೆ?
ನವದೆಹಲಿ(ಜೂ.20) ಭಾರತದ ಹಲವು ರಾಜ್ಯಗಳಲ್ಲಿ ಭಾಷಾ ಕುರಿತ ವಾದ ವಿವಾದಗಳು ನಡೆಯುತ್ತಿದೆ. ಹಿಂದಿ ಹೇರಿಕೆಯಾಗುತ್ತಿದೆ ಅನ್ನೋ ಮಾತು ಬಹುತೇಕ ಮಹಾರಾಷ್ಟ್ರ ಸೇರಿದಂತೆ ಇತ್ತ ದಕ್ಷಿಣ ರಾಜ್ಯಗಳು ಹೋರಾಟ ಮಾಡುತ್ತಲೇ ಇದೆ. ಇದರ ನಡುವೆ ಕಾರ್ಯಕ್ರಮ ಒಂದರಲ್ಲಿ ಅಮಿತ್ ಶಾ ಹೇಳಿಕೆಗಳು ಭಾರಿ ಸಂಚಲನ ಸೃಷ್ಟಿಸಿದೆ. ಭಾರತೀಯ ಭಾಷೆಗಳ ಸಮೃದ್ಧಿ, ಅಭಿಮಾನ, ಬಳಕೆ ವ್ಯಾಪಕಗೊಳಿಸುವ ಯೋಜನೆಗಳಿಂದ ಭಾರತದಲ್ಲಿ ಮುಂದಿನ ದಿನಗಳಲ್ಲಿ ಇಂಗ್ಲೀಷ್ ಮಾತನಾಡುವವರು ನಾಚಿಕೆ ಪಡುವ ದಿನ ದೂರವಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ. ಆದರೆ ಈ ಹೇಳಿಕೆಯನ್ನು ಮುಂದಿಟ್ಟುಕೊಂಡು ಇದೀಗ ಹಲವರು ಅಮಿತ್ ಶಾ ಪುತ್ರ ಜಯ್ ಶಾರನ್ನು ಫುಲ್ ಟ್ರೋಲ್ ಮಾಡಲಾಗುತ್ತಿದೆ.
ಅಪ್ಪನ ಹೇಳಿಕೆ, ಮಗ ಫುಲ್ ಟ್ರೋಲ್
ಅಮಿತ್ ಶಾ ಹೇಳಿಕೆಯಿಂದ ಮಗ ಜಯ್ ಶಾ ಟ್ರೋಲ್ ಆಗಿದ್ದಾರೆ. ಕಾರಣ ಜಯ್ ಶಾ ಇಂಗ್ಲೀಷ್. ಈ ಹಿಂದೆ ಹಲವು ವೇದಿಕೆಗಳಲ್ಲಿ ಜಯ್ ಶಾ ಇಂಗ್ಲೀಷ್‌ನಲ್ಲಿ ಮಾತನಾಡಿದ್ದಾರೆ. ಪ್ರಮುಖವಾಗಿ ಐಸಿಸಿ ಚೇರ್ಮೆನ್ ಜವಾಬ್ದಾರಿ ವಹಿಸಿಕೊಂಡ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ವೇದಿಕೆಗಳಲ್ಲಿ ಇಂಗ್ಲೀಷ್‌ನಲ್ಲಿ ಮಾತನಾಡಿದ್ದಾರೆ. ಈ ವೇಳೆ ಹಲವು ಬಾರಿ ನಗೆಪಾಟಲೀಗೀಡಾಗಿದ್ದಾರೆ. ಜಯ್ ಶಾ ಇಂಗ್ಲೀಷ್ ಕೌಶಲ್ಯ, ಮಾತನಾಡುವ ಶೈಲಿ ಹಲವು ಬಾರಿ ಟ್ರೋಲ್ ಆಗಿದೆ. ಇದೀಗ ಅಮಿತ್ ಶಾ ಹೇಳಿದ ಇಂಗ್ಲೀಷ್ ಮಾತನಾಡುವವರ ನಾಚಿಕೆ ಪಡುವ ದಿನ ದೂರವಿಲ್ಲ ಅನ್ನೋ ಮಾತು, ಪುತ್ರನ ಉದ್ದೇಶಿಸಿ ಹೇಳಿದ್ದಾರೆ ಎಂದು ಹಲವರು ಟ್ರೋಲ್ ಮಾಡಿದ್ದಾರೆ. ಜಯ್ ಶಾ ರೀತಿ ಇಂಗ್ಲೀಷ್ ಮಾತನಾಡಿದರೆ ನಾಚಿಕೆ ಅಲ್ಲ ಮುಖಮುಚ್ಚಕೊಂಡು ಓಡಾಡುವ ದಿನ ದೂರವಿರಲ್ಲ ಎಂದು ಹಲವರು ಟ್ರೋಲ್ ಮಾಡಿದ್ದಾರೆ. ಪುತ್ರನ ಇಂಗ್ಲೀಷ್ ಸಹಿಸಲು ಸಾಧ್ಯವಾಗದೆ ತಂದೆ ಅಮಿತ್ ಶಾ ಈ ಹೇಳಿಕೆ ನೀಡಿದ್ದಾರೆ ಎಂದು ಕಮೆಂಟ್ ಮಾಡಿದ್ದರೆ.
ಅಮಿತ್ ಶಾ ಈ ಹೇಳಿಕೆ ನೀಡಿದ್ದು ಯಾಕೆ?
ಮಾಜಿ IAS ಅಧಿಕಾರಿ ಆಶುತೋಷ್ ಅಗ್ನಿಹೋತ್ರಿ ಅವರ 'ಮೈ ಬೂಂದ್ ಸ್ವಯಂ, ಖುದ್ ಸಾಗರ್ ಹೂಂ' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅಮಿತ್ ಶಾ, ಭಾರತದ ಭಾಷಾ ಪರಂಪರೆಯನ್ನು ಮರಳಿ ಪಡೆಯುವ ಮತ್ತು ಸ್ಥಳೀಯ ಭಾಷೆಗಳಲ್ಲಿ ಹೆಮ್ಮೆಯಿಂದ ಜಗತ್ತಿಗೆ ನಾಯಕತ್ವ ವಹಿಸುವ ಸಮಯ ಬಂದಿದೆ ಎಂದಿದ್ದಾರೆ. ಈ ದೇಶದಲ್ಲಿ ಇಂಗ್ಲಿಷ್ ಮಾತನಾಡುವವರಿಗೆ ಶೀಘ್ರದಲ್ಲೇ ನಾಚಿಕೆಯಾಗುತ್ತದೆ - ಅಂತಹ ಸಮಾಜದ ಸೃಷ್ಟಿ ದೂರವಿಲ್ಲ. ಭಾಷೆಯನ್ನು ಬೆಳೆಸುವ ನಿಟ್ಟಿನಲ್ಲಿ ಭಾರತದ ಆಯಾ ಸಮಾಜ ವಿಶೇಷ ಆಸಕ್ತಿ ವಹಿಸುತ್ತಿದೆ ಎಂದಿದ್ದಾರೆ.
ಭಾರತವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಇಲ್ಲಿನ ಭಾಷೆ ಅಗತ್ಯ
ನಮ್ಮ ದೇಶ, ನಮ್ಮ ಸಂಸ್ಕೃತಿ, ನಮ್ಮ ಇತಿಹಾಸ ಮತ್ತು ನಮ್ಮ ಧರ್ಮವನ್ನು ಅರ್ಥಮಾಡಿಕೊಳ್ಳಲು ಯಾವುದೇ ವಿದೇಶಿ ಭಾಷೆ ಸಾಕಾಗುವುದಿಲ್ಲ. ಸಂಪೂರ್ಣ ಭಾರತದ ಕಲ್ಪನೆಯನ್ನು ಅರ್ಧಂಬರ್ಧ ವಿದೇಶಿ ಭಾಷೆಗಳ ಮೂಲಕ ಊಹಿಸಲು ಸಾಧ್ಯವಿಲ್ಲ. ಈ ಹೋರಾಟ ಎಷ್ಟು ಕಷ್ಟಕರ ಎಂದು ನನಗೆ ಸಂಪೂರ್ಣವಾಗಿ ತಿಳಿದಿದೆ, ಆದರೆ ಭಾರತೀಯ ಸಮಾಜ ಅದನ್ನು ಗೆಲ್ಲುತ್ತದೆ ಎಂಬ ವಿಶ್ವಾಸವೂ ನನಗಿದೆ. ಮತ್ತೊಮ್ಮೆ, ಸ್ವಾಭಿಮಾನದಿಂದ, ನಾವು ನಮ್ಮ ದೇಶವನ್ನು ನಮ್ಮದೇ ಭಾಷೆಗಳಲ್ಲಿ ನಡೆಸುತ್ತೇವೆ ಮತ್ತು ಜಗತ್ತಿಗೂ ನಾಯಕತ್ವ ವಹಿಸುತ್ತೇವೆ ಎಂದು ಅಮಿತ್ ಶಾ ಹೇಳಿದ್ದಾರೆ.
ಮೋದಿ ರೂಪಿಸಿದ ಪಂಚಪ್ರಾಣ
ಮೋದಿಜಿ ಅಮೃತ ಕಾಲಕ್ಕಾಗಿ 'ಪಂಚ ಪ್ರಾಣ'ಗಳ (ಐದು ಪ್ರತಿಜ್ಞೆಗಳು) ಅಡಿಪಾಯ ಹಾಕಿದ್ದಾರೆ. ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ಸಾಧಿಸುವುದು, ಗುಲಾಮಗಿರಿಯ ಪ್ರತಿಯೊಂದು ಕುರುಹನ್ನು ತೊಡೆದುಹಾಕುವುದು, ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಡುವುದು, ಏಕತೆ ಮತ್ತು ಒಗ್ಗಟ್ಟಿಗೆ ಬದ್ಧರಾಗಿರುವುದು ಮತ್ತು ಪ್ರತಿಯೊಬ್ಬ ನಾಗರಿಕರಲ್ಲಿ ಕರ್ತವ್ಯ ಪ್ರಜ್ಞೆಯನ್ನು ಹುಟ್ಟುಹಾಕುವುದು - ಈ ಐದು ಪ್ರತಿಜ್ಞೆಗಳು 130 ಕೋಟಿ ಜನರ ಸಂಕಲ್ಪವಾಗಿದೆ. ಅದಕ್ಕಾಗಿಯೇ 2047 ರ ವೇಳೆಗೆ ನಾವು ಉತ್ತುಂಗದಲ್ಲಿರುತ್ತೇವೆ ಮತ್ತು ನಮ್ಮ ಭಾಷೆಗಳು ಈ ಪ್ರಯಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ” ಎಂದು ಅಮಿತ್ ಶಾ ಹೇಳಿದರು.
