Asianet Suvarna News Asianet Suvarna News

ದುರ್ಗಾ ಪೂಜೆ ವೇಳೆ ಭಕ್ತರ ಮೇಲೆ ಹರಿದ ಕಾರು!

* ದುರ್ಗಾ ಉತ್ಸವದಲ್ಲಿದ್ದ ಭಕ್ತರ ಮೇಲೆ ಹರಿದ ವಾಹನ

* ಛತ್ತೀಸ್‌ಗಢದಲ್ಲೂ ಲಖೀಂಪುರ ಮಾದರಿ ಘಟನೆ

* ದುರ್ಘಟನೆಯಲ್ಲಿ ಓರ್ವ ಸಾವು, 20 ಮಂದಿಗೆ ಗಾಯ

Jashpur Horrifying Video Shows Car Mowing Down Devotees in Chhattisgarh 1 Dead 17 Injured pod
Author
Bangalore, First Published Oct 16, 2021, 9:39 AM IST
  • Facebook
  • Twitter
  • Whatsapp

ನವದೆಹಲಿ(ಅ.16): ಉತ್ತರಪ್ರದೇಶದ(Uttar Pradesh) ಲಖೀಂಪುರ ಖೇರಿಯಲ್ಲಿ(Lakhimpur Kheri) ಕಾರು ಹರಿದು ನಾಲ್ವರು ರೈತರು ಮೃತಪಟ್ಟಘಟನೆ ಮಾಸುವ ಮುನ್ನವೇ ಛತ್ತೀಸ್‌ಗಢದಲ್ಲಿ(Chhattisgarh) ಮತ್ತೊಂದು ದುರಂತ ನಡೆದಿದೆ. ವಿಜಯದಶಮಿ ಹಿನ್ನೆಲೆ ದುರ್ಗಾ ಉತ್ಸವ ಮಾಡುತ್ತಿದ್ದ ಭಕ್ತರ ಮೇಲೆ ಕಾರು ಹರಿದು ಓರ್ವ ಮೃತಪಟ್ಟು, 20 ಮಂದಿ ಗಾಯಗೊಂಡ ಘಟನೆ ನಡೆದಿದೆ.

ಜಸ್ಪುರ(jaspur) ಜಿಲ್ಲೆಯ ಸುಖ್ರಾಪರ್‌ ಎಂಬಲ್ಲಿ ಈ ಘಟನೆ ನಡೆದಿದ್ದು, ಮೃತ ಯುವಕ 21 ವರ್ಷದ ಗೌರವ್‌ ಅಗರ್ವಾಲ್‌ ಎಂದು ತಿಳಿದುಬಂದಿದೆ. ಭಕ್ತರು ದುರ್ಗಾ ಮಾತೆಯ ಮೂರ್ತಿ ಹೊತ್ತುಕೊಂಡು ಮೆರವಣಿಗೆ ಹೊರಟಿದ್ದ ವೇಳೆಯೇ ಮಧ್ಯಪ್ರದೇಶ(Madhya Pradesh) ನೋಂದಣಿಯ ವಾಹನವೊಂದು ವೇಗವಾಗಿ ಬಂದು ಹರಿದಿದೆ. ಘಟನೆಯಿಂದ ರೊಚ್ಚಿಗೆದ್ದ ಇನ್ನುಳಿದ ಭಕ್ತರು ಕಾರನ್ನು ರಸ್ತೆಬದಿಗೆ ಉರುಳಿಸಿ ಬೆಂಕಿಹಚ್ಚಿದ್ದಾರೆ.

ಕಾರ್‌ನಲ್ಲಿದ್ದ 21 ವರ್ಷದ ಬಬುಲ್‌ ವಿಶ್ವಕರ್ಮ ಮತ್ತು 26 ವರ್ಷದ ಶಿಶುಪಾಲ್‌ ಸಾಹು ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇಬ್ಬರೂ ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯವರಾಗಿದ್ದಾರೆ. ಈ ಹೃದಯವಿದ್ರಾವಕ ಘಟನೆಗೆ ಸಿಎಂ ಭೂಪೇಶ್‌ ಬಘೇಲ್‌ ಸಂತಾಪ ವ್ಯಕ್ತಪಡಿಸಿದ್ರೆ, ಮಾಜಿ ಸಿಎಂ ರಮಣ್‌ ಸಿಂಗ್‌ ಮೃತ ಯುವಕನ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.

ಲಖೀಂಪುರದಲ್ಲಿ ಏನಾಗಿತ್ತು?

ಡಿಸಿಎಂ ಕೇಶವ್‌ ಪ್ರಸಾದ್‌ ಮೌರ್ಯ ಭಾನುವಾರ ಲಖೀಂಪುರ ಖೇರಿ(Lakhimpur Kheri) ಜಿಲ್ಲೆಯ ಬನ್‌ಬೀರ್‌ಪುರ ಗ್ರಾಮಕ್ಕೆ ಭೇಟಿ ನೀಡಲು ಉದ್ದೇಶಿಸಿದ್ದರು. ಈ ಗ್ರಾಮವು, ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್‌ಕುಮಾರ ಮಿಶ್ರಾ ಅವರ ಸ್ವಗ್ರಾಮ ಕೂಡಾ ಹೌದು. ಆದರೆ ಕೃಷಿ ಕಾಯ್ದೆ ವಿರೋಧಿಸುತ್ತಿರುವ ರೈತರ ಗುಂಪೊಂದು ಮೌರ್ಯ ಅವರ ಭೇಟಿ ವಿರೋಧಿ ಪ್ರತಿಭಟನೆ ನಡೆಸುತ್ತಿತ್ತು. ಈ ಪ್ರತಿಭಟನೆ ವೇಳೆಯೇ ಬಿಜೆಪಿ ನಾಯಕರಿಗೆ ಸೇರಿದ್ದು ಎನ್ನಲಾದ ಎರಡು ವಾಹನಗಳು ರೈತರ ಮೇಲೆ ಹಾದು ಹೋಗಿದ್ದು, ಘಟನೆಯಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ರೈತರು ಆರೋಪಿಸಿದ್ದರು. ಜೊತೆಗೆ ಈ ಪೈಕಿ ಒಂದು ವಾಹನದಲ್ಲಿ ಕೇಂದ್ರ ಸಚಿವ ಮಿಶ್ರಾ ಅವರ ಪುತ್ರ ಕೂಡಾ ಇದ್ದರು ಎಂದು ದೂರಿದ್ದರು. ಈ ಪ್ರಕರಣ ಸಂಬಂಧ ಸಚಿವರ ಪುತ್ರನನ್ನು ಬಂಧಿಸಲಾಗಿದೆ. 

Follow Us:
Download App:
  • android
  • ios