ಸಂಭಾಲ್ ಹಿಂಸಾಚಾರ: ಸ್ಫೋಟಕ ಹೇಳಿಕೆ ನೀಡಿದ ಜಮಿಯತ್ ಉಲೇಮಾ-ಎ-ಹಿಂದ್!
ಸಂಭಾಲ್ ಹಿಂಸಾಚಾರವನ್ನು ಸರಿಯಾಗಿ ತನಿಖೆ ಮಾಡಿದರೆ, ಅನೇಕ ಪೊಲೀಸ್ ಅಧಿಕಾರಿಗಳೇ ಜೈಲಿಗೆ ಹೋಗುತ್ತಾರೆ' ಎಂಬ ಜಮೀಯತ್ ಉಲೇಮಾ-ಎ-ಹಿಂದ್ ಉಪಾಧ್ಯಕ್ಷ ಸಲೀಂ ಹೇಳಿಕೆ ಇದೀಗ ಮತ್ತೆ ಚರ್ಚೆಗೆ ಗ್ರಾಸವಾಗಿದೆ.
ದೆಹಲಿ:'ಸಂಭಾಲ್ ಹಿಂಸಾಚಾರವನ್ನು ಸರಿಯಾಗಿ ತನಿಖೆ ಮಾಡಿದರೆ, ಅನೇಕ ಪೊಲೀಸ್ ಅಧಿಕಾರಿಗಳೇ ಜೈಲಿಗೆ ಹೋಗುತ್ತಾರೆ' ಎಂಬ ಜಮೀಯತ್ ಉಲೇಮಾ-ಎ-ಹಿಂದ್ ಉಪಾಧ್ಯಕ್ಷ ಸಲೀಂ ಹೇಳಿಕೆ ಇದೀಗ ಮತ್ತೆ ಚರ್ಚೆಗೆ ಗ್ರಾಸವಾಗಿದೆ.
1991ರ ಆರಾಧನಾ ಸ್ಥಳಗಳ ಕಾಯ್ದೆ ಮತ್ತು ಸಂಭಾಲ್ ಹಿಂಸಾಚಾರದ ಕುರಿತು ಜಮಾತೆ ಇಸ್ಲಾಮಿ ಹಿಂದ್ ದೊಡ್ಡ ಹೇಳಿಕೆ ನೀಡಿದೆ. ಸಂಭಾಲ್ ಹಿಂಸಾಚಾರ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಲೀಂ ಸಂಭಾಲ್ ಹಿಂಸಾಚಾರಕ್ಕೆ ಕಾರಣ ಯಾರು? ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಸರಿಯಾಗಿ ತನಿಖೆ ನಡೆಸಿದ್ದೇ ಆದಲ್ಲಿ ಹೆಚ್ಚಿನ ಪೊಲೀಸ್ ಅಧಿಕಾರಿಗಳೇ ಜೈಲಿಗೆ ಹೋಗುತ್ತಾರೆ. ನ್ಯಾಯಾಲಯದ ತಪ್ಪು ನಿರ್ಧಾರದಿಂದ ದೇಶಾದ್ಯಂತ ಕೋಮು ಐಕ್ಯತೆಯು ಸಮಸ್ಯೆಗಳನ್ನು ಎದುರಿಸುತ್ತಿದೆ. ಅದರಲ್ಲೂ ಮುಸ್ಲಿಂ ಸಮುದಾಯ ಸಮಸ್ಯೆ ಎದುರಿಸುತ್ತಿದೆ. ಸಂಸತ್ತು ರೂಪಿಸಿದ ಕಾಯಿದೆಯನ್ನು ನ್ಯಾಯಾಲಯಗಳು ಬದಲಾಯಿಸಬಾರದು ಎಂಬುದನ್ನು ನ್ಯಾಯಾಲಯಗಳು, ಸರ್ಕಾರ ಮತ್ತು ಸಾರ್ವಜನಿಕರು ಅರ್ಥಮಾಡಿಕೊಳ್ಳಬೇಕು. ಈ ಕಾಯ್ದೆಯ ವಿರುದ್ಧ ಯಾರೇ ಬಂದರೂ ದಂಡ ವಿಧಿಸುವಂತೆ ದೇಶದ ನ್ಯಾಯಾಲಯಗಳು, ಸರ್ಕಾರ ಮತ್ತು ಸಂಸತ್ತು ನೋಡಬೇಕು. ಎಂದು ಜಮಾತೆ ಇಸ್ಲಾಮಿ ಹಿಂದ್ ಹೇಳಿದೆ.
ಸಂಭಲ್ ದಂಗೆಕೋರರಿಂದಲೇ ಆಸ್ತಿ ಹಾನಿಯ ಮೊತ್ತ ವಸೂಲಿ!
ಜಮಾತೆ ಇಸ್ಲಾಮಿ ಹಿಂದ್‌ನ ಉಪಾಧ್ಯಕ್ಷ ಮಲಿಕ್ ಮೊಹ್ತಾಶಿಮ್ ಖಾನ್ ಮಾತನಾಡಿ, 1991ರಲ್ಲಿ ದೇಶದ ಸಂಸತ್ತು 'ಪೂಜಾ ಸ್ಥಳಗಳ ಕಾಯ್ದೆ' ಎಂಬ ಕಾನೂನನ್ನು ಮಾಡಿದ್ದು, ಅದರಲ್ಲಿ ಬಾಬರಿ ಮಸೀದಿಗೆ ಅಪವಾದ ಮಾಡಲಾಗಿದೆ. ಬಾಬರಿ ಮಸೀದಿಯ ತೀರ್ಪನ್ನು ಕಾನೂನು ಮತ್ತು ನ್ಯಾಯದ ಅಡಿಯಲ್ಲಿ ನೀಡಲಾಗಿಲ್ಲ. ಆ ಸಮಯದಲ್ಲಿ ಈ ಕಾಯ್ದೆಯನ್ನು ಪ್ರತಿ ಪರಿಸ್ಥಿತಿಯಲ್ಲಿಯೂ ಜಾರಿಗೆ ತರಲಾಗುವುದು ಎಂದು ಹೇಳಲಾಗಿದ್ದರೂ, ಆದರೆ ಈಗ ದೇಶದಲ್ಲಿ ಪರಿಸ್ಥಿತಿ ಉದ್ಭವಿಸಿದೆ. ಇದೀಗ ನ್ಯಾಯಾಲಯದ ತಪ್ಪು ತೀರ್ಪಿನಿಂದ ದೇಶಾದ್ಯಂತ ಕೋಮು ಐಕ್ಯತೆ ಸಮಸ್ಯೆ ಎದುರಿಸುತ್ತಿದೆ. ಇದು ಧ್ರುವೀಕರಣಕ್ಕೆ ಕಾರಣವಾಗಿದೆ ಎಂದಿದ್ದಾರೆ.
ಸಂಭಾಲ್ ಹಿಂಸಾಚಾರವನ್ನು ಉಲ್ಲೇಖಿಸಿದ ಖಾನ್, ಸಂಭಾಲ್ ಹಿಂಸಾಚಾರದಲ್ಲಿ ಅಮಾಯಕ ಮುಸ್ಲಿಂ ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ಸಂಭಾಲ್‌ನಲ್ಲಿ ನಡೆದ ಪೊಲೀಸ್ ಗುಂಡಿನ ದಾಳಿಯಲ್ಲಿ ಅಮಾಯಕ ಮುಸ್ಲಿಂ ಯುವಕರು ಪ್ರಾಣ ಕಳೆದುಕೊಂಡಿರುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ. ಪೊಲೀಸರು ಶಾಂತಿ ಕಾಪಾಡಲು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಮತ್ತು ಅಶಾಂತಿಯನ್ನು ಉತ್ತೇಜಿಸಬಾರದು. ಈ ದುರಂತ ಘಟನೆಯು ರಾಜ್ಯದ ದಬ್ಬಾಳಿಕೆ, ಪೊಲೀಸ್ ನಿರಂಕುಶತೆ ಮತ್ತು ತಾರತಮ್ಯವನ್ನು ಪ್ರತಿಬಿಂಬಿಸುತ್ತದೆ. ಇಂದು ದೇಶದ ಸಣ್ಣ ನ್ಯಾಯಾಲಯಗಳು ದೊಡ್ಡ ನ್ಯಾಯಾಲಯಗಳ ವಿರುದ್ಧ ಕೆಲಸ ಮಾಡುತ್ತಿವೆ ಎಂದು ದೂರಿದ್ದಾರೆ.
ಚಳಿಗಾಲದ ಅಧಿವೇಶನದಲ್ಲಿ ವಕ್ಫ್ ಮಸೂದೆ ಮಂಡನೆ ಅನುಮಾನ?
ವಿರೋಧ ಪಕ್ಷದ ನಾಯಕರಿಗೆ ತಡೆ ಯಾಕೆ?
ಹಿಂಸಾಚಾರ ನಡೆ ಸ್ಥಳಕ್ಕೆ ವಿರೋಧ ಪಕ್ಷದ ನಾಯಕರು ಯಾಕೆ ಹೋಗಬಾರದು. ರಾಹುಲ್ ಗಾಂಧಿಯವರನ್ನು ಹೋಗದಂತೆ ಯಾಕೆ ತಡೆಯಲಾಗುತ್ತಿದೆ? ಅಲ್ಲಿಗೆ ಹೋಗಲು ಬಯಸುವ ಯಾವುದೇ ರಾಜಕಾರಣಿಗೆ ಹೋಗಲು ಬಿಡುತ್ತಿಲ್ಲ. ವಿರೋಧ ಪಕ್ಷದ ನಾಯಕರು, ಬೇರೆ ಪಕ್ಷಗಳ ನಾಯಕರೂ ಅಲ್ಲಿಗೆ ಹೋಗಬೇಕೆಂದಿದ್ದರೂ ಅವರನ್ನು ತಡೆಯಲಾಗುತ್ತಿದೆ ಎಂದರೆ ಅಲ್ಲಿ ಆಡಳಿತ ಮರೆಮಾಚಲು ಯತ್ನಿಸುತ್ತಿರುವುದು ಏನು? ಮುಸ್ಲಿಮರನ್ನೂ ಬಂಧಿಸಲಾಗುತ್ತಿದೆ. ದೇಶವನ್ನು ಕತ್ತಲೆಯಲ್ಲಿಟ್ಟು ತಪ್ಪು ದಾರಿಗೆ ಕೊಂಡೊಯ್ಯಲಾಗುತ್ತಿದೆ ಎಂದು ಆರೋಪಿಸಿದ್ದಾರೆ.