* ಜೈಪುರದ 28ರ ಯುವಕ ಸಾವು* ಕಿವಿಯಲ್ಲೇ ಬ್ಲೂಟೂತ್ ಸ್ಫೋಟ* ಬ್ಲೂಟೂತ್ ಹೆಡ್‌ಫೋನ್‌ನ್ನು ಚಾಜ್‌ರ್‍ಗಿಟ್ಟು ಬಳಕೆ ಮಾಡುತ್ತಿದ್ದಾಗ ಅದು ಸ್ಫೋಟ
ಜೈಪುರ(ಆ.08): ಬ್ಲೂಟೂತ್ ಹೆಡ್‌ಫೋನ್ ಸ್ಫೋಟಗೊಂಡ ಪರಿಣಾಮ 28 ವರ್ಷದ ಯುವಕ ಮೃತಪಟ್ಟ ಘಟನೆ ರಾಜಸ್ಥಾನದ ಉದಯಪುರದಲ್ಲಿ ನಡೆದಿದೆ.
ರಾಕೇಶ್‌ಕುಮಾರ್ ಎಂಬಾತ ಮನೆಯಲ್ಲಿ ಸ್ಫರ್ಧಾತ್ಮಕ ಪರೀಕ್ಷಗೆ ತಯಾರಿ ನಡೆಸುತ್ತಿದ್ದಾಗ, ಬ್ಲೂಟೂತ್ ಹೆಡ್‌ಫೋನ್‌ನ್ನು ಚಾಜ್‌ರ್‍ಗಿಟ್ಟು ಬಳಕೆ ಮಾಡುತ್ತಿದ್ದಾಗ ಅದು ಸ್ಫೋಟಗೊಂಡಿದೆ. ಸ್ಫೋಟದಿಂದಾಗಿ ಪ್ರಜ್ಞೆ ತಪ್ಪಿದ ಆತನನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ರಾಕೇಶ್ ಸಾವಿಗೀಡಾಗಿದ್ದಾನೆ.
ಸ್ಫೋಟದಿಂದಾಗಿ ಆತನ ಕಿವಿಗಳಿಗೆ ಗಂಭೀರ ಗಾಯವಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ರಾಕೇಶ್ ಬಹುಶಃ ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ.
