ಜೈಪುರ (ಆ. 28): ಕೊರೋನಾ ವೈರಸ್‌ನಿಂದಾಗಿ ಅನೇಕ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಆದರೆ, ಭಿಕ್ಷೆ ಬೇಡಿ ಜೀವನ ಸಾಗಿಸುವ ಸ್ಥಿತಿ ಬಂದರೆ ಗತಿಯೇನು? ಹೌದು, ರಾಜಸ್ಥಾನದ ಜೈಪುರದಲ್ಲಿ ಇಬ್ಬರು ಸ್ತಾತಕೋತ್ತರ ಪದವೀಧರರು ಮತ್ತು ಮೂವರು ಪದವೀಧರರು ಜೈಪುರದ ಬೀದಿಗಳಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದಾರೆ. 

ಇತ್ತೀಚೆಗೆ ನಗರದಲ್ಲಿ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯೊಂದರ ವೇಳೆ ಪತ್ತೆ ಆದ 1,162 ಭಿಕ್ಷುಕರ ಪೈಕಿ 193 ಮಂದಿ ಓದು​-ಬರಹವನ್ನು ಕಲಿತವರು. ಅದರಲ್ಲೂ ಐದು ಮಂದಿ ಪದವಿಯನ್ನು ಪಡೆದವರಾಗಿದ್ದಾರೆ ಎಂಬ ಸಂಗತಿ ಬೆಳಕಿಗೆ ಬಂದಿದೆ. ನಗರದಲ್ಲಿ ಯಾವುದೇ ಕೆಲಸ ಸಿಗದೇ ಇದ್ದ ಕಾರಣ ಅನಿವಾರ್ಯವಾಗಿ ಭಿಕ್ಷೆ ಬೇಡಿ ಜೀವನ ಸಾಗಿಸುವ ಸ್ಥಿತಿ ಎದುರಾಗಿದೆ ಎಂದು ಈ ಯುವಕರು ಅಳಲು ತೋಡಿಕೊಂಡಿದ್ದಾರೆ.

ಜೈಪುರ ಸಿಟಿಯನ್ನು ಸಂಪೂರ್ಣವಾಗಿ ಭಿಕ್ಷುಕರಿಂದ ಮುಕ್ತಗೊಳಿಸಲು, ಅವರಿಗೆ ಅಗತ್ಯವಿರುವ ಸ್ಕಿಲ್‌ಗಳನ್ನು ನೀಡಿ ಅವರಿಗೆ ಉದ್ಯೋಗ ದೊರೆಯುವಂತೆ ಮಾಡುವ ಉದ್ದೇಶದಿಂದ ಸರ್ವೆ ಮಾಡಲಾಯಿತು. 'ನಾನು 25 ವರ್ಷದ ಹಿಂದೆ ಡಿಗ್ರಿ ತೆಗೆದುಕೊಂಡಿದ್ದೇನೆ. ಕೆಲಸಕ್ಕಾಗಿ ಜೈಪುರಕ್ಕೆ ಬಂದೆ. ಎಷ್ಟೋ ದಿನಗಳಾದರೂ ಕೆಲಸ ಸಿಗಲಿಲ್ಲ. ಹೊಟ್ಟೆಗೆ ಅನ್ನವಿಲ್ಲ, ಮಲಗಲು ಜಾಗವಿಲ್ಲ ಎನ್ನುವ ಸ್ಥಿತಿ. ಕೊನೆಗೆ ದಾರಿಯಿಲ್ಲದೇ ಭಿಕ್ಷೆ ಬೇಡಲು ಶುರು ಮಾಡಿದೆ' ಎಂದು ಒಬ್ಬ ವ್ಯಕ್ತಿ ಹೇಳಿದ್ದಾನೆ. 

ಬೆಂಗಳೂರಿನ ಭಿಕ್ಷುಕನ ಬಳಿ ಇರುವ ಕ್ಯಾಶ್‌ ನೋಡಿ ಜನ ದಂಗು!

"