Asianet Suvarna News Asianet Suvarna News

ಜೈಲ್ ಕಾ ಜವಾಬ್ ವೋಟ್‌ ಸೆ,ಕೇಜ್ರಿವಾಲ್ ಅರ್ಜಿ ತಿರಸ್ಕರಿಸಿದ ಬೆನ್ನಲ್ಲೇ ವರಸೆ ಬದಲಿಸಿ ಆಪ್!

ಅರವಿಂದ್ ಕೇಜ್ರಿವಾಲ್ ಬಂಧನ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿ ತಿರಸ್ಕೃತಗೊಂಡಿದೆ. ಕೇಜ್ರಿವಾಲ್ ವಿರುದ್ದದ ಸಾಕ್ಷ್ಯಗಳನ್ನು ಪರಿಗಣಿಸಿ ಇಡಿ ಬಂಧನ ಸರಿ ಎಂದು ಹೈಕೋರ್ಟ್ ಹೇಳಿದೆ. ಇತ್ತ ತೀವ್ರ ಮುಖಭಂಕಕ್ಕೆ ಒಳಗಾಗಿರುವ ಆಪ್, ಇದೀಗ ವರಸೆ ಬದಲಿಸಿದೆ. ಅರವಿಂದ್ ಕೇಜ್ರಿವಾಲ್ ಬಂಧನಕ್ಕೆ ಮತದ ಮೂಲಕ ಉತ್ತರ ನೀಡಿ ಅನ್ನೋ ಅಭಿಯಾನ ಆರಂಭಿಸಲಾಗಿದೆ.
 

Jail Ka Jawab Vote Se AAP Launch new campaign against Arvind Kejriwal Arrest ckm
Author
First Published Apr 9, 2024, 5:35 PM IST

ನವದೆಹಲಿ(ಏ.09) ಅಬಕಾರಿ ನೀತಿ ಹಗರಣದಲ್ಲಿ ದೆಹಲಿಯ ಆಪ್ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಕೇಜ್ರಿವಾಲ್ ಬಂಧನ ಅಸಂವಿಧಾನಿಕ, ಕಾನೂನು ಬಾಹಿರ ಎಂದಿದ್ದ ಆಪ್, ಲೋಕಸಭಾ ಚುನಾವಣೆ ಸಮಯದಲ್ಲೇ ಬಂಧಿಸುವ ಮೂಲಕ ರಾಜಕೀಯ ಷಡ್ಯಂತ್ರ ನಡೆಸಿದ್ದಾರೆ ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಇಡಿ ಬಂಧನ ಎತ್ತಿ ಹಿಡಿದ ಹೈಕೋರ್ಟ್ ಕೇಜ್ರಿವಾಲ್ ಅರ್ಜಿ ತಿರಸ್ಕರಿಸಿದೆ. ಇತ್ತ ಆಮ್ ಆದ್ಮಿ ಪಾರ್ಟಿ ತನ್ನ ವರಸೆ ಬದಲಿಸಿದೆ. ಇಷ್ಟು ದಿನ ಸತ್ಯದ ಹೋರಾಟ, ಕಾನೂನು ಹೋರಾಟ ಎಂದಿದ್ದ ಆಪ್ ಇದೀಗ ಕೇಜ್ರಿವಾಲ್ ಬಂಧನಕ್ಕೆ ಮತದ ಮೂಲಕ ಉತ್ತ ನೀಡಿ ಎಂದು ಜನರಲ್ಲಿ ಮನವಿ ಮಾಡಿದೆ. ಇಷ್ಟೇ ಅಲ್ಲ ಜೈಲ್ ಕಾ ಜವಾಬ್ ವೋಟ್ ಸೆ ಅನ್ನೋ ಅಭಿಯಾನ ಆರಂಭಿಸಿದೆ.

ಸಂಜಯ್ ಸಿಂಗ್‌ಗೆ ಜಾಮೀನು ಸಿಕ್ಕ ಬೆನ್ನಲ್ಲೇ ಕೇಜ್ರಿವಾಲ್ ಕೂಡ ಜಾಮೀನನ ಮೇಲೆ ಬಿಡುಗಡೆಯಾಗಲಿದ್ದಾರೆ ಎಂದು ಆಪ್ ವಿಶ್ವಾಸ ವ್ಯಕ್ತಪಡಿಸಿತ್ತು. ಸತ್ಯಕ್ಕೆ ಯಾವತ್ತು ಜಯ ಎಂದು ಆಪ್ ನಾಯಕರು ಹೇಳಿದ್ದರು. ಆದರೆ ಕೇಜ್ರಿವಾಲ್ ವಿಚಾರದಲ್ಲಿ ಆಪ್ ಲೆಕ್ಕಾಚಾರಗಳು ಉಲ್ಟಾ ಆಗಿದೆ. ಕೇಜ್ರಿವಾಲ್‌ಗೆ ಅತ್ತ ಜಾಮೀನು ಸಿಗಲಿಲ್ಲ, ಇತ್ತ ಇಡಿ ಬಂಧನ ಪ್ರಶ್ನಿಸಿದ್ದ ಅರ್ಜಿಯೂ ತಿರಸ್ಕೃತಗೊಂಡಿದೆ. ಇದೀಗ ಆಪ್ ನಾಯಕ ಸಂದೀಪ್ ಪಾಠಕ್ ಅಭಿಯಾನ ಆರಂಭಿಸಿದ್ದಾರೆ.

Breaking: ಸಿಎಂಗೆ ಸ್ಪೆಷಲ್‌ ಟ್ರೀಟ್‌ಮೆಂಟ್‌ ಸಾಧ್ಯವಿಲ್ಲ, ಕೇಜ್ರಿವಾಲ್‌ ಬಂಧನ ಸರಿ ಇದೆ ಎಂದ ಹೈಕೋರ್ಟ್‌!

ಕೇಜ್ರಿವಾಲ್ ಬಂಧನಕ್ಕೆ ಮತದ ಮೂಲಕ ಉತ್ತರ ನೀಡಿದೆ. ಕೇಜ್ರಿವಾಲ್ ಕೈಗಳನ್ನು ನಿಮ್ಮ ಮತದ ಮೂಲಕ ಬಲಪಡಿಸಿ ಎಂದು ಸಂದೀಪ್ ಪಾಠಕ್ ಹೇಳಿದ್ದಾರೆ. ಇದೇ ವೇಳೆ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ದ ಆಪ್ ನಾಯಕರು ಹರಿಹಾಯ್ದಿದ್ದಾರೆ. ಆಪ್ ಮುಗಿಸಲು ಮಾಡಿದ ಷಡ್ಯಂತ್ರ ಇದು. ಕೇಜ್ರಿವಾಲ್ ಬಂಧಿಸಿ ಆಪ್ ಪಕ್ಷವನ್ನೇ ಮುಗಿಸಲು ಬಿಜೆಪಿ ಹೊರಟಿದೆ. ಇದಕ್ಕೆ ಜನರು ಉತ್ತರ ನೀಡಲಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. 

ಅರವಿಂದ್ ಕೇಜ್ರಿವಾಲ್ ಅವರ ಅಕ್ರಮ ಬಂಧನ ಖಂಡಿಸಿ ದೇಶಾದ್ಯಂತ ಆಪ್  ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದೆ. ಮಹಾರಾಷ್ಟ್ರದ ಮುಂಬೈ, ಪುಣೆ, ಹರ್ಯಾಣ, ಪಂಜಾಬ್‌ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲೂ ಆಪ್‌ ನಾಯಕರು ಮತ್ತು ಕಾರ್ಯಕರ್ತರು ತಮ್ಮ ನಾಯಕನ ಬಂಧನವನ್ನು ವಿರೋಧಿಸಿ ಸಾಮೂಹಿಕ ಉಪವಾಸ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಆಪ್ ನಾಯಕರು ಉಪಾವಸ ಸತ್ಯಾಗ್ರಹ ಮಾಡಿದ್ದರು.

ಕೇಜ್ರಿ ಬಂಧನ ಖಂಡಿಸಿ ಆಪ್‌ ನಾಯಕರ ಉಪವಾಸ: ದೇಶ, ವಿದೇಶಗಳಲ್ಲಿ ನಾಯಕರ ಸಾಮೂಹಿಕ ನಿರಶನ
 

Follow Us:
Download App:
  • android
  • ios