ಕೊಚ್ಚಿ(ಮೇ.25): ಹಲಸಿನ ಕಾಯಿ ತಲೆಯ ಮೇಲೆ ಬಿದ್ದು ಗಾಯಗೊಂಡು ಶಸ್ತ್ರಚಿಕಿತ್ಸೆಗೆಂದು ಆಸ್ಪತ್ರೆ ಸೇರಿದ್ದ ವ್ಯಕ್ತಿಗೆ ಕೊರೋನಾ ಸೋಂಕು ಇರುವುದು ಪರೀಕ್ಷೆಗೊಳಪಡಿಸಿದ ಬಳಿಕ ಗೊತ್ತಾದ ಅಪರೂಪದ ಪ್ರಕರಣವೊಂದು ಕೇರಳದಲ್ಲಿ ನಡೆದಿದೆ. ಆದರೆ ಈ ವ್ಯಕ್ತಿಗೆ ಕೊರೋನಾ ಹೇಗೆ ಬಂತು ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.

ಕೇರಳ ಕಾಸರಗೋಡಿನ ಬೆಲೂರು ಗ್ರಾಮದ ಆಟೋ ಚಾಲಕರೊಬ್ಬರು ಶನಿವಾರ ಹಲಸಿನಕಾಯಿ ಕೀಳಲು ಹೋಗಿ, ಹಲಸಿನಕಾಯಿ ತಲೆಯ ಮೇಲೆ ಬಿದ್ದು ತೀವ್ರಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತರಲಾಯಿತು. ಶಸ್ತ್ರಚಿಕಿತ್ಸೆ ಮಾಡುವುದು ಅನಿವಾರ್ಯವೂ ಆಗಿತ್ತು. ಶಸ್ತ್ರಚಿಕಿತ್ಸೆಗೂ ಮೊದಲು ಈ ವ್ಯಕ್ತಿಯನ್ನು ಕೋವಿಡ್‌ 19 ಟೆಸ್ಟ್‌ಗೆ ಒಳಪಡಿಸಲಾಯಿತು. ಫಲಿತಾಂಶ ಬಂದಾಗ ಅವರಿಗೂ ಕೊರೋನಾ ಇರುವುದು ದೃಢಪಟ್ಟಿದೆ ಎಂದು ಕಣ್ಣೂರಿನ ಪರಿಯಾರಾಮ್‌ ವೆದ್ಯಕೀಯ ಕಾಲೇಜಿನ ವೈದ್ಯ ಡಾ

ಕೆ. ಸುದೀಪ್‌. ಇದೀಗ ಈ ವ್ಯಕ್ತಿಯ ಟ್ರಾವೆಲ್‌ ಹಿಸ್ಟರಿ ನೋಡಿದಾಗ ಇವರು ಇತ್ತೀಚೆಗೆ ಜಿಲ್ಲಾಸ್ಪತ್ರೆಗೆ ವ್ಯಕ್ತಿಯೊಬ್ಬರನ್ನು ಆಟೋದಲ್ಲಿ ಕರೆದುಕೊಂಡು ಹೋಗಿದ್ದು, ಆಗ ಸೋಂಕು ತಗಲಿರಬಹುದೆಂದು ಹೇಳಲಾಗುತ್ತಿದೆ. ಪೊಲೀಸರು ವ್ಯಕ್ತಿಯ ಸೋಂಕಿನ ಮೂಲ ಪತ್ತೆ ಮಾಡುತ್ತಿದ್ದಾರೆ.