Asianet Suvarna News Asianet Suvarna News

ಕನ್ನಡತಿ, IPS ಅಪರ್ಣಾ ಕುಮಾರ್ ನೇತೃತ್ವದಲ್ಲಿ ಉತ್ತರಾಖಂಡ್ ರಕ್ಷಣಾ ಕಾರ್ಯಾಚರಣೆ!

ಕನ್ನಡತಿ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ| ತಪೋವನ ಬಳಿ ಕಾರ್ಯಾಚರಣೆ ಮೇಲುಸ್ತುವಾರಿ ಅಪರ್ಣಾ ಕುಮಾರ್‌

ITBP official DIG Aparna Kumar lead the rescue operations at uttarakhand pod
Author
Bangalore, First Published Feb 10, 2021, 8:03 AM IST

ಉತ್ತರಾಖಂಡ(ಫೆ.10): ದುರ್ಘಟನೆಗೆ ಸಾಕ್ಷಿಯಾದ ತಪೋವನ ಬಳಿಯ ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ಹೊತ್ತಿರುವುದು ಐಟಿಬಿಪಿ ಡಿಐಜಿಯೂ ಆಗಿರುವ ಕನ್ನಡತಿ ಅಪರ್ಣಾ ಕುಮಾರ್‌. ಎನ್‌ಟಿಪಿಎಸ್‌ ಟನಲ…ನಲ್ಲಿ ಕೆಸರು ತೆರವು ಕಾರ್ಯಾಚರಣೆ ಕುರಿತು ಅವರುಮಾತಾಡಿದ್ದಾರೆ.

ಪ್ರಶ್ನೆ: ಇವತ್ತು ಏನು ಕಾರ್ಯಾಚರಣೆ?

ಇಂದು ಒಳಗಡೆ ಕೆಸರನ್ನು ಹೊರತೆಗೆಯಲಾಗುತ್ತಿದೆ. ಇವತ್ತು 95 ಮೀಟರ್‌ ಒಳಗಡೆ ಹೋಗಿ ಕೆಸರು ತೆರವು ಮಾಡಿದ್ದೇವೆ. ನಮಗೆ ಸವಾಲಿನ ಕೆಲಸ ಅಂದ್ರೆ ಕೆಸರು ಹೊರಗಡೆ ತೆಗೆಯುತ್ತಿದ್ದಂತೆ ಒಳಗಡೆಯಿಂದ ಜಾಸ್ತಿ ಬರ್ತಾ ಇದೆ. ನಡೆದುಕೊಂಡು ಯಾರು ಒಳಗಡೆ ಹೋಗಲು ಆಗುತ್ತಿಲ್ಲ.

ಪ್ರಶ್ನೆ: ಬರೀ ಯಂತ್ರಗಳ ಬಳಕೆ ಏಕೆ?

ಬರೀ ಯಂತ್ರಗಳನ್ನು ಮಾತ್ರ ಬಳಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಯಾಕೆಂದರೆ ನಾವು ಯಾರನ್ನಾದರೂ ಒಳಗೆ ಕಳುಹಿಸಿ ರಿಸ್ಕ್‌ ತೆಗೆದುಕೊಳ್ಳಲು ಸಾಧ್ಯವಿಲ್ಲ. ರಕ್ಷಣಾ ಸಿಬ್ಬಂದಿಯೇ ಕೆಸರೊಳಗೆ ಒಳಗೆ ಸಿಕ್ಕಿ ಹಾಕಿಕೊಂಡರೇ ತೆರವು ಮಾಡೋದು ಕಷ್ಟವಾಗುತ್ತೆ.

ಪ್ರಶ್ನೆ: ಇನ್ನು ಎಷ್ಟು ಜನ ನಾಪತ್ತೆ?

ಇನ್ನೂರಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಆಂಧ್ರಪ್ರದೇಶದ, ಉತ್ತರಾಖಂಡ್‌, ಹಿಮಾಚಲಪ್ರದೇಶ, ತೆಲಂಗಾಣ, ಯುಪಿ, ಗುಜರಾತ್‌ನಿಂದ ಬಂದು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅವರು ಈಗ ನಾಪತ್ತೆಯಾಗಿದ್ದಾರೆ. ಕರ್ನಾಟಕದವರ ಬಗ್ಗೆ ಮಾಹಿತಿ ಇಲ್ಲ.

Follow Us:
Download App:
  • android
  • ios