ಭಾರತ ತ್ರೇತಾಯುಗ ಪ್ರವೇಶ ಮಾಡಿದಂತಿದೆ; ರಾಮಮಂದಿರದ ಶಂಕುಸ್ಥಾಪನೆ ಭಾವನಾತ್ಮಕ ಕ್ಷಣ: ಯೋಗಿ ಆದಿತ್ಯನಾಥ್‌

ಇಡೀ ದೇಶವೇ ‘ರಾಮಮಯ’ ಆಗಿಬಿಟ್ಟಿದೆ. ನಾವು ತ್ರೇತಾಯುಗವನ್ನು ಪ್ರವೇಶಿಸಿದಂತಿದೆ’ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಹೇಳಿದರು.

it appears we have appeared in treta yug yogi adityanath after ram temple ash

ಅಯೋಧ್ಯೆ (ಜನವರಿ 23, 2024): ‘ಭಾರತವು ’ತ್ರೇತಾ ಯುಗ’ವನ್ನು ಪ್ರವೇಶಿಸಿದೆ’ ಎಂದು ರಾಮನ ಪ್ರತಿಷ್ಠಾಪನೆಯ ಕ್ಷಣವನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಣ್ಣಿಸಿದ್ದಾರೆ. ಪ್ರತಿಷ್ಠಾಪನೆ ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಯೋಗಿ ಅವರು, ‘ಅಯೋಧ್ಯೆಯಲ್ಲಿ ರಾಮಮಂದಿರದ ಶಂಕುಸ್ಥಾಪನೆಯು ಭಾವನಾತ್ಮಕ ಕ್ಷಣವಾಗಿದೆ. ಇದು 500 ವರ್ಷಗಳ ಕಾಯುವಿಕೆಯ ನಂತರ ಬಂದ ಕ್ಷಣವಾಗಿದೆ’ ಎಂದರು.

‘ನನ್ನ ಹೃದಯದಲ್ಲಿ ವ್ಯಕ್ತಪಡಿಸಲು ಪದಗಳಿಲ್ಲದ ಕೆಲವು ಭಾವನೆಗಳಿವೆ. ಪ್ರತಿಯೊಬ್ಬರೂ ಭಾವನಾತ್ಮಕವಾಗಿದ್ದಾರೆ ಮತ್ತು ಸಂತೋಷದಿಂದಿದ್ದಾರೆ. ಈ ಐತಿಹಾಸಿಕ ಕ್ಷಣದಲ್ಲಿ, ದೇಶದ ಪ್ರತಿಯೊಂದು ನಗರ ಮತ್ತು ಹಳ್ಳಿಗಳು ಅಯೋಧ್ಯೆಯಾಗಿ ಮಾರ್ಪಟ್ಟಿವೆ ಮತ್ತು ಪ್ರತಿ ಹಾದಿಯು ರಾಮ ಜನ್ಮಭೂಮಿಯತ್ತ ಸಾಗುತ್ತಿದೆ. ಇಡೀ ದೇಶವೇ ‘ರಾಮಮಯ’ ಆಗಿಬಿಟ್ಟಿದೆ. ನಾವು ತ್ರೇತಾಯುಗವನ್ನು ಪ್ರವೇಶಿಸಿದಂತಿದೆ’ ಎಂದು ಹೇಳಿದರು.

ಇದನ್ನು ಓದಿ: ಭೂಮಿಯ ಮೇಲಿನ ಅತ್ಯಂತ ಅದೃಷ್ಟಶಾಲಿ ವ್ಯಕ್ತಿ ನಾನು: ಅರುಣ್‌ ಯೋಗಿರಾಜ್

‘ಯಾವ ಸ್ಥಳದಲ್ಲಿ ರಾಮನ ಪ್ರತಿಷ್ಠಾಪನೆ ಆಗಬೇಕಿತ್ತೋ ಅದೇ ಸ್ಥಳದಲ್ಲಿ ಆಗಿದೆ. ಮಂದಿರ್ ವಹೀ ಬನಾಯೇಂಗೇ ಎಂಬ ಉದ್ಘೋಷ ಸಾಕಾರವಾಗಿದೆ’ ಎಂದು ಭಾವುಕರಾಗಿ ನುಡಿದರು.

ಇದನ್ನು ಓದಿ: ರಾಮ ಬಂದಾಗಿದೆ, ಇನ್ನು ಎಲ್ಲ ವಿವಾದಗಳಿಗೂ ಅಂತ್ಯ ಹಾಡಿ; ನವಭಾರತ ಉದಯವಾಯ್ತು: ಮೋಹನ್‌ ಭಾಗವತ್‌

Latest Videos
Follow Us:
Download App:
  • android
  • ios