ಮ್ಯಾಪ್‌ ಇಂಡಿಯಾ ಜತೆ ಇಸ್ರೋ ಒಪ್ಪಂದ| ಗೂಗಲ್‌ ಮ್ಯಾಪ್‌/ಅತ್‌ರ್‍ಗೆ ಸಡ್ಡು ಹೊಡೆಯಲು ದೇಶೀ ನಕ್ಷೆ

ಬೆಂಗಳೂರು(ಫೆ.13): ಅತ್ಯುತ್ತಮ ಡಿಜಿಟಲ್‌ ನಕ್ಷೆ ಸೇವೆ ಒದಗಿಸುವ ಮಹತ್ತರ ಉದ್ದೇಶದೊಂದಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದೇ ಮೊದಲ ಬಾರಿಗೆ ಡಿಜಿಟಲ್‌ ಮ್ಯಾಪಿಂಗ್‌ ಸೇವೆ ನೀಡುವ ಖಾಸಗಿ ಸಂಸ್ಥೆ ಮ್ಯಾಪ್‌ಇಂಡಿಯಾದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಗೂಗಲ್‌ ಅತ್‌ರ್‍ ಹಾಗೂ ಗೂಗಲ್‌ ಮ್ಯಾಪ್‌ಗೆ ಸಡ್ಡು ಹೊಡೆಯಲು ಮುಂದಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎರಡೂ ಸಂಸ್ಥೆಗಳೂ ಒಗ್ಗೂಡಿ ಉಪಗ್ರಹ ಚಿತ್ರ ಮತ್ತು ಭೂ ಅವಲೋಕನಾ ಅಂಕಿಅಂಶಗಳ ಆಧಾರದಲ್ಲಿ ನಿಖರ, ದೇಶೀಯ ನಕ್ಷೆ ಸೇವೆಯನ್ನು ನೀಡಲಿವೆ. ಈ ಮೂಲಕ ನಕ್ಷೆ ಸೇವೆಗೆ ವಿದೇಶಿ ಸಂಸ್ಥೆಗಳಿಗೆ ಅವಲಂಬಿತರಾಗುವುದಕ್ಕೆ ಪರಿಹಾರವಾಗಿ ಇಸ್ರೋ ಈ ಮಹತ್ವದ ಒಪ್ಪಂದಕ್ಕೆ ಮುಂದಾಗಿದೆ.

‘ಆತ್ಮನಿರ್ಭರ ಭಾರತದ ಪರಿಕಲ್ಪನೆ ಹಿನ್ನೆಲೆಯಲ್ಲಿ ದೇಶೀಯ ಮ್ಯಾಪಿಂಗ್‌ ಸೇವೆ ನೀಡುವ ಮಹತ್ವದ ಹೆಜ್ಜೆ ಇಡಲಾಗಿದೆ’ ಎಂದು ಮ್ಯಾಪ್‌ ಇಂಡಿಯಾ ಸಿಇಒ, ನಿರ್ದೇಶಕ ರೋಹನ್‌ ವರ್ಮಾ ತಿಳಿಸಿದ್ದಾರೆ.